






ಉಪ್ಪಿನಂಗಡಿ: 34 ನೆಕ್ಕಿಲಾಡಿ ಆದರ್ಶನಗರ ಮುಈನುಲ್ ಇಸ್ಲಾಂ ಮದರಸದ ಅಧ್ಯಕ್ಷ, ನೆಕ್ಕಿಲಾಡಿ ಉಮರುಲ್ ಫಾರೂಕ್ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯ, ನಿವೃತ್ತ ಮೆಸ್ಕಾಂ ಉದ್ಯೋಗಿ ಅಮೀರ್ ಜಾನ್ ಸಾಹೇಬ್ (82) ಆ.21ರಂದು ಹೃದಯಾಘಾತದಿಂದ ನಿಧನರಾದರು.


34 ನೆಕ್ಕಿಲಾಡಿಯ ಆದರ್ಶನಗರ ನಿವಾಸಿಯಾಗಿರುವ ಮೃತರು ಮೆಸ್ಕಾಂ ಉದ್ಯೋಗಿ ಅಕ್ಬರ್, ಗಫ್ಪಾರ್ ಅವರನ್ನು ಅಗಲಿದ್ದಾರೆ.













