







ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ ಇದರ ವಾರ್ಷಿಕೋತ್ಸವ – ಸನ್ಮಾನ ಸಮಾರಂಭ ಹಾಗೂ ಯಕ್ಷಗಾನ ಬಯಲಾಟವು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಪತ್ತನಾಜೆ ಜಾತ್ರೆಯ ಸುಸಂದರ್ಭದಲ್ಲಿ ಮೇ 25 ರಂದು ಜರಗಲಿದೆ.


ಬೆಳಿಗ್ಗೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಬ್ಯಾಂಕ್ ನಿವೃತ್ತ ಮುಖ್ಯ ಪ್ರಬಂಧಕರು, ಹವ್ಯಾಸಿ ಯಕ್ಷಗಾನ ಕಲಾವಿದ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ನಾಟೆಕಲ್ಲು ರತ್ನಾ ಕ್ಲಿನಿಕ್ ನ ಡಾ. ಮೋಹನದಾಸ್ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ. ಕಾಲೇಜಿನ ಆಡಳಿತಾಧಿಕಾರಿ ಎಚ್. ಶ್ರೀಪತಿ ರಾವ್, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಮುಖ್ಯಗುರು ಶ್ರೀಮತಿ ಪುಷ್ಪಾವತಿ ಎಸ್., ಬೆಟ್ಟಂಪಾಡಿ ಗೋಕುಲ ಕನ್‌ಸ್ಟ್ರಕ್ಷನ್ಸ್ ನ ಸಿವಿಲ್ ಇಂಜಿನಿಯರ್ ನವೀನ್ ಮಣಿಯಾಣಿ ತಲೆಪ್ಪಾಡಿ, ಪ್ರಗತಿಪರ ಕೃಷಿಕ ಕೃಷ್ಣಪ್ರಸಾದ್ ರೈ ಡೆಮ್ಮಂಗರ ಭಾಗವಹಿಸಲಿದ್ದಾರೆ.



ನುಡಿನಮನ – ಮರಣೋತ್ತರ ಸನ್ಮಾನ
ಇದೇ ವೇಳೆ ಸಂಘದ ಮಾಜಿ ಗೌರವಾಧ್ಯಕ್ಷರೂ, ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಕೀರ್ತಿಶೇಷ ಬಿ. ವೆಂಕಟ್ರಾವ್ ರವರ ನುಡಿನಮನ ಹಾಗೂ ಸಂಘದ ಮಾಜಿ ಕಾರ್ಯದರ್ಶಿ, ಯಕ್ಷಗಾನ ಕಲಾವಿದರಾಗಿದ್ದ ಕೀರ್ತಿಶೇಷ ಪ್ರದೀಪ್ ಕುಮಾರ್ ರೈ ಕೇಕನಾಜೆ ರವರಿಗೆ ಮರಣೋತ್ತರ ಸನ್ಮಾನ ನಡೆಯಲಿದೆ.
ಯಕ್ಷಗಾನ ಬಯಲಾಟ
ಅಪರಾಹ್ನ ಸಂಘದ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀಕೃಷ್ಣ ಪರಂಧಾಮ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.










