







ವಿಟ್ಲ: ನಿಯಂತ್ರಣ ಕಳೆದುಕೊಂಡ ಸರಕಾರಿ ಬಸ್ಸೊಂದು ರಸ್ತೆಬದಿಗೆ ಸಂಚರಿಸಿದ ಘಟನೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ನಡೆದಿದೆ.


ಉಕ್ಕುಡ ಅಪ್ಪೆರಿಪಾದೆ ಎಂಬಲ್ಲಿ ಈ ಘಟನೆ ನಡೆದಿದ್ದು. ಬೆಳಗಿನ ಸಮಯವಾದುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮತ್ತು ಪ್ರಯಾಣಿಕರಿಂದ ಬಸ್ಸು ಸಂಪೂರ್ಣವಾಗಿ ತುಂಬಿಕೊಂಡಿತ್ತು. ಬಸ್ಸು ಚಲಿಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತಗ್ಗಿಗೆ ಇಳಿದಿದೆ. ಬಸ್ಸಿನ ಮುಂಭಾಗದ ಚಕ್ರಗಳು ರಸ್ತೆಯಿಂದ ಸಂಪೂರ್ಣವಾಗಿ ಕೆಳಗಿಳಿದು ಮಣ್ಣಿನಲ್ಲಿ ಸಿಲುಕಿಕೊಂಡಿತ್ತು.



ಘಟನೆಯಿಂದ ಚಾಲಕ ಹಾಗೂ ಕೆಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.










