ಕರ್ನಾಟಕ ಗಮಕ ಕಲಾ ಪರಿಷತ್ತು ಪುತ್ತೂರು ಘಟಕದಿಂದ ಮನೆ ಮನೆ ಗಮಕ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ದ.ಕ. ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಅ.27ರ ಮಂಗಳವಾರ ಬನ್ನೂರಿನ ಅನಂತಕೃಷ್ಣ ಪಡ್ಡಿಲ್ಲಾಯ ಮತ್ತು ಪದ್ಮಾವತಿ ದಂಪತಿಯ ದುರ್ಗಾನಿಲಯದಲ್ಲಿ ಮನೆ ಮನೆ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಳಿಯ ಶಂಕರ ಭಟ್ ವಿರಚಿತ ಶ್ರೀ ಗುರು ಚರಿತಾಮೃತದಿಂದ ಆಯ್ದ “ಅನಸೂಯಾ ಉಪಾಖ್ಯಾನ” ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕಿ ಪ್ರೊ. ದತ್ತಾತ್ರೇಯ ರಾವ್ ವಾಚಿಸಿದರು, ಉಪಾಧ್ಯಕ್ಷ ಗುಂಡ್ಯಡ್ಕ ಈಶ್ವರ ಭಟ್ ವ್ಯಾಖ್ಯಾನಿಸಿದರು.

ಹಿರಿಯ ಸದಸ್ಯ ಪ್ರೊ. ಎ.ವಿ. ನಾರಾಯಣ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಘಟಕದ ಅಧ್ಯಕ್ಷ ಪ್ರೊ. ವೇದವ್ಯಾಸ ರಾಮಕುಂಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷೆ ಪ್ರೊ. ವತ್ಸಲಾ ರಾಜ್ಞಿ ಅತಿಥೇಯರನ್ನು ಪರಿಚಯಿಸಿದರು. ಮನೆಯವರಾದ ಅನಂತಕೃಷ್ಣ ಪಡ್ಡಿಲ್ಲಾಯ ದಂಪತಿ ಕಲಾವಿದರಿಗೆ ಶಾಲು ಹೊದಿಸಿ, ಫಲ ಮತ್ತು ಪುಸ್ತಕ ನೀಡಿ ಗೌರವಿಸಿದರು.

ಪ್ರಧಾನ ಕಾರ್ಯದರ್ಶಿ ಶಂಕರಿ ಶರ್ಮ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷೆ ಜಯಂತಿ ಹೆಬ್ಬಾರ್, ಸದಸ್ಯ ಭವಾನಿ ಶಂಕರ್ ಶೆಟ್ಟಿ, ಕುಟುಂಬದ ಸದಸ್ಯರು, ಬಂಧುಗಳು, ಕಲಾಸಕ್ತ ಊರ ಮಹನೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here