







ಪುತ್ತೂರು: ಕೃಷಿ ಇಲಾಖೆ ದ.ಕ.ಜಿಲ್ಲೆ, ದ.ಕ.ಜಿಲ್ಲಾ ಪಂಚಾಯತ್ ವತಿಯಿಂದ 2026-27ನೇ ಸಾಲಿನ ಆತ್ಮ ಯೋಜನೆಯಡಿ ದ.ಕ.ಜಿಲ್ಲೆಯಾದ್ಯಂತ “ಕಲಾ ಜಾಥಾ” ಕಾರ್ಯಕ್ರಮ ಹಮ್ಮಿಕೊಂಡಿದ್ದು ಜು.17ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಜಾಥಾ ನಡೆಯಿತು.


ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯ ಅರಿವು ಮೂಡಿಸುವ ಮೂಲಕ ಕಲಾ ಜಾಥಾ ಪ್ರದರ್ಶಿಸಲಾಯಿತು. ಯೋಜನೆಗಳಾದ ರೈತ ಸಂಪರ್ಕ ಕೇಂದ್ರ, ಬೆಳೆ ವಿಮೆ, ಬೆಳೆ ಸಮೀಕ್ಷೆ, ಕೃಷಿ ಪಂಡಿತ ಪ್ರಶಸ್ತಿ, ಮಣ್ಣು ಮತ್ತು ನೀರು ಸಂರಕ್ಷಣೆ, ಪಿ.ಎಮ್ ಕಿಸಾನ್, ಪಿಎಮ್ ಕೆಎಸ್ವೈ, ಹಾಗೂ ಇನ್ನಿತರ ಯೋಜನೆಗಳ ಕುರಿತು ಅರಿವು ಮೂಡಿಸಲಾಯಿತು.



ಪುತ್ತೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಟಿ.ಜಿ. ಚೆಲುವರಂಗಪ್ಪ, ಕೃಷಿ ಅಧಿಕಾರಿ ಯಶಸ್ ಮಂಜುನಾಥ್ ಮತ್ತು ಆತ್ಮ ಯೋಜನೆಯ ತಾಲೂಕು ತಾಂತ್ರಿಕ ಅಧಿಕಾರಿ ವರ್ಷಿತಾ ಭಾಗವಹಿಸಿದ್ದರು.










