ತಾಲೂಕಿನ ಭಾರತ ಸೇವಾದಳ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪುನಶ್ಚೇತನ ಹಾಗೂ ಕೊರೋನಾ ಜಾಗೃತಿ ಶಿಬಿರ

0

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಭಾರತ ಸೇವಾದಳ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿ ಪುತ್ತೂರು ಇದರ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇಲ್ಲಿಯ ಗುರುಭವನದ ಸಭಾಂಗಣದಲ್ಲಿ ತಾಲೂಕಿನ ಭಾರತ ಸೇವಾದಳ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುನಶ್ಚೇತನ ಶಿಬಿರ ಮತ್ತು ಕೊರೋನಾ ಜಾಗೃತಿ ಶಿಬಿರವನ್ನು ಏರ್ಪಡಿಸಲಾಯಿತು. ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಡಬ ತಾಲೂಕಿನ ರಾಜ್ಯ ಪರಿಷತ್ ಸದಸ್ಯ ಮಾಮಚ್ಚನ್ ಎಂ.ರವರು ನೆರವೇರಿಸಿ ಶುಭ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕರಾದ ಶ್ಯಾಮ್ ಪ್ರಸಾದ್ ರವರು ಅಧ್ಯಕ್ಷೆಯ ನುಡಿಗಳೊಂದಿಗೆ ಶುಭಹಾರೈಸಿದರು . ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ದೀಪಕ್ ರೈರವರು ಕೊರೋನಾ ಮಾರಕ ಕಾಯಿಲೆಯನ್ನು ತಡೆಗಟ್ಟುವ ಬಗ್ಗೆ ಮತ್ತು ಕೊರೋನಾ ರೋಗದಿಂದ ಆಗುವ ದುಷ್ಪರಿಣಾಮದ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.

 

 


ಜಿಲ್ಲಾ ಸೇವಾದಳ ಸಮಿತಿಯ ಪರವಾಗಿ ಎಲ್ಲಾ ಶಿಬಿರಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಸೇವಾದಳ ಸಂಘಟಕರಾದ ಮಂಜೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ನವೀನ್ ರೈ ಸಂದರ್ಭೋಚಿತವಾಗಿ ಮಾತುಗಳನ್ನಾಡಿದರು. ಸರ್ವಧರ್ಮೀಯ ಪ್ರಾರ್ಥನೆಯೊಂದಿಗೆ ಶಿಬಿರಾರ್ಥಿಗಳಿಗೆ ತಾಲೂಕು ಸಂಘಟಕರು ಕಾರ್ಯದರ್ಶಿಗಳಾದ ಆನಂದ ಗೌಡ ಹೊಸಮಜಲು ತರಬೇತಿಯನ್ನು ನೀಡಿ ಸಹಕರಿಸಿದರು. ಸೇವಾದಳ ಶಿಬಿರಾರ್ಥಿಗಳಾದ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ಸ್ವಾಗತಿಸಿ, ಗೀತಾ ಹಳೆನೇರಂಕಿ ವಂದಿಸಿದರು. ಭಾಸ್ಕರ ಗೌಡ ಕಾವು ಕಾರ್ಯಕ್ರಮವನ್ನು ನಿರೂಪಿಸಿದರು.  ಪ್ರವಿತ ಕಬಕ ಹಾಗೂ ವಾಣಿಶ್ರೀ ಪರ್ಲಡ್ಕ ಕಾರ್ಯಕ್ರಮಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here