ತುಳುನಾಡಿನ ಪಾರಂಪರಿಕ ಆಚರಣೆ, ಆಟಗಳೊಂದಿಗೆ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಷು ಆಚರಣೆ

0

ಪುತ್ತೂರು:ತುಳುನಾಡಿ ಹೊಸ ವರುಷವಾಗಿರುವ ವಿಷು ಹಬ್ಬವನ್ನು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಶೇಷವಾಗಿ ತುಳುನಾಡಿನ ಪಾರಂಪರಿಕ, ಸಾಂಪ್ರಾದಾಯಿಕ ಪದ್ಧತಿಗಳು, ಆಟೋಟಗಳು ಹಾಗು ತಿಂಡಿ ತಿನಿಸುಗಳೊಂದಿಗೆ ಆಚರಿಸಲಾಯಿತು.

ವಿಷು ಹಬ್ಬದ ವಿಶೇಷ ಆಚರಣೆಯಾದ `ವಿಷುಕಣಿ’ ಇಡಲಾಯಿತು. ವಿಷು ಹಬ್ಬದ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ವಿಷು ಹಬ್ಬದಲ್ಲಿ ಪಾರಂಪರಿಕ ಆಟಗಳಾದ ತಪ್ಪಂಗಾಯಿ, ತೆಂಗಿನಕಾಯಿ ಕುಟ್ಟುವುದು, ತೆಂಗಿನಕಾಯಿಗೆ ಕಲ್ಲೊಡೆಯುವ ಸ್ಪರ್ಧೆಗಳನ್ನು ನಡೆಸಲಾಯಿತು. ಬಳಿಕ ತುಳುನಾಡಿನ ಖಾದ್ಯ ಕೊಟ್ಟಿಗೆ ಹಾಗೂ ರಸಾಯನದ ರುಚಿಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳು ಸವಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸದಸ್ಯರಾದ ಲಕ್ಷ್ಮಣ ಬೈಲಾಡಿ, ಜಯಕುಮಾರ್ ನಾಯರ್, ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ವಿನ್ಯಾಸ್ ಯು.ಎಸ್, ಜಗದೀಶ್, ಪ್ರೇಮಾ, ಶಶಿಕಲಾ ನಿರಂಜನ್ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಉಪಾಧ್ಯಕ್ಷ ಭೀಮಯ್ಯ ಭಟ್, ಉದಯ ಕುಮಾರ್ ರೈ ಎಸ್, ವೇಣುಗೋಪಾಲ ಶೆಟ್ಟಿ, ವಿಜಯ ಬಿ.ಎಸ್ ಸಹಿತ ಹಲವು ಮಂದಿ ಭಕ್ತಾದಿಗಳು ವಿಷು ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಿ ತುಳುನಾಡಿ ಪಾರಂಪರಿಕ ಆಟಗಳು, ತಿನಿಸುಗಳನ್ನು ಸವಿಯವ ಮೂಲಕ ಪುರಾತನ ಸಂಪ್ರದಾಯಗಳನ್ನು ಮೆಲುಕು ಹಾಕಲಾಯಿತು.

LEAVE A REPLY

Please enter your comment!
Please enter your name here