







ಪುತ್ತೂರು: ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ಸೇವಾಕೇಂದ್ರ ಕಚೇರಿ ಹಾಗೂ ಪುತ್ತೂರು ಮತ್ತು ಕಡಬ ತಾಲೂಕು ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯ ತಜ್ಞ ವೈದ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.



ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಂತ ತಜ್ಞ ಡಾ. ರಮ್ಯಾ, ಚರ್ಮರೋಗ ತಜ್ಞ ಡಾ. ನವೀನ್ ಕುಮಾರ್. ವಿ ಮತ್ತು ಮಕ್ಕಳ ತಜ್ಞ ಡಾ. ಕೃಷ್ಣನಂದ. ಕೆ ಅವರನ್ನು ಸನ್ಮಾನಿಸಲಾಯಿತು. ಡಾ. ರಮ್ಯಾ ಅವರು ಪ್ರತಿ ತಿಂಗಳ ನಾಲ್ಕು ಶುಕ್ರವಾರಗಳಂದು ನಡೆಯುವ ಹಿರಿಯ ನಾಗರಿಕರ ಪ್ರಮಾಣ ಪತ್ರ ಶಿಬಿರದಲ್ಲಿ ಹಾಗೂ ಡಾ. ನವೀನ್ ಕುಮಾರ್. ವಿ ಮತ್ತು ಡಾ. ಕೃಷ್ಣನಂದ. ಕೆ ಅವರು ಪ್ರತಿ ತಿಂಗಳ 2ನೇ ಮತ್ತು 4ನೇ ಶುಕ್ರವಾರ ನಡೆಯುವ ವಿಕಲಚೇತನರ ಪ್ರಮಾಣ ಪತ್ರ ಶಿಬಿರದಲ್ಲಿ ಸಹಕಾರ ನೀಡುತ್ತಿರುವುದನ್ನು ಗುರುತಿಸಿ ಹೂಗುಚ್ಛ ನೀಡಿ ಗೌರವಿಸಲಾಯಿತು.




ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್, ನೆಕ್ಕಿಲಾಡಿ ಗ್ರಾ.ಪು.ಕಾರ್ಯಕರ್ತ ಸೇಸಪ್ಪ, ಬಜತ್ತೂರು ಗ್ರಾ.ಪು.ಕಾರ್ಯಕರ್ತ ಐಸಿಂತ್ ಪ್ರಜ್ವಲ್ ವೇಗಸ್, ಹಿರೇಬಂಡಾಡಿ ಗ್ರಾ.ಪು.ಕಾರ್ಯಕರ್ತ ನೋಣಯ್ಯ ಗೌಡ, ಕೆಯ್ಯೂರು ಗ್ರಾ.ಪು.ಕಾರ್ಯಕರ್ತ ರಫೀಕ್ ಟಿ.ಎಂ, ಬಲ್ಪ ಗ್ರಾ.ಪು.ಕಾರ್ಯಕರ್ತ ವರುಣ್ ಬಾಬು, ಕೊಂಬಾರು ಗ್ರಾ.ಪು.ಕಾರ್ಯಕರ್ತೆ ಶಿಲ್ಪಾ ಕಲಾ, ಪುತ್ತೂರು ನಗರಸಭೆ ನ.ಪು.ಕಾರ್ಯಕರ್ತ ಭರತ್. ಕೆ ಹಾಗೂ ಆಸ್ಪತ್ರೆ ನರ್ಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.










