ದ್ವಿತೀಯ ಪಿಯುಸಿ ಪರೀಕ್ಷೆ: ವಿವೇಕಾನಂದ ಪದವಿ ಪೂರ್ವಕಾಲೇಜಿಗೆ ಶೇ.96ಫಲಿತಾಂಶ

0
  • ವಿಜ್ಞಾನ ವಿಭಾಗದಲ್ಲಿ 594 ಅಂಕಗಳನ್ನು ಗಳಿಸಿದ ಮನ್ವಿತ ಎನ್ ಪಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ

 

ಪುತ್ತೂರು: 2021-22ನೇ ಶೈಕ್ಷಣಿಕ ವರ್ಷದದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವಕಾಲೇಜಿಗೆ ಶೇ 96ಫಲಿತಾಂಶವನ್ನು ಪಡೆದಿದೆ.


ವಿಜ್ಞಾನ ವಿಭಾಗದಲ್ಲಿ 594 ಅಂಕಗಳನ್ನು ಗಳಿಸುವುದರ ಮೂಲಕ ಮನ್ವಿತ ಎನ್ ಪಿ ಇವರು ಪುತ್ತೂರು ತಾಲೂಕಿಗೆ ಮತ್ತು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರು ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ ದಲ್ಲಿ 100, ಗಣಿತಶಾಸ್ತ್ರದಲ್ಲಿ 100, ಜೀವಶಾಸ್ತದಲ್ಲಿ 100, ಸಂಸ್ಕೃತದಲ್ಲಿ 100 ಮತ್ತು ಇಂಗ್ಲಿಷ್ 94 ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು 594 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿಯನ್ನುತಂದಿದ್ದಾರೆ. ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾದಂಪತಿ ಪುತ್ರಿ.

ವಿಜ್ಞಾನ ವಿಭಾಗದಲ್ಲಿ589 ಅಂಕಗಳನ್ನು ಗಳಿಸುವುದರ ಮೂಲಕ ಸ್ತುತಿ ಎಂ. ಎಸ್‌ ಇವರು ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.ಇವರು ಭೌತಶಾಸ್ತ್ರದಲ್ಲಿ 99, ರಸಾಯನಶಾಸ್ತçದಲ್ಲಿ 100, ಗಣಿತಶಾಸ್ತ್ರದಲ್ಲಿ 100, ಜೀವಶಾಸ್ತ್ರದಲ್ಲಿ 100, ಇಂಗ್ಲಿಷ್ 90 ಮತ್ತು ಸಂಸ್ಕೃತದಲ್ಲಿ 100 ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು 589 ಅಂಕಗಳನ್ನು ಗಳಿಸಿರುತ್ತಾರೆ. ಈಕೆ ನೆಹರೂನಗರದ ಶ್ರೀಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಎಂ ಇವರ ಸುಪುತ್ರಿ.ಅದೇರೀತಿವಿಜ್ಞಾನ ವಿಭಾಗದಲ್ಲಿ 589 ಅಂಕಗಳನ್ನು ಗಳಿಸುವುದರ ಮೂಲಕ ಪ್ರಾಪ್ತಿ ಗಂಭೀರ್‌ ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ಭೌತಶಾಸ್ತ್ರದಲ್ಲಿ 98, ರಸಾಯನಶಾಸ್ತçದಲ್ಲಿ 100, ಗಣಿತಶಾಸ್ತ್ರದಲ್ಲಿ 100, ಜೀವಶಾಸ್ತ್ರದಲ್ಲಿ 97, ಇಂಗ್ಲಿಷ್ 94 ಮತ್ತು ಸಂಸ್ಕೃತದಲ್ಲಿ 100 ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು 589 ಅಂಕಗಳನ್ನು ಗಳಿಸಿರುತ್ತಾರೆ. ಈಕೆ ಪುತ್ತೂರಿನ ಕೈಕಾರದ ವಿರೇಂದ್ರಎನ್‌ ಗಂಭೀರ್ ಮತ್ತು ಸೌಮ್ಯದಂಪತಿ ಪುತ್ರಿ.  ವಿಜ್ಞಾನ ವಿಭಾಗದಲ್ಲಿ 589 ಅಂಕಗಳನ್ನು ಗಳಿಸುವುದರ ಮೂಲಕ ಎಂ. ವಿಶಾಖ್‌ ಕಾಮತ್‌ ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರ ದಲ್ಲಿ 99, ಗಣಿತಶಾಸ್ತ್ರದಲ್ಲಿ 100, ಗಣಕ ವಿಜ್ಞಾನದಲ್ಲಿ 100, ಇಂಗ್ಲಿಷ್ 90 ಮತ್ತು ಸಂಸ್ಕೃತದಲ್ಲಿ 100 ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು 589 ಅಂಕಗಳನ್ನು ಗಳಿಸಿರುತ್ತಾರೆ.ಈತನು ಪುತ್ತೂರಿನ ಬೊಳುವಾರಿನ ಎಂ. ವಿದ್ಯಾಧರ್‌ ಕಾಮತ್ ಮತ್ತು ಎಂ. ಮುಕ್ತ ಕಾಮತ್‌ದಂಪತಿ ಪುತ್ರ.

