ಹಿರಿಯರ ತ್ಯಾಗ,ಬಲಿದಾನ ಅರಿವಿರಬೇಕು-ಎಸ್.ಅಂಗಾರ

0
  • ಸಂಸ್ಕಾರಯುತ ಶಿಕ್ಷಣ ಬದುಕಿಗೆ ಅಡಿಪಾಯ-ನಳಿನ್‌ ಕುಮಾರ್‌ ಕಟೀಲ್‌

ಸವಣೂರು : ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲೂ ದೊರಕುವುದರಿಂದ ಈಗ ಸರಕಾರಿ ಶಾಲೆಗಳಿಗೆ ಹೆಚ್ಚೆಚ್ಚು ದಾಖಲಾತಿಗಳು ಆಗುತ್ತಿವೆ.ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಬಂದರು,ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

 

IMG_20220625_173143

ಅವರು ಪಾಲ್ತಾಡಿ ಗ್ರಾಮದ ಕುಂಜಾಡಿ(ಸಂಸದರ ಮನೆ)ಯಲ್ಲಿ ಬಿಜೆಪಿ ಪಾಲ್ತಾಡಿ ಬೂತ್‌ ಸಂಖ್ಯೆ 70 ,ಮಂಜುನಾಥನಗರ ಸಿದ್ದಿ ವಿನಾಯಕ ಸೇವಾ ಸಂಘ,ವಿವೇಕಾನಮದ ಯುವಕ ಮಂಡಲ,ಶಾಲಾಭಿವೃದ್ದಿ ಸಮಿತಿ ಸರಕಾರಿ ಪ್ರೌಢಶಾಲೆ ಮಂಜುನಾಥನಗರ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಮಂಜುನಾಥನಗರದ ಎಸ್ಸೆಸ್ಸೆಲ್ಸಿ ವಿಭಾಗಕ್ಕೆ ನಾಲ್ಕು ಬಾರಿ ಶೇ.೧೦೦ ಫಲಿತಾಂಶ ದಾಖಲಿಸಿದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಗೂ ಅದ್ಯಾಪಕ ವೃಂದಕ್ಕೆ ಅಭಿನಂದನಾ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಬಡತನವಿತ್ತು,ಬಡತನದ ನಡುವೆ ಶಿಕ್ಷಣ ಪಡೆಯುವ ಅನಿವಾರ್ಯತೆಯೂ ಇತ್ತು.ಅಂತಹ ಕಷ್ಟದಲ್ಲೂ ಹಿರಿಯರು ತ್ಯಾಗ ಮಾಡಿ ಸಂಘಟನೆ,ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ.ಅ ಹಿರಿಯರ ತ್ಯಾಗ ಹಾಗೂ ಬಲಿದಾನದ ಅರಿವು ನಮಗಿರಬೇಕು ಎಂದರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದ ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ,ಸಂಸ್ಕಾರಯುತ ಶಿಕ್ಷಣ ಬದುಕಿಗೆ ಅಡಿಪಾಯ,ಎಷ್ಟೇ ವಿದ್ಯಾವಂತನಾದರೂ ಸಂಸ್ಕಾರವಿಲ್ಲದಿದ್ದರೆ ಅದು ಉಪಯೋಗಶೂನ್ಯ.ಸರಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಬದುಕು ರೂಪಿಸುವ ಶಕ್ತಿ ಇದೆ,ಎಂತಹ ಸಂದರ್ಭದಲ್ಲೂ ದೃತಿಗೆಡುವುದಿಲ್ಲ.ಮಂಜುನಾಥನಗರ ಸರಕಾರಿ ಶಾಲೆಯ ಸಾಧನೆ ಅಭಿನಂದನಾರ್ಹ.ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಶ್ರಮದಿಂದ ಇದು ಸಾಧ್ಯವಾಗಿದೆ.ನಿರಂತರವಾಗಿ ಈ ಗ್ರಾಮೀಣ ಭಾಗದ ಸರಕಾರಿ ಶಾಲೆ ಸಾಧನೆ ಮಾಡಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್‌ ಕಂಜಿಪಿಲಿ ಮಾತನಾಡಿ,ಮಕ್ಕಳ ಸಾಧನೆ ಹಾಗೂ ಶಿಕ್ಷಕರ ಶ್ರಮವನ್ನು ಗುರುತಿಸುವ ಮೂಲಕ ಮತ್ತೊಬ್ಬರಿಗೆ ಪ್ರೇರಣೆಯಾಗಿದೆ ಎಂದರು.

ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ,ಮಂಜುನಾಥನಗರ ಸರಕಾರಿ ಪ್ರೌಢಶಾಲೆಯ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ರಮೇಶ್‌,ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ ಉಪಸ್ಥಿತರಿದ್ದರು.

ಅಭಿನಂದನೆ ಸ್ವೀಕರಿಸಿ ಮಂಜುನಾಥನಗರ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಯಶೋಧಾ ಅವರು ,ವಿದ್ಯಾರ್ಥಿನಿ ಜೀವಿತಾ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಸವಣೂರು ಗ್ರಾ.ಪಂ. ಮಾಜಿ ಸದಸ್ಯ ಬಾಳಪ್ಪ ಪೂಜಾರಿ ಬಂಬಿಲದೋಳ,ಗ್ರಾ.ಪಂ.ಸದಸ್ಯ ಸತೀಶ್‌ ಅಂಗಡಿಮೂಲೆ,ಸಿದ್ದಿವಿನಾಯಕ ಸೇವಾ ಸಂಘದ ಕಾರ್ಯದರ್ಶಿ ಉದಯ ಬಿ.ಆರ್‌,ಬಿಜೆಪಿ ಬೂತ್‌ ಸಮಿತಿ ಕಾರ್ಯದರ್ಶಿ ಹೊನ್ನಪ್ಪ ಗೌಡ ಜಾರಿಗೆತ್ತಡಿ,ಗಣೇಶ್‌ ಶೆಟ್ಟಿ ಕುಂಜಾಡಿ,ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್‌ ಚೆನ್ನಾವರ ‌,ಅಶ್ವಿನಿ ಉದಯ್ ಅತಿಥಿಗಳನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಸುಳ್ಯ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಕೇಶ್‌ ರೈ ಕೆಡೆಂಜಿ,ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್‌ ಉದನಡ್ಕ,ಸವಣೂರು ಗ್ರಾ.ಪಂ,ಸದಸ್ಯರಾದ ಗಿರಿಶಂಕರ ಸುಲಾಯ,ತೀರ್ಥರಾಮ ಕೆಡೆಂಜಿ,ಸುಂದರಿ ಬಿ.ಎಸ್‌,ಹರಿಕಲಾ ರೈ,ಭರತ್‌ ರೈ,ತಾರಾನಾಥ ಸುವರ್ಣ ಬೊಳಿಯಾಲ ಮೊದಲಾದವರಿದ್ದರು.

ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಇಂದಿರಾ ಬಿ.ಕೆ ಸ್ವಾಗತಿಸಿ,ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷ ಅನ್ನಪೂರ್ಣ ಪ್ರಸಾದ್‌ ರೈ ಬೈಲಾಡಿ ವಂದಿಸಿದರು.ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here