ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿಯಲ್ಲಿ ಸಾವಯವ ಕೃಷಿಯ ಕುರಿತು ವಿಧ್ಯಾರ್ಥಿಗಳಿಗೆ ಮಾಹಿತಿ ಪ್ರಾತ್ಯಕ್ಷಿಕೆ ಮತ್ತು ಗಿಡ ವಿತರಣೆ

0

ಬೆಟ್ಟಂಪಾಡಿ:ಸಾವಯವ ಕೃಷಿಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಹರಿಕೃಷ್ಣ ಕಾಮತ್ ಅವರಿಂದ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿಯಲ್ಲಿ ಸಾವಯವ ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನಡೆಯಿತು.



ಹರಿಕೃಷ್ಣ ಕಾಮತ್ ಅವರು ಸಾವಯವ ಕೃಷಿಯ ಉಪಯೋಗ ಮತ್ತು ಗಿಡಗಳನ್ನು ಯಾವ ರೀತಿಯಲ್ಲಿ ಕಾಪಾಡಬೇಕು ಮತ್ತು ಗಿಡಗಳಿಗಾಗಿ ಬಳಸಬಹುದಾದ ಗೊಬ್ಬರಗಳ ಬಗ್ಗೆ ಉತ್ತಮವಾದ ಮಾಹಿತಿ ನೀಡಿದರು.



ನಂತರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತರಕಾರಿ ಗಿಡಗಳನ್ನು ವಿತರಿಸಿದರು.ಶಾಲಾ ಸಹಶಿಕ್ಷಕಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here