ಸರಿಗಮಪ ಲಿಟಲ್ ಚಾಂಪ್ಸ್: ಪುಣಚದ ಅಶ್ಮಿತ್ ವಿನ್ನರ್

0

ಪುತ್ತೂರು: ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಆಗಿರುವ ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್-2026ರಲ್ಲಿ ಪುಣಚದ ಅಶ್ಮಿತ್ ಎ.ಜೆ. ಪ್ರಥಮ ಸ್ಥಾನದೊಂದಿಗೆ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ಪುಣಚ ಗ್ರಾಮದ ಮೂಡಂಬೈಲು ರೇವತಿ ಮತ್ತು ಜಯರಾಮ ದಂಪತಿಯ ಪುತ್ರ ಅಶ್ಮಿತ್ ಎ.ಜೆ ಅವರು ಪ್ರತೀ ವಾರ ಉತ್ತಮ ಹಾಡುಗಳನ್ನು ಹಾಡಿ ತೀರ್ಪುಗಾರರಾದ ಖ್ಯಾತ ಗಾಯಕ ವಿಜಯ್ ಪ್ರಕಾಶ್, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣ ಹಾಗೂ ಮ್ಯಾಜಿಕಲ್ ಮ್ಯೂಸಿಕ್ ಕಾಂಪೋಸರ್ ಅರ್ಜುನ್ ಜನ್ಯ ಅವರಿಂದ ಮೆಚ್ಚುಗೆ ಪಡೆದು ಸ್ವರ ಪುತ್ರ ಎಂಬ ಬಿರುದಿನೊಂದಿಗೆ ವಿಜಯ ಶಾಲಿಯಾಗಿದ್ದಾರೆ.

ಅತೀ ಕಿರಿಯ ವಯಸ್ಸಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಶ್ಮಿತ್ ಅವರು ಮಂಗಳೂರಿನ ಸೈಂಟ್ ಗೋಂಝಗ ಶಾಲೆಯಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿದ್ದಾರೆ.
ಸಂಧ್ಯಾ ಸತ್ಯನಾರಾಯಣ ಭಟ್ ಅವರಿಂದ ಸಂಗೀತ ಅಭ್ಯಾಸ ಮಾಡುತ್ತಿರುವ ಇವರು ವಯಲಿನ್ ತರಬೇತಿಯನ್ನು ವಿದ್ವಾನ್ ವೇಣುಗೋಪಾಲ್ ಶಾನ್ ಭೋಗ್ ಅವರಿಂದ ಪಡೆಯುತ್ತಿದ್ದಾರೆ. ಇದೀಗ ದ.ಕ. ಜಿಲ್ಲೆಯ ಹಿರಿಮೆಗೆ ಇನ್ನೊಂದು ಗರಿಮೆ ಎಂಬಂತೆ ಅಶ್ಮಿತ್ ಲಿಟಲ್ ಚಾಂಪ್ಸ್ ನ ವಿನ್ನರ್ ಆಗಿ ಮಿಂಚಿದ್ದಾರೆ.

ವಿಟ್ಲದಲ್ಲಿ ಸಂಭ್ರಮಾಚರಣೆ: ಅಶ್ಮಿತ್ ಎ.ಜೆ.ಅವರು ಆ.25ರಂದು ಸಂಜೆ ವಿಟ್ಲದಲ್ಲಿ ನಡೆಯುವ ಗೆಲುವಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here