







ಪುತ್ತೂರು: ಶ್ರೀ ಶನೀಶ್ವರ ಟೈಗರ್ಸ್ ಬನ್ನೂರು ತಂಡದ ತೃತೀಯ ವರ್ಷದ ನವರಾತ್ರಿ ಊದು ಪೂಜೆ ಹಾಗೂ ಹುಲಿವೇಷ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ.26ರಂದು ಬನ್ನೂರು ಸ್ಫೂರ್ತಿ ಮೈದಾನ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.
ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಹಾಗೂ ಪೆರ್ಲಂಪಾಡಿ ಶಾರದೋತ್ಸವ ಸಮಿತಿಯ ಭರತ್ ಕುಮಾರ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಶ್ರೀ ಶನೀಶ್ವರ ದೇವರ ಸನ್ನಿಧಿಯ ಸಂಚಾಲಕ ದಿನೇಶ್ ಸಾಲ್ಯಾನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಹಾಬಲ ಪೂಜಾರಿ, ಶ್ರೀ ಶನೀಶ್ವರ ಟೈಗರ್ಸ್ ಬನ್ನೂರು ತಂಡದ ಮುಖ್ಯಸ್ಥರಾದ ಪ್ರಮೋದ್ ಗೌಡ, ಶರತ್, ಮಿಥುನ್, ಮೋಹನ್, ತೇಜಸ್, ಶ್ರೇಯಸ್, ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ದೀಪಕ್ ಆಚಾರ್ಯ, ಕಾರ್ಯದರ್ಶಿ ನಿತಿನ್ ಕುಮಾರ್, ಮಹಿಳಾ ಮಂಡಲದ ಅಧ್ಯಕ್ಷೆ ಬೇಬಿ ಶೋಭನಾ ಹಾಗೂ ಸಂಸ್ಥೆಯ ಸದಸ್ಯರಾದ ಗೋಪಾಲ ಗುರುಂಪುನರ್, ಕೃಷ್ಣಪ್ಪ ನಾಯ್ಕ್, ನಾರಾಯಣ ನಾಯ್ಕ್, ಗೀತಾ, ಪ್ರಮೀಳಾ, ಲಿಖಿತಾ ಮತ್ತು ಜ್ಯೋತಿ ಉಪಸ್ಥಿತರಿದ್ದರು. ಸ್ಪೂರ್ತಿ ಯುವಕ ಮಂಡಲದ ಉಪಾಧ್ಯಕ್ಷ ನವೀನ್ ರೈ ಬನ್ನೂರು ವಂದಿಸಿದರು.












