







ಪುತ್ತೂರು: ನರಿಮೊಗರು ಬರೆಕೋಲಾಡಿ ಕೇಪು ನಾಯ್ಕರವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ನರಿಮೊಗರು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು. ನಿವೃತ್ತ ಅಬಕಾರಿ ಉಪನಿರೀಕ್ಷಕ ಮಹಾಲಿಂಗ ನಾಯ್ಕ ಹಾಗೂ ಸುಂದರ ನಾಯ್ಕರವರು ನುಡಿನಮನ ಸಲ್ಲಿಸಿದರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಸೇರಿದಂತೆ ಮರಾಟಿ ಸೇವಾ ಸಮಾಜದ ಸದಸ್ಯರು, ಮೃತರ ಪತ್ನಿ ರತ್ನ, ಮಕ್ಕಳಾದ ಜಯ, ಶಿವಪ್ಪ, ಹರೀಶ, ಅನಿತಾ, ಸೊಸೆಯಂದಿರಾದ ಶಶಿಕಲಾ, ಆಶಾ, ಶ್ವೇತಾ, ಅಳಿಯ ನಾರಾಯಣ, ಮೊಮ್ಮಕ್ಕಳಾದ ಚಿಂತನ್, ಚಂದನ್, ಆದಿಶ್, ಪೂಜಾಶ್ರೀ ವನ್ಯಶ್ರೀ, ಚರಣ್, ಶ್ರವಣ್ ಹಾಗೂ ಕುಟುಂಬಸ್ಥರು, ಗಣ್ಯರು ಉಪಸ್ಥಿತರಿದ್ದರು.












