







ನೆಲ್ಯಾಡಿ: ಕಡಬ ತಾಲೂಕಿನ ಆಲಂತಾಯ ಗ್ರಾಮದ ಆಲಂತಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಶೌಚಾಲಯ ನಿರ್ಮಾಣಕ್ಕೆ ಎಂಆರ್ಪಿಎಲ್ನಿಂದ ಎರಡನೇ ಹಂತದಲ್ಲಿ ೧೦ ಲಕ್ಷ ರೂ.ಅನುದಾನ ದೊರೆತಿದ್ದು, ನೂತನ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಶೋಕ ಸಿ.ಬಿ., ಉಪಾಧ್ಯಕ್ಷೆ ಭಾರತಿ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ ಸವಿತಾ, ಮಾಜಿ ಸದಸ್ಯರಾದ ನೀಲಪ್ಪ ನಾಯ್ಕ ಅಲಂಗಪ್ಪೆ, ಶಿವಪ್ರಸಾದ್ ಶಿವಾರು, ಪದ್ಮನಾಭ ಪೆರ್ನಾರ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಾಬು ನಾಯ್ಕ ಅಲಂಗಪ್ಪೆ, ಗುತ್ತಿಗೆದಾರ ಮನೋಹರ, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಅಲಂಗಪ್ಪೆ, ಪುರುಷೋತ್ತಮ ಆಚಾರ್ಯ, ಕೀರ್ತಿ ಆಲಂತಾಯ, ಭರತೇಶ್ ಆಚಾರ್ಯ ಅಲಂಗಪ್ಪೆ, ಚಂದ್ರಶೇಖರ ಅಲಂಗಪ್ಪೆ, ಬೆಳಿಯಪ್ಪ ಗೌಡ ಬೆದ್ರಗುಡ್ಡೆ ಉಪಸ್ಥಿತರಿದ್ದರು. ಶಾಲೆಯ ಅಡುಗೆ ಸಿಬ್ಬಂದಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












