ಪುತ್ತೂರು: ಪ್ರಗತಿ ಕಾಲೇಜ್ ಆಫ್ ಪ್ಯಾರಮೆಡಿಕಲ್ ಸಯನ್ಸ್ ಹಾಗೂ ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸಯನ್ಸ್ ಇದರ ವಾರ್ಷಿಕ ಕ್ರೀಡಾಕೂಟವು ಮೇ.23 ಮತ್ತು 24 ಎರಡು ದಿನಗಳ ಕಾಲ
ಇಲ್ಲಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡಿದ್ದು, ಮೇ.23ರಂದು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಮತ್ತು ಪ್ರಗತಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್
ಧ್ವಜಾರೋಹಣ ನೆರವೇರಿಸಿ, ಚಾಲನೆ ನೀಡಿದರು.
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರಗತಿ ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಧಾ ಶ್ರೀಪತಿ ರಾವ್ ಕ್ರೀಡಾಜ್ಯೋತಿ ಮೂಲಕ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇದರ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು, ಪ್ರಾಂಶುಪಾಲೆ ಅಂಕಿತ, ಪಿ.ಆರ್.ಓ ಸಂತೋಷ್ ರೈ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಇದರ ದೈಹಿಕ ಶಿಕ್ಷಕ ಸುಧಾಕರ ರೈ, ಕಬಡ್ಡಿ ಟ್ರೈನರ್ ಮನೋಹರ್ ಹಾಗೂ ಕೋಕೋ ಟ್ರೈನರ್ ಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕರಾದ ಮಾನಸ ಭಟ್ ಮತ್ತು ಕುಮಾರಿ ದೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,
ಕುಮಾರಿ ಅಂಕಿತಾ ಪ್ರಾರ್ಥಿಸಿದರು. ಈ ವೇಳೆ ಕಾಲೇಜಿನ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಸಹಿತ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಆಟೋಟಾ ಸ್ಪರ್ಧೆಯೂ ನಡೆಯಿತು.
ರಾಷ್ಟ್ರೀಯ ಕ್ರೀಡಾಪಟು, ಸಿಬ್ಬಂದಿ ದಿನೇಶ್ ಆಚಾರ್ಯ ಗೆ ಸನ್ಮಾನ…
ಪ್ರಗತಿ ಸಮೂಹ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ದಿನೇಶ್ ಆಚಾರ್ಯ ಶೆಟ್ಟಿಮಜಲು ಇವರನ್ನು ಸಂಸ್ಥೆಯ ಪರವಾಗಿ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್ ವೇದಿಕೆಯಲ್ಲಿ ಸನ್ಮಾನಿಸಿದರು.