ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು : ಅನುದಾನ ಶೀಘ್ರ ಬಿಡುಗಡೆಗೆ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಸರಕಾರಿ ವೈದ್ಯಕೀಯ ಮಹಾ ವಿದ್ಯಾಲಯ (ಮೆಡಿಕಲ್ ಕಾಲೇಜು) ವಿಚಾರಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳು ಪ್ರಾರಂಭಗೊಂಡಿದ್ದು ಸರಕಾರ ನಿಗದಿಪಡಿಸಿದ ಅನುದಾನವನ್ನು ಶೀಘ್ರ ಮಂಜೂರುಗೊಳಿಸಿ ಸಹಕಾರ ನೀಡುವಂತೆ ಶಾಸಕ ಅಶೋಕ್ ರೈ ಅವರು ವೈದಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮುಹ್ಸಿನ್,ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ವಿಶಾಲ್ ಆರ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಕಾರ್ಯದರ್ಶಿ ಶೋಭಾ ಅವರುಗಳ ಜೊತೆ ಮಾತುಕತೆ ನಡೆಸಿ ಮನವಿ ಮಾಡಿದ್ದಾರೆ.


ಬುಧವಾರ ಮೂವರು ಪ್ರಮುಖ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ದ ಕ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾದ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಸರಕಾರ ಅನುಮೋದನೆ ನೀಡಿದ್ದು ಕಾಲೇಜು ಪ್ರಾರಂಭಕ್ಕೆ ಅನುಮತಿಯನ್ನು ನೀಡಿದೆ. ಈಗಾಗಲೇ ಒಂದು ಹಂತದ ಕಾಮಗಾರಿ ನಿಗದಿತ ಜಾಗದಲ್ಲಿ ಪ್ರಾರಂಭಗೊಂಡಿದೆ. 2027ರಲ್ಲಿ ಕಾಲೇಜು ಪ್ರಾರಂಭಕ್ಕೆ ಈಗಾಗಲೇ ಸಿದ್ದತೆಗಳು ನಡೆಯುತ್ತಿದ್ದು ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಮಾತುಕತೆ ನಡೆದಿದೆ. ಕಾಲೇಜು ಪ್ರಾರಂಭವಾಗುವ ವೇಳೆ ಕಟ್ಟಡದ ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಬೇಕಿದ್ದು ಇದಕ್ಕೆ ಸರಕಾರ ನಿಗದಿಪಡಿಸಿದ ಅನುದಾನ ಶೀಘ್ರ ಮಂಜೂರುಗೊಳ್ಳಬೇಕಿದೆ. ಅನುದಾನ ಮಂಜೂರುಗೊಂಡ ಬಳಿಕ ಮುಖ್ಯಮಂತ್ರಿ ಪುತ್ತೂರು ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನಡೆಸಲಿದ್ದಾರೆ. ಈಗಾಗಲೇ ಕಾಲೇಜಿಗೆ ಸಂಬಂಧಪಟ್ಟ ಕಡತಗಳು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕವೇ ಸರಕಾರಕ್ಕೆ ತಲುಪಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯ ಮೂಲಕ ಕಡತಗಳು ಶೀಘ್ರವಿಲೇವಾರಿಯಾಗುವುದರ ಜೊತೆಗೆ ಅನುದಾನದ ಶೀಘ್ರ ಬಿಡುಗಡೆಗೆ ಸಹಕಾರ ನೀಡುವಂತೆ ಶಾಸಕರು ಮನವಿ ಸಲ್ಲಿಸಿದ್ದಾರೆ.

ಪುತ್ತೂರಿನಲ್ಲಿ ಪ್ರಾರಂಭವಾಗಲಿರುವ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಕುರಿತು ಈಗಾಗಲೇ ಬಹುಹಂತದ ಮಾತುಕತೆಗಳು ನಡೆದಿದೆ. ಇನ್ನು ಸರಕಾರದಿಂದ ಅನುಮೋದನೆಯ ಜೊತೆಗೇ ಅನುದಾನವೂ ಬಿಡುಗಡೆಯಾಗಬೇಕಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಾಲೇಜಿಗೆ ಶಿಲಾನ್ಯಾಸ ಪ್ರಕ್ರಿಯೆ ನಡೆಯಲಿದೆ. ಸಮರೋಪಾದಿಯಲ್ಲಿ ಈ ಕಾರ್ಯಗಳು ನಡೆಯಬೇಕೆಂಬ ಉದ್ದೇಶದಿಂದ ಸಚಿವರು ಹಾಗೂ ಸಂಬಂದಪಟ್ಟ ಇಲಾಖೆಯ ಪ್ರಮುಖ ಅಽಕಾರಿಗಳ ಜೊತೆ ಮಾತುಕತೆ ನಡೆಸಿ ಮನವಿ ಮಾಡಿದ್ದೇನೆ
ಅಶೋಕ್ ರೈ, ಶಾಸಕರು

LEAVE A REPLY

Please enter your comment!
Please enter your name here