







ಪುತ್ತೂರು: ಶಾಂತಿಗೋಡು ಗ್ರಾಮದ ಕಕ್ವೆ ನಿವಾಸಿ ಅಚಲಾ ಜಿ. ಅವರಿಗೆ ಎನ್ಐಟಿಕೆ ಸುರತ್ಕಲ್ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.



ಇವರು ಪ್ರೊ. ಯು. ಶ್ರೀಪತಿ ಆಚಾರ್ಯ ಮತ್ತು ಡಾ. ಪತಿಪಾಟಿ ಶ್ರೀಹರಿ ಅವರ ಮಾರ್ಗದರ್ಶನದಲ್ಲಿ “Design Performance assessment and FPGA implementation of channel codes for improving information integrity in NAND Flash memory devices” ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದಾರೆ.



MHRD ವತಿಯಿಂದ ಶಿಷ್ಯವೇತನ ಪಡೆದು ಸಂಶೋಧನೆ ನಡೆಸಿರುವ ಅಚಲಾ ಜಿ. ಅವರು, 1 ಭಾರತೀಯ ಪೇಟೆಂಟ್, 3 ಅಂತಾರಾಷ್ಟ್ರೀಯ ಜರ್ನಲ್, 3 ಕಾನ್ಫರೆನ್ಸ್ ಪೇಪರ್ ಹಾಗೂ 5ಕ್ಕೂ ಹೆಚ್ಚು ಕಾನ್ಫರೆನ್ಸ್ ಪೇಪರ್ಗಳನ್ನು ಪ್ರಕಟಿಸಿದ್ದಾರೆ.
ಅಚಲಾ ಜಿ. ಅವರು ಶಾಂತಿಗೋಡು ಗ್ರಾಮದ ಸಾಫ್ಟ್ವೇರ್ ಇಂಜಿನಿಯರ್ ಚೇತನ್ ಬಿ.ಕೆ. ಅವರ ಪತ್ನಿ ಹಾಗೂ ನಿವೃತ್ತ ಮುಖ್ಯಗುರು ಲೀಲಾವತಿ ಎ ಮತ್ತು ನಿವೃತ್ತ ರೇಂಜರ್ ಚಂದ್ರಹಾಸ ಜಿ. ಅವರ ಪುತ್ರಿ. ಸದ್ಯ Sandisk Design Centerನಲ್ಲಿ ಸ್ಟಾಫ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.










