ಕೆಯ್ಯೂರಿನ ಯುವತಿ ಮುಳ್ಳೇರಿಯದಲ್ಲಿ ಆತ್ಮಹತ್ಯೆ

0

ಪುತ್ತೂರು:ಕೆಯ್ಯೂರು ಸಣಂಗಳದ ಯುವ ಗೃಹಿಣಿಯೊಬ್ಬರು ಬೆಳ್ಳೂರು ಪಳ್ಳಪ್ಪಾಡಿಯಲ್ಲಿ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ.


ಪಳ್ಳಪ್ಪಾಡಿ ಜೈನುದ್ದೀನ್ ಎಂಬವರ ಪತ್ನಿ ಸೆರೀನಾ (27ವ.)ಎಂಬವರು ಗಂಡನ ಮನೆ ಸಮೀಪದ ಶೆಡ್ಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಕೆಯ್ಯೂರು ಗ್ರಾಮದ ಮಾಡಾವು ಸಣಂಗಳ ‘ಎಸ್‌ಎಸ್ ಮಂಝಿಲ್’ ದಿ.ಬಡುವನ್ ಕುಂಞಿ-ನಫೀಸಾ ದಂಪತಿ ಪುತ್ರಿ ಸೆರೀನಾ ಅವರನ್ನು 2022ರ ಮೇ29ರಂದು ಮುಳ್ಳೇರಿಯಾ ಸಮೀಪದ ಪಳ್ಳಪ್ಪಾಡಿ ನಿವಾಸಿ ಜೈನುದ್ದೀನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಆಕೆಗೆ ಪತಿ ಮನೆಯಲ್ಲಿ ಮಾನಸಿಕ,ದೈಹಿಕ ಕಿರುಕುಳ ನೀಡಲಾಗುತ್ತಿತ್ತು.ಅತ್ತೆಯ ಕಿರುಕುಳ ತಾಳಲಾಗದೆ ಸೆರೀನಾ ಅವರು ಹಲವು ಬಾರಿ ತವರಿಗೆ ಬಂದಿದ್ದರು.ಆ ಬಳಿಕ ಸಂಬಂಧಿಕರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆಸಿ ಪತಿ ಮನೆಗೆ ಕಳುಹಿಸಲಾಗಿತ್ತಾದರೂ ಕಿರುಕುಳ ಮುಂದುವರಿದಿತ್ತು ಎಂದು ಮೃತರ ಸಹೋದರ ಅಬ್ದುಲ್ ರೆಹಮಾನ್ ಆರೋಪಿಸಿದ್ದಾರೆ.ಮೇ 27ರಂದು ಸೆರೀನಾ ಅವರು ಅಕ್ಕನಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು.ಸೆರೆನಾ ಸಾವಿನಲ್ಲಿ ಅನುಮಾನವಿದ್ದು ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಮೃತರ ಸಹೋದರ ಅಬ್ದುಲ್ ರಹಿಮಾನ್ ಅವರು ಆಗ್ರಹಿಸಿದ್ದಾರೆ.ಘಟನೆಯ ಕುರಿತು ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಪತಿ,ತಾಯಿ,ಅಕ್ಕ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.ಮೃತದೇಹವನ್ನು ಮಾಡಾವು ಮಸೀದಿಯ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.

LEAVE A REPLY

Please enter your comment!
Please enter your name here