ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ, ಜೀವ ಬೆದರಿಕೆ – ಕಡಬ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲು

0

ಕಡಬ: ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಾದ ಚಂದ್ರಶೇಖರ್(37) ಬಿಳಿನೆಲೆ ಗ್ರಾಮದವರಾಗಿದ್ದು ಜೂ.20ರಂದು ರಾತ್ರಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ತನ್ನ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಪೋನ್‌ ನಲ್ಲಿ ಮಾತನಾಡುವ ಉದ್ದೇಶದಿಂದ ಬಿಳಿನೆಲೆ ಹಾಲಿನ ಸೊಸೈಟಿ ಬಳಿ ರಿಕ್ಷಾ ನಿಲ್ಲಿಸಿದ್ದರು. ಈ ವೇಳೆ ಬಿಳಿನೆಲೆ ನಿವಾಸಿ ಮನೋಜ್‌(23) ಎಂಬಾತ ರಿಕ್ಷಾ ಬಳಿ ಬಂದು ಆಟೋದಲ್ಲಿದ್ದ ನನ್ನ ಪತ್ನಿ ಮನೋಜ್‌ ತಾಯಿಗೆ ಅವಾಚ್ಯವಾಗಿ ನಿಂದಿಸಿದ್ದಾರೆಂದು ಆರೋಪಿಸಿ ಚಂದ್ರಶೇಖರ್‌ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಚಂದ್ರಶೇಖರ್‌ ಅವರನ್ನು ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೋಜ್‌ ವಿರುದ್ಧ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ:70/2024.ಕಲಂ:323.324.504 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಲಾಗಿರುತ್ತದೆ. 

ಇದಕ್ಕೆ ಪ್ರತಿಯಾಗಿ ಚಂದ್ರಶೇಖರ್, ನನಗೆ ಕೈಯಿಂದ ಹಾಗೂ ಬೆಲ್ಟ್ ನಿಂದ ಹಲ್ಲೆ ನಡೆಸಿರುತ್ತಾರೆ ಹಾಗೂ ಸದರಿ ಹಲ್ಲೆಯಿಂದ ಗಾಯಗೊಂಡು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವುದಾಗಿ ಮನೋಜ್‌ ಪ್ರತಿದೂರು ನೀಡಿದ್ದು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ:71/2024.ಕಲಂ:323.324.504 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here