ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ಉಚಿತ ಆರೋಗ್ಯ ತಪಾಸಣಾ ಶಿಬಿರ ಆರಂಭ

0
  • ಒಂದು ತಿಂಗಳ ಶಿಬಿರದಲ್ಲಿ ವೈದ್ಯಕೀಯ ಸೌಲಭ್ಯಗಳು ಔಷಧಿಯೊಂದಿಗೆ ಸಂಪೂರ್ಣ ಉಚಿತ

ವಿಟ್ಲ: ನಾಟೆಕಲ್‌ನಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಒಂದು ತಿಂಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ.28ರಂದು ಆರಂಭಗೊಂಡಿದ್ದು, ಮಾ.31ರಂದು ಕೊನೆಗೊಳ್ಳಲಿದೆ.

 

ವೈದ್ಯಕೀಯ ಶಾಸ್ತ್ರ ವಿಭಾಗ, ಮಕ್ಕಳ ವಿಭಾಗ, ಕ್ಷಯ ಮತ್ತು ಶ್ವಾಸಕೋಶ ವಿಭಾಗ ಹಾಗೂ ಚರ್ಮರೋಗ ವಿಭಾಗಗಳ ಸಾಮಾನ್ಯ ವಾರ್ಡ್‌ಗಳಲ್ಲಿ ಒಳರೋಗಿಯಾಗಿ ದಾಖಲಾಗುವವರಿಗಾಗಿ ಈ ಶಿಬಿರವನ್ನು  ಆಯೋಜನೆ‌ ಮಾಡಲಾಗಿದೆ.   ಈ ಅವಧಿಯಲ್ಲಿ ವೈದ್ಯಕೀಯ ಸೌಲಭ್ಯಗಳು ಔಷಧಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಈ ಶಿಬಿರದ ಅವಧಿಯಲ್ಲಿ ಒಳರೋಗಿಗಳಿಗೆ ಲ್ಯಾಬ್ ಪರೀಕ್ಷೆಗಳು, ಎಂಆರ್‌ಐ, ಸಿ.ಟಿ., ಆಲ್ಫಾ ಸೌಂಡ್ ಸ್ಕ್ಯಾನಿಂಗ್, ಮ್ಯಾಮೋಗ್ರಾಂ, ಎಕ್ಸ್ ರೇ, ಇಸಿಜಿ, ಫಿಸಿಯೋಥರೆಪಿ ಉಚಿತವಾಗಿರುತ್ತದೆ. ಸಾಮಾನ್ಯ ವಾರ್ಡ್‌ನಲ್ಲಿ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದ ಮೂಳೆ ವಿಭಾಗದ, ಕಿವಿ-ಮೂಗು- ಗಂಟಲು ವಿಭಾಗದ ಎಲ್ಲಾ ಶಸ್ತ್ರ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿರುವವರಿಗೆ ಶಸ್ತ್ರ ಚಿಕಿತ್ಸೆಗಳು, ಔಷಧಿ ಉಚಿತವಾಗಿರುತ್ತದೆ.

ಅದೇ ರೀತಿ ಒಳರೋಗಿಯಾಗಿ ದಾಖಲಾಗಿರುವ ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆ, ಸಿಸೇರಿಯನ್ ಹೆರಿಗೆ ಉಚಿತವಾಗಿರುತ್ತದೆ. ಗರ್ಭಕೋಶದ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆ (ಕಿಮೋಥೆರಪಿ, ರೇಡಿಯೋಥೆರಪಿ ಮತ್ತು ಶಸ್ತ್ರಚಿಕಿತ್ಸೆ), ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯೂ ಉಚಿತವಾಗಿರುತ್ತದೆ. ಐಸಿಯು, ರೂಮ್ ವೆಚ್ಚದಲ್ಲಿ 50 ಶೇ. ರಿಯಾಯಿತಿ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ  7353774782, 7353775782,  7349479888 ಯನ್ನು  ಸಂಪರ್ಕಿಸುವಂತೆ ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here