ಉಪ್ಪಿನಂಗಡಿ: ಹಿಜಾಬ್ ವಿವಾದ-ವಿಶ್ರಾಂತಿ ಕೊಠಡಿಯಲ್ಲೇ ದಿನ ಕಳೆದ ವಿದ್ಯಾರ್ಥಿಗಳು

0

ಉಪ್ಪಿನಂಗಡಿ: ಹಿಜಾಬ್ ವಿಚಾರವಾಗಿ ಸರ್ಕಾರಿ ನಿಯಮಾವಳಿಯನ್ನು ಉಲ್ಲಂಸಿದ ಕಾರಣಕ್ಕಾಗಿ 24 ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರೂ ಅಮಾನತು ಆಗಿರುವ ವಿದ್ಯಾರ್ಥಿನಿಯರ ಪೈಕಿ ಹಲವರು ಮಂಗಳವಾರ ಕಾಲೇಜಿಗೆ ಬಂದು ತರಗತಿಗೆ ಪ್ರವೇಶಿಸಲು ಯತ್ನಿಸಿದರಾದರೂ ಅವಕಾಶ ನಿರಾಕರಿಸಲ್ಪಟ್ಟು ವಿಶ್ರಾಂತಿ ಕೊಠಡಿಯಲ್ಲೇ ದಿನ ಕಳೆದ ಘಟನೆ ವರದಿಯಾಗಿದೆ.

 ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು, ಸರ್ಕಾರದ ಆದೇಶ, ಕಾಲೇಜು ಅಭಿವೃದ್ದಿ ಸಮಿತಿಯ ನಿರ್ಣಯದ ಹೊರತಾಗಿಯೂ ಸತತವಾಗಿ ನಿಯಮ ಉಲ್ಲಂಸಿ ಹಿಜಾಬ್ ಧರಿಸಿಯೇ ಕಾಲೇಜು ಪ್ರವೇಶಿಸಲು ಉದ್ದೇಶಿಸಿದ್ದ 24 ಮಂದಿ ವಿದ್ಯಾರ್ಥಿನಿಯರನ್ನು ಕಳೆದ ಸೋಮವಾರ ಒಂದು ವಾರದ ಕಾಲ ಅಮಾನತುಗೊಳಿಸಲಾಗಿತ್ತು. ಇದಕ್ಕೂ ಮುನ್ನ ಇದೇ ಕಾರಣಕ್ಕಾಗಿ 7 ಮಂದಿ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿತ್ತು.

 ಸೋಮವಾರ ಅಮಾನತುಗೊಳಿಸಲ್ಪಟ್ಟ ವಿದ್ಯಾರ್ಥಿನಿಯರ ಪೈಕಿ ಹಲವರು ತಮಗೆ ಅಮಾನತು ಆದೇಶದ ಬಗ್ಗೆ ತಿಳಿದಿರಲಿಲ್ಲ ಎಂಬ ವಾದ ಮಂಡಿಸಿ ಮಂಗಳವಾರ ಕಾಲೇಜಿಗೆ ಬಂದಿದ್ದು, ಅವರಿಗೆ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಲಾಯಿತು. ಈ ಮಧ್ಯೆ ಕಳೆದ ಕೆಲ ದಿನಗಳಿಂದ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ ನಿಯಮವನ್ನು  ಪಾಲಿಸಿಕೊಂಡು ತರಗತಿಯಲ್ಲಿ ಹಾಜರಾಗುತ್ತಿದ್ದು, ಮಂಗಳವಾರವೂ 7 ಮಂದಿ ವಿದ್ಯಾರ್ಥಿನಿಯರು ಸಮವಸ ನಿಯಮ ಪಾಲನೆಯೊಂದಿಗೆ ತರಗತಿಯಲ್ಲಿ ಹಾಜರಾಗಿದ್ದರು. ಒಂದಷ್ಟು ವಿದ್ಯಾರ್ಥಿನಿಯರು ಗೊಂದಲದ ಕಾರಣಕ್ಕೆ ಗೈರು ಹಾಜರಾಗುತ್ತಿದ್ದು, ಕೆಲವೇ ಕೆಲವು ವಿದ್ಯಾರ್ಥಿನಿಯರು ಯಾರದ್ದೋ ಪ್ರಚೋದನೆಯಿಂದ ಹಿಜಾಬ್ ಧಾರಣೆಗೆ ಹಠ ಹಿಡಿದಂತಿದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here