







ಕಡಬ: ಕಸ್ತೂರಿರಂಗನ್ ವರದಿ ವಿರುದ್ದ ಬಿಳಿನೆಲೆ ಗ್ರಾ.ಪಂ. ಎದುರು ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಜನಸಾಮಾನ್ಯರ ಗಮನಕ್ಕೆ ತಾರದೆ ಸರಕಾರಿ ಭೂಮಿಯನ್ನು ಹಂತ ಹಂತವಾಗಿ ಕಾನೂನು ಬಾಹಿರವಾಗಿ ಅರಣ್ಯ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ ಹಾಗೂ ಬೇರೆ ಬೇರೆ ಪರಿಸರ ಸಂಬಂಧಿ ಯೋಜನೆಗಳನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದು ಕಸ್ತೂರಿ ರಂಗನ್ ವರದಿ ಪ್ರಮುಖವಾಗಿರುತ್ತದೆ ಮತ್ತು ಜನರನ್ನು ದಿಕ್ಕು ತಪ್ಪಿಸಿ ಯೋಜನೆಯನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.



ಹೋರಾಟ ಸಮಿತಿಯ ಪ್ರಮುಖರಾದ ದಾಮೋಧರ್ ಗುಂಡ್ಯ ಮಾತನಾಡಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹೇಗೆ ಹೋರಾಟವನ್ನು ಕಳೆದ 16 ವರ್ಷಗಳಲ್ಲಿ ಹಮ್ಮಿಕೊಂಡಿತು ಮತ್ತು ಇಂದಿನವರೆಗೂ ಈ ಭಾಗದಲ್ಲಿ ವನ್ಯಧಾಮವನ್ನು ಹೇರುವಂತ ಪ್ರಯತ್ನಕ್ಕೆ ತಡೆಯಾಗಿ ನಿಂತಿದ್ದು ಎಂಬುದರ ಬಗ್ಗೆ ವಿವರಿಸಿದರು. ಪ್ರಮುಖರಾದ ಸತೀಶ್ ಎರ್ಕ, ಹಿರಿಯಣ್ಣ ಗೌಡ, ವಾಡ್ಯಪ್ಪ ಗೌಡ ಎರ್ಮಾಯಿಲ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಉಮಾವತಿ, ಯಶವಂತ ಕಳಿಗೆ, ರಘು ಚೆಂಡೆತ್ತಿಲು, ಧರ್ಮಪಾಲ,ಸೂಡ್ಲು ವೇದಿಕೆಯ ಜಿಲ್ಲಾ ಪ್ರಮುಖರಾದ ರಮಾನಂದ ಎಣ್ಣೆಮಜಲು ಮೊದಲಾದ ಪ್ರಮುಖರು ಭಾಗವಹಿಸಿದ್ದರು. ಸರೋಜಿನಿಜಯಪ್ರಕಾಶ್ ಸ್ವಾಗತಿಸಿ, ಸುಪ್ರೀತ್ ಅವರು ವಂದಿಸಿದರು. ಪ್ರತಿಭಟನೆಯ ಬಳಿಕ ಪಂಚಾಯಿತಿ ಮೂಲಕ ಮನವಿ ಸಲ್ಲಿಸಲಾಯಿತು.










