







ಕಾಣಿಯೂರು: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಮತ್ತು ಕೋಡ್ ಕ್ರಾಫ್ಟ್ ಟೆಕ್ನಾಲಜಿಸ್ ಇದರ ಸಹಯೋಗದೊಂದಿಗೆ ಆಯೋಜಿಸಲಾದ ವಿಜ್ಞಾನ ಮೇಳದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ವಿಜ್ಞಾನ ಮಾದರಿ ಮತ್ತು ಅವಿಷ್ಕಾರಗಳನ್ನು ಮಾಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಹರ್ಷ್ ವಿ ರೈ (7ನೇ) ಪ್ರಥಮ, ಶೈವಿ ಎಂ ಎಸ್ (6 ನೇ) ದ್ವಿತೀಯ, ವಿಸ್ಮಯ್ (6ನೇ) ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.
ಪ್ರೌಢಶಾಲಾ ಆಂಗ್ಲ ಮಾಧ್ಯಮದಲ್ಲಿ ಗಗನ್ ರಾಜ್ ಎಂ ಆರ್ (10ನೇ) ಮತ್ತು ತೇಜಸ್ ಕೆ (10ನೇ) ಪ್ರಥಮ, ಸಾತ್ವಿಕ್ ಕೆ ವಿ (10ನೇ) ಮತ್ತು ಶ್ರೀನಿಧಿ ಭಟ್ ಎಂ (10ನೇ) ದ್ವಿತೀಯ, ಹರ್ಷ ಯು ಪಿ (10ನೇ)ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ. ಪ್ರೌಢಶಾಲಾ ಕನ್ನಡ ಮಾಧ್ಯಮದಲ್ಲಿ ಸುಜಿತ್ (9ನೇ) ಪ್ರಥಮ, ಲಿಖಿತ್ ಮತ್ತು ಶ್ರವಣ್ (10ನೇ) ದ್ವಿತೀಯ, ಮೊಹಮ್ಮದ್ ಇನಾಝ್ (9ನೇ) ತೃತೀಯ ಸ್ಥಾನಗಳನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ವಿಜ್ಞಾನ ಶಿಕ್ಷಕಿಯರಾದ ಪಾರ್ವತಿ ಸುಮಾ, ಶರ್ಮಿಳ ಕೆ ಎಸ್, ಭವಾನಿ ಸಿ ಕಾರ್ಯಕ್ರಮವನ್ನು ಸಂಘಟಿಸಿದರು.













