ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ : ಬೆಳ್ಳಾರೆ ಠಾಣೆಯಲ್ಲಿ ಈರ್ವರ ಮೇಲೆ ಪ್ರಕರಣ ದಾಖಲು

0

ಬೆಳ್ಳಾರೆ : ಬೆಳ್ಳಾರೆ ಮುಖ್ಯ ಪೇಟೆ ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಉಂಟು ಮಾಡಿದ ಇಬ್ಬರ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.

ಬೆಳ್ಳಾರೆ ಪೊಲೀಸರು ಗಸ್ತು ನಿರತರಾಗಿದ್ದ ಸಂದರ್ಭದಲ್ಲಿ ಮರಕಡ ಮನೆ ವಿಜೇಶ್ ಮತ್ತು ಮಣಿಮಜಲಿನ ಸಂತೋಷ್ ಎಂಬವರು ಬೆಳ್ಳಾರೆ ಪೇಟೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದುಕೊಂಡು ಜಗಳವಾಡಿಕೊಂಡಿರುವುದನ್ನು ಗಮನಿಸಿದ ಪೊಲೀಸರು ಅವರನ್ನು ವಿಚಾರಿಸಲು ತೆರಳಿದಾಗ ಅವರಿಬ್ಬರು ಅಲ್ಲಿಂದ ಪರಾರಿಯಾದರೆನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಮೂಡಿಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here