ಪುತ್ತೂರಿನ ಗಿರಿಜಾ ಕಲ್ಯಾಣದ ಆಮಂತ್ರಣ ಶ್ರೀ ಕ್ಷೇತ್ರ ಶರವೂರಿನಲ್ಲಿ ಬಿಡುಗಡೆ

0

ಆಲಂಕಾರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಹಾಗೂ ಗಿರಿಜಾ ಕಲ್ಯಾಣೋತ್ಸವ ಸಮಿತಿ ಪುತ್ತೂರು ಸಾರಥ್ಯದಲ್ಲಿ ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ನಡೆಯಲಿರುವ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಕೆ., ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಪ್ರಮುಖರಾದ ರಾಮಚಂದ್ರ ಭಟ್ ಅತ್ರಿವನ, ವೆಂಕಟರಮಣ ಕುತ್ಯಾಡಿ, ರವೀಂದ್ರದಾಸ್ ಪೂಂಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here