ಆಲಡ್ಕ : ಯಶಸ್ವಿ ಬ್ರಹ್ಮಕಲಶೋತ್ಸವ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ, ಸ್ವಯಂಸೇವಕರಿಗೆ ಅಭಿನಂದನಾ ಕಾರ್ಯಕ್ರಮ

0


ಪುತ್ತೂರು: ಜ.19 ರಿಂದ24 ರತನಕ ನಡೆದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ನಡೆದಿದ್ದು ಇದಕ್ಕಗಿ ಶ್ರಮಿಸಿ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ, ಸ್ವಯಂಸೇವಕರಿಗೆ ಅಬಿನಂದನಾ ಕಾರ್ಯಕ್ರಮಜ.೩೦ ರಂದು ದೇವಳದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು.ಕಳೆದ ವರ್ಷ ನಡೆಯಬೇಕಿದ್ದ ಬ್ರಹ್ಮಕಲಶೋತ್ಸವ ಕೋವಿಡ್ ಕಾರಣಕ್ಕೆ ನಡೆಸಲು ಸಾದ್ಯವಾಗಿರಲಿಲ್ಲ. ಸುಮಾರು 1 ಕೋಟಿ ರಊ ಗೂ ಮಿಕ್ಕಿ ವೆಚ್ಚದಲ್ಲಿ ದೇವಳದಲ್ಲಿ ಜೀರ್ಣೋಧ್ದಾರ ಕಾರ್ಯ ನಡೆಸಲಾಗಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಎಲ್ಲರ ಸಹಕಾರದಿಂದ ನಿರೀಕ್ಷೆಗೂ ಮೀರಿದ ಯಸಶ್ವಿಗಳಿಸಿದೆ. ಮುಂಡೂರು ಹಾಗೂ ಕೆದಂಬಾಡಿ ಗ್ರಾಮದ ಭಕ್ತಾದಿಗಳ ಪೂರ್ಣ ಸಹಕಾರದಿಂದ, ಭಕ್ತರ ಆರ್ಥಿಕ ನೆರವಿನಿಂದ ವಿವಿಧ ಸಮಿತಿಗಳ ಪದಾಧಿಕಾರಿಗಳ ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದೆ. ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ದಾರ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳಿಗೆ, ಅನ್ನಸಂತರ್ಪಣೆ , ಅಲಂಕಾರ, ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ, ಕಾರ್ಯಕ್ರಮ ನಿರೀಕ್ಷೆಗೂ ಮಿರಿ ಯಶಸ್ವಿಗೊಂಡಿದೆ ಎಂದು ಹೇಳಿದರು.

ಭಕ್ತಾದಿಗಳ, ವಿವಿಧ ಸಮಿತಿಯ ಪದಾಧಿಕಾರಿಗಳ, ಸ್ವಯಂ ಸೇವಕರ ಒಮ್ಮತದ ಸಹಕಾರದಿಂದ ಇದೆಲ್ಲವೂ ಸಾದ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ದೇವಳದ ಜೊತೆ ನಿಕಟ ಸಂಪರ್ಕವನ್ನು ಹೊಂದುವ ಮೂಲಕ ದೇವಸ್ಥಾನ ನಿರಂತರ ಧಾರ್ಮಿಕ ಚಟುವಟಿಕೆಯ ಕೆಂದ್ರವನ್ನಾಗಿ ಮಾಡುವಲ್ಲಿ ಎಲ್ಲರ ಸಹಕಾರ ಕೋರಿದರು.

