ಖ್ಯಾತ ವಾಸ್ತು ತಜ್ಞ ಮಹೇಶ್ ಮುನಿಯಂಗಳ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

0

ಪುತ್ತೂರು:  ಖ್ಯಾತ ವಾಸ್ತು ತಜ್ಞ, ಸಾವಿರಾರು ದೇವಸ್ಥಾನಗಳ ವಾಸ್ತು ಶಿಲ್ಪಿ,ಸುಬ್ರಹ್ಮಣ್ಯ ಬಳಿಯ ಶ್ರೀ ಮಹೇಶ ಮುನಿಯಂಗಳ ಅವರಿಗೆ ಇಂದು ತಮಿಳುನಾಡಿನ ಹೊಸೋರು ನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಚೆನ್ನೈನ ಏಶಿಯನ್ ವೇದಿಕ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಕೊಡಮಾಡಿದೆ. ಮಹೇಶ್ ಮುನಿಯಂಗಳ ಅವರು ಬಿಳಿನೆಲೆ ಗ್ರಾಮದ ಕೈಕಂಬದ ಗೋಪಾಲಿಯವರು. ಮೂಲತಹ ಕಾಸರಗೋಡು ಕಾನತ್ತೂರಿನ ಮುನಿಯಂಗಳದವರು.


ಇವರು ಪ್ರಸಿದ್ದ ದೇವಸ್ಥಾನಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಆಸುಪಾಸಿನ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಕೊಲ್ಲೂರು ದೇವಸ್ಥಾನ, ಜೀರ್ಣೋದ್ಧಾರ ಗೊಳ್ಳುತ್ತಿರು ಕುಂಬಾಶಿ ಚಂಡಿಕಾ ಪರಮೇಶ್ವರಿ ದೇವಸ್ಥಾನ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ರಾಮಚಂದ್ರಾಪುರ ಮಠ, ಸುಬ್ರಹ್ಮಣ್ಯದ ಮಠದ ವಾಸ್ತುಶಿಲ್ಪಿ.

ಇವರ ತಂದೆ ಎಂ ಸುಬ್ರಹ್ಮಣ್ಯ ಮುನಿಯಂಗಲ, ತಾಯಿ ಸರಸ್ವತಿ, ಪತ್ನಿ ವಿದ್ಯಾಲಕ್ಷ್ಮೀ, ಮಗಳು ಮನಸಾದೇವಿ ಮತ್ತು ಮಗ ಕಾರ್ತಿಕೇಯ ಕುಮಾರಸ್ವಾಮಿ ವಿದ್ಯಾಲಯದ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳು. ಪ್ರಶಸ್ತಿ ಪ್ರದಾನ ಸಂದರ್ಭ ಮಣಿಕಂಠ ಸುಬ್ರಹ್ಮಣ್ಯ, ಸೃಜನ್, ಬಾನುಪ್ರಕಾಶ್ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here