ವಾಣಿಜ್ಯ ವಿಭಾಗದಲ್ಲಿ ದೀಪ್ನಾಜೆ 593 ಅಂಕಗಳನ್ನು ಪಡೆಯುವುದರ ಮೂಲಕ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈಕೆ ಅರ್ಥಶಾಸ್ತ್ರದಲ್ಲಿ 100, ವ್ಯವಹಾರ ಅಧ್ಯಯನದಲ್ಲಿ 99, ಲೆಕ್ಕಶಾಸ್ತ್ರದಲ್ಲಿ 100, ಸಂಖ್ಯಾಶಾಸ್ತçದಲ್ಲಿ 100, ಇಂಗ್ಲೀಷ್ 95 ಮತ್ತು ಸಂಸ್ಕೃತದಲ್ಲಿ 99 ಅಂಕಗಳನ್ನು ಗಳಿಸಿರುತ್ತಾರೆ. ಈಕೆ ಕಾಸರಗೋಡಿನ ಮುಂಡಿತ್ತಡ್ಕದ ಎಸ್. ನಾರಾಯಣ ಮತ್ತು ಪುಷ್ಪ ಕೆ ದಂಪತಿಪುತ್ರಿ.

ವಾಣಿಜ್ಯ ವಿಭಾಗದಲ್ಲಿ 588 ಅಂಕಗಳನ್ನು ಪಡೆಯುವುದರ ಮೂಲಕ ಚೈತ್ರಾ ಎನ್‌ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಈಕೆ ಅರ್ಥಶಾಸ್ತçದಲ್ಲಿ 100, ವ್ಯವಹಾರಅಧ್ಯಯನದಲ್ಲಿ 99, ಲೆಕ್ಕಶಾಸ್ತçದಲ್ಲಿ 100, ಸಂಖ್ಯಾಶಾಸ್ತçದಲ್ಲಿ100, ಇಂಗ್ಲೀಷ್ 91 ಮತ್ತು ಹಿಂದಿಯಲ್ಲಿ 98 ಅಂಕಗಳನ್ನು ಗಳಿಸಿರುತ್ತಾರೆ. ಈಕೆಬಂಟ್ವಾಳ ತಾಲೂಕಿನ ಕಡೇಶ್ವಾಲ್ಯದ ಚಂದ್ರ ಮತ್ತು ಶಶಿಕಲಾ ದಂಪತಿಗಳ ಪುತ್ರಿ, ಕಲಾ ವಿಭಾಗದಲ್ಲಿ 580 ಅಂಕಗಳನ್ನು ಪಡೆಯುವುದರ ಮೂಲಕ ಉಡುಪಿಯ ಹೆಬ್ರಿಯ ಸಹದೇವ ಶೆಟ್ಟಿ ಮತ್ತು ವಸಂತ ಶೆಟ್ಟಿಇವರ ಪುತ್ರ ವಾಸು ದೇವ ತಿಲಕ್‌ ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.ಈತನುಕನ್ನಡದಲ್ಲಿ 95, ಇಂಗ್ಲೀಷ್ 90, ಇತಿಹಾಸ 99, ಅರ್ಥಶಾಸ್ತç 100, ಸಮಾಜಶಾಸ್ತ್ರ 96 ಮತ್ತು ರಾಜ್ಯಶಾಸ್ತ್ರದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ.579 ಅಂಕಗಳನ್ನು ಪಡೆಯುವುದರ ಮೂಲಕ ಉರಿಮಜಲಿನ ವಿಶ್ವನಾಥ ಎಂ ಮತ್ತು ವಿದ್ಯಾ ಕೆ ಇವರ ಪುತ್ರಿ ದಿಶಾ ಎಂಇವರು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಈಕೆ ಸಂಸ್ಕತದಲ್ಲಿ 100, ಇಂಗ್ಲೀಷ್ ನಲ್ಲಿ 90, ಇತಿಹಾಸ 97, ಅರ್ಥಶಾಸ್ತ್ರ 100, ಸಮಾಜಶಾಸ್ತ್ರ98 ಮತ್ತು ರಾಜ್ಯಶಾಸ್ತ್ರದಲ್ಲಿ 94 ಅಂಕಗಳನ್ನು ಗಳಿಸಿದ್ದಾರೆ. 579 ಅಂಕಗಳನ್ನು ಪಡೆಯುವುದರ ಮೂಲಕ ವರ್ಷಾ ಎ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.ಈಕೆ ಕನ್ನಡ 97, ಇಂಗ್ಲೀಷ್ ನಲ್ಲಿ 90, ಇತಿಹಾಸ99, ಅರ್ಥಶಾಸ್ತ್ರ 97, ಸಮಾಜಶಾಸ್ತ್ರ 98 ಮತ್ತು ರಾಜ್ಯಶಾಸ್ತ್ರದಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ. ಈಕೆ ಶಿವಮೊಗ್ಗದ  ಭದ್ರಾವತಿಯ ಆನಂದರಾಜ್‌ಆರ್ ಮತ್ತು ದೀಪಾಲಕ್ಮೀ ಕೆ ದಂಪತಿ ಪುತ್ರಿ.

