







ಪುತ್ತೂರು: ಕಳೆದ 15 ವರ್ಷಗಳಿಂದ ಪುತ್ತೂರಿನಲ್ಲಿ ಕಂಪ್ಯೂಟರ್ ಹಾಗೂ ಸಿಸಿಟಿವಿ ಸೇಲ್ಸ್ ಮತ್ತು ಸರ್ವಿಸ್‌ನಲ್ಲಿ ನಿರಂತರ ಸೇವೆಯೊಂದಿಗೆ ಅಸಂಖ್ಯಾತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಶಿವಂ ಕಂಪ್ಯೂಟರ್‍ಸ್ ಮತ್ತು ಸೆಕ್ಯುರಿಟಿ ಸಿಸ್ಟಮ್ಸ್ ಸಂಸ್ಥೆಯ ಎರಡನೇ ಮಳಿಗೆ ಉಪ್ಪಿನಂಗಡಿಯಲ್ಲಿ ಶುಭಾರಂಭಗೊಳ್ಳಲಿದೆ. ಗ್ರಾಹಕರ ಅನುಕೂಲಕ್ಕಾಗಿ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿರುವ ಸಿಟಿ ಮಾರ್ಕೆಟ್ ಕಟ್ಟಡದ ನೆಲಮಹಡಿಯಲ್ಲಿ ಮೇ.29ರಂದು ಬೆಳಿಗ್ಗೆ 10.15ಕ್ಕೆ ನೂತನ ಮಳಿಗೆ ಶುಭಾರಂಭಗೊಳ್ಳಲಿದೆ.


ಉದ್ಘಾಟನಾ ಸಮಾರಂಭ:
ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈಯವರು ನವೀಕರಣಗೊಂಡ ಕಂಪ್ಯೂಟರ್ ಕೌಂಟರ್ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಪುತ್ತೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ಹಾಗೂ ಸಿಟಿ ಮಾರ್ಕೆಟ್ ಮಾಲಕ ಹಾಜಿ ವಿಟ್ಲ ಮೊಯಿಲಾರ್ ಉಮ್ಮರ್‌ರವರು ಭಾಗವಹಿಸಲಿದ್ದಾರೆ.



ಗ್ರಾಹಕರಿಗೆ ಅನುಕೂಲತೆಗೆ ಉಪ್ಪಿನಂಗಡಿಯಲ್ಲಿ ಮಳಿಗೆ ತೆರೆಯಲಾಗುತ್ತಿದ್ದು ನೂತನ ಮಳಿಗೆಯಲ್ಲಿ ಬ್ರ್ಯಾಂಡೆಡ್ ಕಂಪ್ಯೂಟರ್‌ಗಳು, ನವೀಕರಿಸಲಾದ ಕಂಪ್ಯೂಟರ್‌ಗಳು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಸರ್ವಿಸ್ ಸೌಲಭ್ಯಗಳು ಲಭ್ಯವಿವೆ. ಸಮಾರಂಭಕ್ಕೆ ಸಾರ್ವಜನಿಕರು, ಹಿತೈಷಿಗಳು ಹಾಗೂ ಗ್ರಾಹಕರು ಭಾಗವಹಿಸಬೇಕೆಂದು ಸಂಸ್ಥೆಯ ಮಾಲಕ ಸುದರ್ಶನ್ ರೈ ನೀರ್ಪಾಡಿ ತಿಳಿಸಿದ್ದಾರೆ.










