ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಪುತ್ತೂರು ವಲಯ- ನೂತನ ಕಾರ್ಯಕಾರಿ ಸಮಿತಿಯ ರಚನೆ

0

ಅಧ್ಯಕ್ಷರಾಗಿ – ವೇದಾವತಿ ರಾಜೇಶ್, ಕಾರ್‍ಯದರ್ಶಿ- ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ- ಪುಷ್ಪಲತಾ

ಪುತ್ತೂರು: ತುಳುವ ಮಹಾಸಭೆ ಇಂಟರ್‌ನ್ಯಾಷನಲ್, ಪುತ್ತೂರು ವಲಯದ ನೂತನ ಕಾರ್ಯಕಾರಿ ಸಮಿತಿಯನ್ನು ಪುತ್ತೂರಿನ ಬಂಟರ ಭವನದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ವೇದಾವತಿ ರಾಜೇಶ್, ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿಯಾಗಿ ಪುಷ್ಪಲತಾ ಕೆ ಹಾಗೂ ಉಪಾಧ್ಯಕ್ಷರುಗಳಾಗಿ ಜಯಪ್ರಕಾಶ್ ರೈ ನೂಜಿಬೈಲು, ನಯನಾ ರೈ ನೆಲ್ಲಿಕಟ್ಟೆ, ಇಂದಿರಾ ರೈ ಮತ್ತು ಕಾರ್ಯಕಾರಿ ಸಮಿತಿಯ ಸಲಹೆಗಾರರಾಗಿ ದಂಬೆಕ್ಕಾನ ಸದಾಶಿವ ರೈ, ಚಂದ್ರಹಾಸ ರೈ, ಕುಂಬ್ರ ದುರ್ಗಾಪ್ರಸಾದ ರೈ ಹಾಗೂ ದಯಾನಂದ ರೈ ಮನವಳಿಕೆಗುತ್ತು ಅವರನ್ನು ಆಯ್ಕೆ ಮಾಡಲಾಗಿದೆ.


ಪುತ್ತೂರು ವಲಯದ ಪ್ರಧಾನ ಸಂಚಾಲಕ ಮನೋಹರ ರೈ ಅವರು ಸ್ವಾಗತಿಸಿದರು. ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಡ ಹಾಗೂ ತುಳುವರ್ಲ್ಡ್ ಫೌಂಡೇಶನ್‌ನ ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ ಅವರು ತುಳುವರ್ಲ್ಡ್ ಫೌಂಡೇಶನ್ ಮತ್ತು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಧ್ಯೇಯ, ಉದ್ದೇಶಗಳು ಹಾಗೂ ಚಟುವಟಿಕೆಗಳ ಕುರಿತು ಸಭಿಕರಿಗೆ ವಿವರಿಸಿದರು.


ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಭಾನುಮತಿ ಶೆಟ್ಟಿ ಹಾಗೂ ರವಿಪ್ರಸಾದ ಶೆಟ್ಟಿ, ಪ್ರಸನ್ನ ಶೆಟ್ಟಿ ಸಿಝ್ಲರ್, ಸೂರಜ್ ಶೆಟ್ಟಿ, ರವಿಚಂದ್ರ, ಭಾಸ್ಕರ, ವಕೀಲರ ಸಂಘ ಅಧ್ಯಕ್ಷ ಜಗನ್ನಾಥ ರೈ, ಅಜಿತ್ ರೈ, ದಿಲ್ಲನ್ ರೈ, ಉಪಸ್ಥಿತರಿದ್ದರು. ವಸಂತ ರೈ ಕುತ್ತೆತ್ತೂರು ವಂದಿಸಿದರು.

LEAVE A REPLY

Please enter your comment!
Please enter your name here