ವಿಜ್ಞಾನ ವಿಭಾಗದ ಒಟ್ಟು335 ಮಂದಿ ವಿದ್ಯಾರ್ಥಿಗಳಲ್ಲಿ 140 ಮಂದಿ ಡಿಸ್ಟಿಂಕ್ಷನ್, 164 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ 93.73 ಫಲಿತಾಂಶ, ವಾಣಿಜ್ಯ ವಿಭಾಗದ ಒಟ್ಟು264 ವಿದ್ಯಾರ್ಥಿಗಳಲ್ಲಿ 91 ಮಂದಿ ಡಿಸ್ಟಿಂಕ್ಷನ್ ಹಾಗೂ 124 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ 93.56 ಫಲಿತಾಂಶ, ಕಲಾ ವಿಭಾಗದ ಒಟ್ಟು46 ವಿದ್ಯಾರ್ಥಿಗಳಲ್ಲಿ 20 ಮಂದಿ ಡಿಸ್ಟಿಂಕ್ಷನ್, 19 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿಶೇ 100 ಫಲಿತಾಂಶ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರವೀಂದ್ರ ಪಿ, ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಶಿಕ್ಷಕ-ರಕ್ಷಕ ಸಂಘ ಹಾಗೂ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ವಸತಿ ನಿಲಯದಲ್ಲಿ ಇದ್ದುಕೊಂಡು ಅಧ್ಯಯನ ಮಾಡಿರುವ ಕಾರಣ ವಿಪುಲವಾದ ಸಮಯಾವಕಾಶ ದೊರಕಿತು. ಹೆತ್ತವರ ಮತ್ತು ಉಪನ್ಯಾಸಕರ ನಿರಂತರವಾದ ಉತ್ಸಾಹ ಭರಿತ ಮಾರ್ಗದರ್ಶನದಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಕಾಲೇಜಿನಲ್ಲಿ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ಸದಾ ಸಿಗುತ್ತಿತ್ತು. ದೈನಂದಿನ ಪಾಠವನ್ನು ಮನನ ಮಾಡಿದ ಕಾರಣ ಹಾಗೂ ಹೆತ್ತವರಿಂದ ಕಲಿಕೆಗಾಗಿ ದೊರೆತ ಹುರಿದುಂಬಿಸುವ ಮಾತು ಹಾಗೂ ಸಮಯ ಪ್ರಜ್ಞೆಯಿಂದ ಈ ಸಾಧನೆಗೈಯ್ಯಲು ಸಾಧ್ಯವಾಯಿತು-  ಮನ್ವಿತಎನ್ ಪಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

LEAVE A REPLY

Please enter your comment!
Please enter your name here