







ಬೆಟ್ಟಂಪಾಡಿ : ಬೆಟ್ಟಂಪಾಡಿ ವಿದ್ಯಾಗಿರಿಯ ಪ್ರಿಯದರ್ಶಿನಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 9ನೇ ವರ್ಷದ ಗೋಕುಲಾಷ್ಟಮಿ ಸೆಪ್ಟೆಂಬರ್ 5 ರಂದು ವಿಜೃಂಭಣೆಯಿಂದ ನಡೆಯಿತು.



ಉದ್ಘಾಟನಾ ಸಮಾರಂಭ
ಗೋಕುಲಾಷ್ಟಮಿಯ ಉದ್ಘಾಟನಾ ಸಮಾರಂಭವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ರೆಂಜ ಬೆಟ್ಟಂಪಾಡಿಯಲ್ಲಿ ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಆರ್ಲಪದವು ಪಾಣಜೆ ಇಲ್ಲಿನ ಮುಖ್ಯ ಆರೋಗ್ಯ ಅಧಿಕಾರಿಗಳಾದ ಡಾ. ವೇದಾವತಿ ಬಲ್ಲಾಳ್ ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣ ಭಜನಾ ಮಂದಿರ ಮುಡಿಪುನಡ್ಕ ಇದರ ಅಧ್ಯಕ್ಷರಾದ ಜಯಪ್ರಕಾಶ್ ಆಚಾರ್ಯ ಹಾಗೂ ಕೊರಗಪ್ಪ ಗೌಡ ಬೀರ್ನೋಡಿ ಉಪಸ್ಥಿತರಿದ್ದರು.




ಅಯ್ಯಪ್ಪ ಮಂದಿರದಿಂದ ವಿದ್ಯಾಗಿರಿಯತ್ತ ಭವ್ಯ ಮೆರವಣಿಗೆ
ಅತಿಥಿ ಕೃಷ್ಣಪ್ಪಗೌಡ ಗುರುಸ್ವಾಮಿ ತೆಂಗಿನಕಾಯಿ ಒಡೆಯುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ಸುಮಾರು 500 ರಾಧಾಕೃಷ್ಣ ವೇಷಧಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ನೂರಾರು ಪೋಷಕರು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಪಕಡಿವೇಷ ಬೊಂಬೆ ಕುಣಿತಗಳು ಮೆರವಣಿಗೆಯ ಸೌಂದರ್ಯವನ್ನು ನೂರ್ಮಡಿಗೊಳಿಸಿತ್ತು. ಶ್ರೀ ಮಣಿಕಂಠ ಸಿಂಗಾರಿ ಮೇಳ ಹಾಗೂ ಬ್ಯಾಂಡ್ ಸೆಟ್ ಗಳೊಂದಿಗೆ ಶ್ರೀಕೃಷ್ಣನ ರಥ ಮುಂದೆ ಸಾಗಿತ್ತು.

ಶ್ರೀಕೃಷ್ಣನ ತೊಟ್ಟಿಲಶಾಸ್ತ್ರ
ಲಕ್ಕಿ ಕೃಷ್ಣನಾಗಿ ಆಯ್ಕೆಗೊಂಡ ಗುಮ್ಮಟಗದ್ದೆ ಪುರುಷೋತ್ತಮ ಮತ್ತು ಪರಶ್ಮಿ ದಂಪತಿಯ ಪುತ್ರ ಕೆಜಿ ವಿಭಾಗದ ಕೃಷ್ಣ ವೇಷಧಾರಿ ವೇದಾoಶ್ ನನ್ನು ತೂಗಿ ತೊಟ್ಟಿಲಶಾಸ್ತ್ರ ನೆರವೇರಿಸಿದರು. ಮುದ್ದುಕೃಷ್ಣನಿಗೆ ಆರತಿ ಬೆಳಗಿ ತುಳಸಿ ಮಾಲಾ ಧಾರಣೆ ಮಾಡಿದರು. ಮುದ್ದುಕೃಷ್ಣನಿಗೆ ಆರತಿ ಬೆಳಗಿ ತುಳಸಿ ಮಾಲಾ ಧಾರಣೆ ಮಾಡಿದರು. ವಿದ್ಯಾರ್ಥಿಗಳಿಂದ ಶಂಖನಾದ ಭಜನಾ ಕಾರ್ಯಕ್ರಮ ಹಾಗೂ ಗೀತಾಪಾರಾಯಣ ನಡೆಯಿತು ರಾಧಾಕೃಷ್ಣ ವೇಷಧಾರಿಗಳಿಗೆ ಆರತಿ ಬೆಳಗಿ ಕುಂಕುಮವಿಟ್ಟು ಮೊಸರನ್ನುಣಿಸಿದರು .

