







ಪುತ್ತೂರು: ವೈದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರ ನಡೆಸಿದ 2026ರ ನೀಟ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಮಂಗಳಾಮೃತ ಕೆ. ಆರ್. (ಸುಳ್ಯ ತಾಲೂಕಿನ ಜಾಲ್ಸೂರಿನ ರವಿರಾಜ್ ಕೆ. ಹಾಗೂ ವಾಣಿಕುಮಾರಿ ಎ. ದಂಪತಿ ಪುತ್ರಿ) 533 ಅಂಕಗಳೊಂದಿಗೆ 97.35 ಪಸೆಂಟೈಲ್ ಪಡೆದುಕೊಂಡಿರುತ್ತಾರೆ.


ಅದಿತಿ ಯು. (ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ. ಡಿ. ದಂಪತಿಗಳ ಪುತ್ರಿ) 531 ಅಂಕಗಳೊಂದಿಗೆ 97.25 ಪರ್ಸೆಂಟೈಲ್, ಧನ್ವಿ ಆರ್. ಬಿ. (ಉರಿಮಜಲಿನ ರಾಘವ ಗೌಡ ಹಾಗೂ ಭಾರತಿ ದಂಪತಿ ಪುತ್ರಿ) 519 ಅಂಕಗಳೊಂದಿಗೆ 96.61 ಪರ್ಸೆಂಟೈಲ್, ಮಾನ್ಯತಾ (ಬಂಟ್ವಾಳದ ಕಲ್ಯಾರ್‌ನ ಯಶವಂತ ಪೂಜಾರಿ ಹಾಗೂ ಸರೋಜಿನಿ ಕೆ. ದಂಪತಿ ಪುತ್ರಿ) 510 ಅಂಕಗಳೊಂದಿಗೆ 96.09 ಪಸೆಂಟೈಲ್, ನಿಶಾಂತ್ ಕೆ. ವಿ. (ಬೆಂಗಳೂರಿನ ವೀರೇಂದ್ರ ಕೆ. ಆರ್. ಹಾಗೂ ಕುಮುದಿನಿ ವೈ. ಜೆ. ದಂಪತಿ ಪುತ್ರ) 460 ಅಂಕಗಳೊಂದಿಗೆ 92.46 ಪರ್ಸೆಂಟೈಲ್, ಅಜೇಯರಾಮ್ (ಉರಿಮಜಲಿನ ಕೇಶವಮೂರ್ತಿ ಸಿ. ಹಾಗೂ ಗೀತಾಲಕ್ಷ್ಮೀ ದಂಪತಿ ಪುತ್ರ) 457 ಅಂಕಗಳೊಂದಿಗೆ 92.21 ಪಸೆಂಟೈಲ್, ತನ್ಮಯಿ ವಾಗ್ಲೆ ಪಿ. (ಪುತ್ತೂರಿನ ತೆಂಕಿಲದ ಸತೀಶ್ ವಾಗ್ಲೆ ಕೆ. ಹಾಗೂ ಪೂರ್ಣಿಮಾ ಎಸ್. ದಂಪತಿ ಪುತ್ರಿ) 446 ಅಂಕಗಳೊಂದಿಗೆ 91.22 ಪಸೆಂಟೈಲ್, ಸಪ್ತಮಿ ವೈ. ಪಿ. (ಮೈಸೂರಿನ ಹೂಟಗಳ್ಳಿಯ ಪೂಣಚ್ಚ ವೈ. ಪಿ. ಹಾಗೂ ಜಯಂತಿ ಕೆ. ಪಿ. ದಂಪತಿ ಪುತ್ರಿ) 432 ಅಂಕಗಳೊಂದಿಗೆ 89.86 ಪಸೆಂಟೈಲ್, ವಿದ್ಯಾಲಕ್ಷ್ಮೀ ಎಸ್. ಜಿ. (ಬಂಟ್ವಾಳದ ಕರೋಪಾಡಿಯ ಎಸ್. ಗೋಪಾಲಕೃಷ್ಣ ಹಾಗೂ ಅನಿತಾಎಸ್. ದಂಪತಿ ಪುತ್ರಿ) 432 ಅಂಕಗಳೊಂದಿಗೆ 89.86 ಪಸೆಂಟೈಲ್, ಹೆಚ್. ಕೆ. ತರುಣೇಶ್ (ಹಾಸನದ ಹೆಚ್. ಡಿ. ಕೃಷ್ಣೇ ಗೌಡ ಹಾಗೂ ಹೆಚ್. ಎನ್. ಭಾರತಿ ದಂಪತಿ ಪುತ್ರ) 428 ಅಂಕಗಳೊಂದಿಗೆ 89.45 ಪಸೆಂಟೈಲ್, ಸಮನ್ವಿತಾ ಎಮ್. ಎಸ್. (ಪುತ್ತೂರು ತಾಲೂಕಿನ ಪೆಲಂಪಾಡಿಯ ಶಿವಪ್ರಸಾದ್ ಎಂ. ಹಾಗೂ ಪ್ರಸನ್ನ ಎಂ. ಎಸ್. ದಂಪತಿ ಪುತ್ರಿ) 421 ಅಂಕಗಳೊಂದಿಗೆ 88.72 ಪಸೆಂಟೈಲ್, ಹಿತೈಷಿ ಆಳ್ವ (ಹಾರಾಡಿಯ ಅಶ್ವಿನ್ ಬಿಎಚ್ ಹಾಗೂ ರಜನಿ ರೈ ಬಿ ದಂಪತಿ ಪುತ್ರಿ) 418 ಅಂಕಗಳು, ಟೀನಾ ಬಿ. ಎಮ್. (ಕೊಡಗಿನ ಮಂದಪ್ಪ ಬಿ. ಎ. ಹಾಗೂ ಸ್ವಾತಿ ಬಿ. ಎಮ್. ದಂಪತಿ ಪುತ್ರಿ) 418 ಅಂಕಗಳನ್ನು ಪಡೆದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.













