







ನಿಡ್ಪಳ್ಳಿ: ದಕ್ಷಿಣ ಭಾರತದ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಪುಣ್ಯ ತೀರ್ಥಸ್ಥಾನ ಬೆಂದ್ರ್ ತೀರ್ಥ ಕ್ಷೇತ್ರದ ಸಮೀಪ ಹರಿಯುತ್ತಿರುವ ಸೀರೆ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟಿಗೆ ಸಿಲುಕಿದ್ದ ಮರದ ದಿಮ್ಮಿ, ಕಸಕಡ್ಡಿಗಳ ತೆರವು ಶ್ರಮದಾನ ಸೆ. 6ರಂದು ನಡೆಯಿತು.



ಶಿವಾಜಿ ಯುವ ಸೇನೆಯ ಪದಾಧಿಕಾರಿಗಳು, ಸಮರ್ಪಣಾ ಸೇವಾ ಟ್ರಸ್ಟ್ ಸದಸ್ಯರು, ಶಾಲಾ-ಕಾಲೇಜು ಘಟಕದ ವಿದ್ಯಾರ್ಥಿಗಳು, ಊರಿನ ಗಣ್ಯರು ಶ್ರಮದಾನದಲ್ಲಿ ಕೈಜೋಡಿಸಿದರು. ಅಣೆಕಟ್ಟಿಗೆ ಸಿಲುಕಿದ್ದ ಮರಗಳಿಂದ ಒಂದು ಪಿಕಪ್ ಕಟ್ಟಿಗೆಯನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೀಡಲಾಯಿತು.



ಬೆಟ್ಟಂಪಾಡಿ ವಲಯ ನವಜೀವನ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ರೈ, ಬೇಂದ್ರ್ ತೀರ್ಥ ಅಭಿವೃದ್ಧಿ ಸಂಘಟನೆಯ ಅಧ್ಯಕ್ಷ ಧನ್ಯರಾಜ್, ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ರೈ,ನಿತ್ಯಾನಂದ ಬೈಲಾಡಿ,ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಆದರ್ಶ್ , ಘಟಕ ಸಂಯೋಜಕಿ ಪದ್ಮಾವತಿ. ಡಿ,ಸ್ವಯಂ ಸೇವಕರಾದ ಅಶೋಕ, ಉಮೇಶ ಯಂ, ದಿನೇಶ, ಕೃಷ್ಣ, ಗೀತಾ, ಹೇಮಾವತಿ ಸಿ.ಎಚ್, ಶ್ರೀಮತಿ, ಜನಾರ್ದನ, ಬಾಲಕೃಷ್ಣ ಉಪಸ್ಥಿತರಿದ್ದರು.

ಇದೇ ಬರುವ ಸೆ.11 ರಂದು ತೀರ್ಥ ಅಮಾವಾಸ್ಯೆಯ ದಿನ ನಡೆಯುವ ಪುಣ್ಯ ತೀರ್ಥ ಸ್ನಾನದ ಪೂರ್ವ ಭಾವಿಯಾಗಿ ಕಿಂಡಿ ಅಣೆಕಟ್ಟಿಗೆ ಸಿಲುಕಿದ ಅಪಾರ ಮರ ಕಸ ಕಡ್ಡಿಗಳ ತೆರವು ಮತ್ತು ತೀರ್ಥ ಗುಂಡಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.










