ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಫಾರ್ಮಾಸಿಟಿಕಲ್ ಕೆಮಿಸ್ಟ್ರಿ’ ಕೋರ್ಸ್ ಸಮಾರೋಪ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ರಸಾಯನಶಾಸ್ತ್ರ ವಿಭಾಗವು ಸೋಮವಾರ ಆಯೋಜಿಸಿದ್ದ ‘ಫಾರ್ಮಾಸಿಟಿಕಲ್ ಕೆಮಿಸ್ಟ್ರಿ’ ಕೋರ್ಸ್‌ನ ಸಮಾರೋಪ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ರೆ.ಡಾ.ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯಮೋನ್ಮುಖ ಶಿಕ್ಷಣ ಮತ್ತು ಪ್ರಾಯೋಗಿಕ ಅನುಭವದ ಮಹತ್ವವನ್ನು ತಿಳಿಸಿದರು.ಕೋರ್ಸ್‌ನ ಅನುಭವ ಕುರಿತು ವಿದ್ಯಾರ್ಥಿನಿ ಜೆನಿಷಾ ಅವರು ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಕೋರ್ಸ್ ಸಂಯೋಜಕ ಡಾ.ಎಡ್ವಿನ್ ಎಸ್. ಡಿ’ಸೋಜ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಮಾಲಿನಿ ಕೆ. ವಂದನಾರ್ಪಣೆ ಸಲ್ಲಿಸಿದರು. ಅಪರ್ಣಾ ಮತ್ತು ತಂಡ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಶ್ರೀವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here