8.50 ಲಕ್ಷ ಉಳಿಕೆ
ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಒಟ್ಟು ೮.೫೦ ಲಕ್ಷ ಉಳಿಕೆಯಾಗಿದೆ.ಅನಗತ್ಯವಾಗಿ ಯಾವ ಖರ್ಚು ಮಾಡದೇ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಹಣವನ್ನು ಉಳಿಕೆ ಮಾಡಲಾಗಿದೆ. ಈ ಹಣವನ್ನು ಬಾಕಿ ಇರುವ ದೇವಳದ ಅಭಿವೃದ್ದಿ ಕೆಲಸಗಳಿಗೆ ಬಳಕೆ ಮಾಡಲಾಗುವುದು. ಮಾ. ೧೪ ರಂದು ದೃಡ ಕಲಶ ನಡೆಯಲಿದ್ದು ಅದಕ್ಕಿಂತ ಮುಂಚಿತವಾಗಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾವು ಹೇಮನಾಥ ಶೆಟ್ಟಿ ಸಭೆಯಲ್ಲಿ ತಿಳಿಸಿದರು.

ಹೇಮನಾಥ ಶೆಟ್ಟಿಗೆ ಸನ್ಮಾನ
ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಯಶಸ್ವಿಯಗಿ ನಡೆದಿರುವುದಕ್ಕೆ ದೇವಳದ ವತಿಯಿಂದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರಿಗೆ ವಿವಿಧ ಸಮಿತಿಗಳ ಪರವಾಗಿ ಶಾಲು ಹೊದಿಸಿ ಸ್ಮರಣಿಕೆ, ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು. ಹೊರ ಊರಿನಿಂದ ಬಂದು ಆಲಡ್ಕದ ದೇವಳ ಬ್ರಹ್ಮಕಲಶ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಯಶಸ್ವಿ ರುವಾರಿಯಾಗಿದ್ದೀರಿ ಎಂದು ಹೇಮನಾಥ ಶೆಟ್ಟಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ದೇವಳಕ್ಕೆ ಅನುದಾನ ಒದಗಿಸುವಲ್ಲಿ ಸಹಕರಿಸಿದ ಶಾಸಕ ಸಂಜೀವ ಮಠಂದೂರು ಅವರಿಗೂ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡೆಂಕಿರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣಕುಮಾರ ಆಳ್ವ ಬೋಳೋಡಿಗುತ್ತು, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರುಗಳಾದ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ,ಪ್ರಕಾಶ್ ಪುತ್ತೂರಾಯ ಆಲಡ್ಕ, ಸುರೇಶ್ ಕಣ್ಣಾರಾಯ, ಭಾಸ್ಕರ ಬಲ್ಲಾಳ್ ಬೀಡು, ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷರಾದ ರವಿ ಶೆಟ್ಟಿ ಮೂಡಂಬೈಲು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಬಿ ವಿ ಶಗ್ರಿತ್ತಾಯ, ಕೋಶಾಧಿಕಾರಿ ರತನ್ ರೈ ಕುಂಬ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರುಕ್ಮನಾಯ್ಕ ಮಜಲಮೂಲೆ, ಪದ್ಮಾವತಿ ಶೀನಪ್ಪ ರೈ ಕೊಡೆಂಕಿರಿ, ಜಯಲಕ್ಷ್ಮಿ ಬಾಳಯ, ಸದಾಶಿವ ರೈ ಪೊಟ್ಟಮೂಲೆ, ವಿಶ್ವನಾಥ ರೈ ಕುಕ್ಕುಂಜೋಡು, ಜೀರ್ಣೋದ್ದಾರ ಸಮಿತಿ ಜೊತೆ ಕಾರ್ಯದರ್ಶಿಗಳಾದ ಲೋಕೇಶ್ ನಾಯ್ಕ ಬೋಳೋಡಿ, ಮಹಾಬಲ ರೈ ಕುಕ್ಕುಂಜೋಡು ಸೇರಿದಂತೆ ಹಲವು ಮಂದಿ ವಿವಿಧ ಸಮಿತಿಯ ಪದಾಧಿಕಾರಿಗಳು, ಸ್ವಯಂಸೇವಕರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಭಾಸ್ಕರ ರೈ ಕೆದಂಬಾಡಿಗುತ್ತು ಲೆಕ್ಕಪತ್ರವರದಿ ಮಂಡಿಸಿದರು.

LEAVE A REPLY

Please enter your comment!
Please enter your name here