







ನೀರಾಜೆ: ನೂರಲ್ ಹುದಾ ಮದ್ರಸ ನೀರಾಜೆಯಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ನೂತನ ತರಗತಿ ಉದ್ಘಾಟನಾ ಕಾರ್ಯಕ್ರಮ ಆ.21 ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ನಡೆಯಿತು.


ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಅವರ ಪ್ರಾರ್ಥನೆ ಮತ್ತು ಒಪ್ಪಿಗೆ ಮೇರೆಗೆ ನೂರಲ್ ಹುದಾ ಮಸೀದಿ ಗೌರವಾಧ್ಯಕ್ಷ ಅಸ್ಸಯ್ಯದ್ ಜುನೈದ್ ತಂಙಳ್ ಆತೂರು ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಪ್ರಾರ್ಥನೆಗೆ ನೇತೃತ್ವ ವಹಿಸಿದರು.



ಸ್ಥಳೀಯ ಉಸ್ತಾದ್ ಶೌಕತ್ ಅಲಿ ಅಸ್ಲಮಿ ಸ್ವಾಗತಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಎನ್. ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅಸ್ಸಯ್ಯದ್ ಅಫ್ಹಾಂ ತಂಙಳ್ ಕರಾವಳಿ, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಕುಂಞಿ, ನೂರಲ್ ಹುದಾ ಮದ್ರಸ ಮಾಜಿ ಅಧ್ಯಕ್ಷ ಪೊಡಿಕುಂಞಿ, ಸಿದ್ದೀಕ್ ಅನ್ಸಾರ್, ಗಂಡಿಬಾಗಿಲು ಮಸೀದಿ ಕೋಶಾಧಿಕಾರಿ ಹಸೈನಾರ್ ಹಾಜಿ, ಮುಅಲ್ಲಿಂಗಳಾದ ಫಾಳಿಲ್ ಫೈಝಿ, ಝಕರಿಯ್ಯ ಮುಸ್ಲಿಯಾರ್, ಅಬ್ದುಲ್ಲ ಮುಸ್ಲಿಯಾರ್, ಯಾಕೂಬ್, SKSSF ನೀರಾಜೆ ಶಾಖೆ ಅಧ್ಯಕ್ಷ ಹನೀಫ್, ಯಂಗ್ ಮೆನ್ಸ್ ಅಧ್ಯಕ್ಷ ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.ಕೊನೆಯಲ್ಲಿ ಅಸ್ಸಯ್ಯದ್ ಜುನೈದ್ ಜಿಫ್ರಿ ತಂಙಳ್ ಅವರನ್ನು ಸನ್ಮಾನಿಸಲಾಯಿತು. SKSSF ಸದಸ್ಯತ್ವ ಫಾರಂ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯದರ್ಶಿ ಫುತ್ತು ಕುಂಞ ವಂದಿಸಿದರು.










