ವಾಫಿಯಾ ಕಾಲೇಜಿನ ಅಧ್ಯಕ್ಷರಾಗಿ ಕೆ.ಎಂ. ಅಬ್ದುಲ್ ಖಾದರ್ ಪುನರಾಯ್ಕೆ

0

ಕೂರ್ನಡ್ಕ: ಪೀರ್ ಮೊಹಲ್ಲಾ ಮುಹಿಯದ್ದೀನ್ ಜುಮಾ ಮಸೀದಿಯ ಅಧೀನದ ವಾಫಿಯಾ ಕಾಲೇಜಿನ ಆಡಳಿತ ಮಂಡಳಿ ಸಭೆ ಸೆ.10ರಂದು ಮದ್ರಸ ಸಭಾಂಗಣದಲ್ಲಿ ನಡೆಯಿತು.

ಜಮಾತ್ ಅಧ್ಯಕ್ಷ ರಿಯಾಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ವಾಫಿಯಾ ಕಾಲೇಜಿನ ಅಧ್ಯಕ್ಷ ಕೆ.ಎಂ. ಅಬ್ದುಲ್ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಜಮಾಅತ್ ಕಾರ್ಯದರ್ಶಿ ಎಂ.ಎಂ. ಅಬ್ದುಲ್ ಅಝೀಝ್ ಮಾತನಾಡಿ ಕಾಲೇಜಿನ ಅಭಿವೃದ್ಧಿಗೆ ಎಲ್ಲರ ಒಗ್ಗಟ್ಟಿನ ಅಗತ್ಯವಿದೆ ಎಂದರು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಎಂ. ಅಬ್ದುಲ್ ಖಾದರ್ ಅವರನ್ನೇ ಸರ್ವಾನುಮತದಿಂದ ಮುಂದುವರಿಸಲಾಯಿತು.

ನೂತನ ಪದಾಧಿಕಾರಿಗಳು:

  • ಅಧ್ಯಕ್ಷರು: ಕೆ.ಎಂ. ಅಬ್ದುಲ್ ಖಾದರ್
  • ಉಪಾಧ್ಯಕ್ಷರು: ಹನೀಫ್ ಮಧುರಾ
  • ಕಾರ್ಯದರ್ಶಿ: ಕೆ.ಎ. ಅಬ್ದುಲ್ ರಝಾಕ್ ಹಾಜಿ
  • ಕೋಶಾಧಿಕಾರಿ: ಆದಂ ಮುಕ್ರಂಪಾಡಿ
  • ವಿಶೇಷ ಸದಸ್ಯರು: ಜಮಾತ್ ಅಧ್ಯಕ್ಷ ರಿಯಾಜ್ ಹಾಜಿ, ಪ್ರಧಾನ ಕಾರ್ಯದರ್ಶಿ ಎಂ.ಎಂ. ಅಬ್ದುಲ್ ಅಝೀಝ್
  • ಸದಸ್ಯರು: ಅಬೂಬಕರ್ ಪಿ.ಸಿ.ಎನ್., ಅಬ್ದುಲ್ ರಹಿಮಾನ್ ಕಬಕ, ಇಸ್ಮಾಯಿಲ್ ಕೆನರಾ, ಫಾರೂಕ್ ಎಲ್.ಟಿ., ಸಿರಾಜ್ ಎ.ಕೆ.

ಜಮಾಅತ್ ಸಮಿತಿ ಮತ್ತು ಕಾಲೇಜಿನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಎಂ. ಅಬ್ದುಲ್ ಅಝೀಝ್ ವಂದಿಸಿದರು.

LEAVE A REPLY

Please enter your comment!
Please enter your name here