ಫಾಳಿಲಾ ಕೋರ್ಸು ಪರೀಕ್ಷೆ:ಉಪ್ಪಿನಂಗಡಿ ಮಾಲಿಕ್ ದೀನಾರ್ ಮಹಿಳಾ ಶರೀಅತ್ ಕಾಲೇಜು ವಿದ್ಯಾರ್ಥಿನಿ

0
  • ಸಾರಾ ಸುಖೈನ ಕೇರಳ, ಕರ್ನಾಟಕದಲ್ಲೇ ಪ್ರಥಮ ರ್‍ಯಾಂಕ್
  • ದ್ವಿತೀಯ ಪಿಯುಸಿ: ಅವಳಿ-ಜವಳಿ ವಿದ್ಯಾರ್ಥಿನಿಯರ ಸಹಿತ ನಾಲ್ವರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

 

ಉಪ್ಪಿನಂಗಡಿ: ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡು ನಡೆಸಿದ 2021-22ನೇ ಸಾಲಿನ ದ್ವಿತೀಯ ವರ್ಷದ ಫಾಳಿಲಾ ಕೋರ್ಸು ಪರೀಕ್ಷೆಯಲ್ಲಿ ಉಪ್ಪಿನಂಗಡಿ ಮಾಲಿಕ್ ದೀನಾರ್ ಮಹಿಳಾ ಶರೀಅತ್ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಸಾರಾ ಸುಖೈನ ಕೇರಳ ಮತ್ತು ಕರ್ನಾಟಕದಲ್ಲೇ ಪ್ರಥಮ ರ್‍ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


ವಿದ್ಯಾರ್ಥಿನಿ ಸಾರಾ ಸುಖೈನ ಉಪ್ಪಿನಂಗಡಿಯ ಹೆಲ್ಮೆಟ್ ವ್ಯಾಪಾರಿ, ಕರಾಯ ನಿವಾಸಿ ಅಬ್ದುಲ್ ಹಮೀದ್ ಮತ್ತು ಆಯಿಷಾ ದಂಪತಿಯ ಪುತ್ರಿಯಾಗಿರುತ್ತಾರೆ.

ಪಿಯುಸಿ: 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ:
2021-22ನೇ ಸಾಲಿನ ದ್ವಿತೀಯ ಪಿಯುಸಿ. ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ, ಉಪ್ಪಿನಂಗಡಿ ನಿವಾಸಿ ಯು. ಮುಸ್ತಫಾ ಮತ್ತು ಸಾಹಿರಾ ಬಾನು ದಂಪತಿಯ ಪುತ್ರಿ ಮುಝ್ನಾ ಆಸಿಯಾ-೫೩೩ ಅಂಕ, ಹಿರೇಬಂಡಾಡಿ ನಿವಾಸಿ ಖಾಸಿಂ ಮತ್ತು ಜೊಹರಾಬಿ ದಂಪತಿಯ ಪುತ್ರಿ ಫಾತಿಮಾ-೫೩೦ ಅಂಕ, ಇಳಂತಿಲದ ಪೆದಮಲೆ ನಿವಾಸಿ ದಿವಂಗತ ಯು.ಕೆ. ಆದಂರವರ ಅವಳಿ-ಜವಳಿ ಪುತ್ರಿಯರಾದ ಸಂಶೀರಾ-೫೨೬ ಅಂಕ, ಸಮೀರಾ-೫೧೬ ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಹಾಜಿ ಮುಸ್ತಫಾ ಕೆಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here