ಅರಿಯಡ್ಕ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಎಸ್.ಐ.ಆರ್ ಮಾಹಿತಿ ಕೇಂದ್ರ ಉದ್ಘಾಟನೆ

0

ಪುತ್ತೂರು: ಅರಿಯಡ್ಕ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಎಸ್.ಐ.ಆರ್ ಮಾಹಿತಿ ಕೇಂದ್ರ ಕೌಡಿಚ್ಚಾರ್‌ನಲ್ಲಿರುವ ಎಸ್.ಎಂ ಕಾಂಪ್ಲೆಕ್ಸ್‌ನಲ್ಲಿ ಜು.12ರಂದು ಉದ್ಘಾಟನೆಗೊಂಡಿತು.

ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ಅರಿಯಡ್ಕ ವಲಯ ಕಾಂಗ್ರೆಸ್ ಎಸ್.ಐ.ಆರ್ ಮಾಹಿತಿದಾರರಾದ ಬಿ.ಎಲ್.ಎ ವಿಠಲ ನಾಯ್ಕ, ಬಿ.ಎಲ್.ಎ ಹನೀಫ್ ಪಟ್ಲಕಾನ, ಬಿ.ಎಲ್.ಎ ಶಿವರಾಮ ಮಣಿಯಾಣಿ ಎಸ್.ಐ.ಆರ್ ಬಗ್ಗೆ ಮಾಹಿತಿ ನೀಡಿದರು. ಬೂತ್ ಅಧ್ಯಕ್ಷರುಗಳಾದ ಚಂದ್ರಶೇಖರ ಮಣಿಯಾಣಿ, ಬಶೀರ್ ಕೌಡಿಚ್ಚಾರ್, ಕಾಂಗ್ರೆಸ್ ಮುಖಂಡರಾದ ಲೋಕೇಶ್ ಶೆಟ್ಟಿ ಪಾಪೆಮಜಲು, ಸೀತರಾಮ ರೈ ಹೊಸಗದ್ದೆ, ಯೂತ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯೂಸುಫ್ ಅಲ್ಫಾಝ್, ಮುಖಂಡ ಪ್ರಜ್ವಲ್ ಸಿಆರ್‌ಸಿ, ಯೂಸುಫ್ ರಾಝ್, ಅಭಿ ಕುರಿಂಜ, ರಮೇಶ್, ಶೀನ ಮುಂಡಕೊಚ್ಚಿ ಉಪಸ್ಥಿತರಿದ್ದರು. ಬಶೀರ್ ಕೌಡಿಚ್ಚಾರ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here