ಆಟೋಟಗಳು
ನಿರೂಪಕಿ ಪ್ರಜ್ಞ ಓಡಿಲ್ನಾಳ ಪೋಷಕರಿಗೆ ಸಂಗೀತಕುರ್ಚಿ, ಲಕ್ಕಿಗೇಮ್, ರಸಪ್ರಶ್ನೆ ,ಭಕ್ತಿಗೀತೆ, ಮೊಸರುಕುಡಿಕೆ, ಹಗ್ಗ ಜಗ್ಗಾಟ ಮೊದಲಾದ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ಶಿಕ್ಷಕರ ದಿನಾಚರಣೆ
ಕಾರ್ಯಕ್ರಮದ ಇನ್ನೊಂದು ಭಾಗವಾಗಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಕಾಟುಕುಕ್ಕೆಯ ಅರ್ಥಶಾಸ್ತ್ರ ಉಪನ್ಯಾಸಕಿ ವಾಣಿ.ಜೆ .ಶೆಟ್ಟಿ ಮುಖ್ಯ ಅತಿಥಿಯಾಗಿದ್ದು ಮಾತನಾಡುತ್ತಾ ಇಡೀ ಪ್ರಿಯದರ್ಶಿನಿಯ ವಾತಾವರಣ ನಂದಗೋಕುಲದ ಅನುಭವ ನೀಡುತ್ತದೆ. ದ್ವಾಪರಯುಗದ ಕೃಷ್ಣ ಬಲರಾಮರು, ಗೋಪಬಾಲರು ಮತ್ತೆ ಕಣ್ಣೆದುರು ಬಂದಂತಾಯಿತು. ಎಂದು ಕಾರ್ಯಕ್ರಮವನ್ನು ಶ್ಲಾಘಿಸಿದರು. ಸ.ಹಿ.ಪ್ರ ಶಾಲೆ ಮುಂಡೂರು 1 ರ ನಿವೃತ್ತ ಮುಖ್ಯ ಶಿಕ್ಷಕಿ ಕೆ .ವಾರಿಜ ರಘುನಾಥ ರೈ ನು ನುಳಿಯಾಲು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಹಶಿಕ್ಷಕಿ ಶ್ರೀಮತಿ ಪವಿತ್ರ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರು ಪ್ರಿಯದರ್ಶಿನಿ ಶಾಲಾ ಶಿಕ್ಷಕರ ಶ್ರಮವನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.

ಗೋಕುಲಾಷ್ಟಮಿಯ ಸಮಾರೋಪ ಬಹುಮಾನ ವಿತರಣೆ
ಸಮಾರೋಪ ಸಮಾರಂಭದ ವೇದಿಕೆಯ ಅಧ್ಯಕ್ಷತೆಯನ್ನು ಗೋಕುಲಾಷ್ಟಮಿ ಸಮಿತಿಯ ಅಧ್ಯಕ್ಷ ಶ್ರೀ ಜನಾರ್ಧನ ಪೂಜಾರಿ ಪದಡ್ಕ ವಹಿಸಿದ್ದು ಗೋಕುಲಾಷ್ಟಮಿಯ ಯಶಸ್ಸಿಗೆ ಶಮಿಸಿದ ಶಿಕ್ಷಕರು, ದಾನಿಗಳು, ಪೋಷಕರ ಶ್ರಮವನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ದಯಾನಂದರ ನುಳಿಯಾಲು, ರೋಟರಿ ಕ್ಲಬ್ ಪುತ್ತೂರು ಈಸ್ಟ ಇದರ ಕಾರ್ಯದರ್ಶಿಗಳಾದ ಜಯಂತ್ ಬಾಯಾರು, ಪುತ್ತೂರು ಗ್ರಾಮಾಂತರ ಯುವ ಮೋರ್ಚಾದ ಉಪಾಧ್ಯಕ್ಷರಾದ ಪವನ್ ಶೆಟ್ಟಿ ಕಂಬಳತ್ತಡ್ಡ ,ಕುಳ ತರವಾಡು ಮನೆಯ ರೇಷ್ಮಾ ದಾಮೋದರ ಮಣಿಯಾಣಿ, ಹಿರಿಯ ವಿದ್ಯಾರ್ಥಿ ಅವಿನಾಶ್ ಚೆಲ್ಯರಮೂಲೆ, ಆಡಳಿತ ಮಂಡಳಿ ಅಧ್ಯಕ್ಷರಾದ ರಂಗನಾಥ ರೈ ಗುತ್ತು, ಸಂಚಾಲಕರಾದ ಡಾ. ಸತೀಶ್ ರಾವ್ ಉಪಸ್ಥಿತರಿದ್ದರು. ನಂತರದಲ್ಲಿ ಬಹುಮಾನ ವಿತರಣೆ ನಡೆಯಿತು. ಮುಖ್ಯ ಗುರು ರಾಜೇಶ್ ಎನ್ ಸ್ವಾಗತಿಸಿ ಸಹಶಿಕ್ಷಕಿ ಕೃಷ್ಣವೇಣಿ ವಂದಿಸಿದರು. ಶಿಕ್ಷಕರಾದ ಚಿತ್ರಲತಾ, ಪ್ರೀತ, ಹಾಗೂ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.










