ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಗೆ ಸಾಹಿತಿ ಉಲ್ಲಾಸ ಕೃಷ್ಣ ಪೈ ಪುತ್ತೂರು ಆಯ್ಕೆ

0

ಪುತ್ತೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಸಾಹಿತಿ ಉಲ್ಲಾಸ ಕೃಷ್ಣ ಪೈ ಪುತ್ತೂರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗುರುವಾರ ಮಂಗಳೂರಿನ ಪತ್ರಿಕಾಭವನದಲ್ಲಿ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದರು. ಗೌರವ ಪ್ರಶಸ್ತಿಗೆ ಮೂವರು ಹಿರಿಯ ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪುರಸ್ಕಾರ, ಮಾಧ್ಯಮ ಪುರಸ್ಕಾರ, ಸಂಘಟನಾ ಪುರಸ್ಕಾರಕ್ಕೆ ರಾಜ್ಯ, ಹೊರ ರಾಜ್ಯ ಮತ್ತು ಹೊರ ರಾಷ್ಟ್ರ ಮಟ್ಟದಲ್ಲಿ ವಿಶೇಷವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಉಲ್ಲಾಸ ಕೃಷ್ಣ ಪೈ ಪುತ್ತೂರು: ವೃತ್ತಿಯಲ್ಲಿ ಗೌರವ ಸಂದರ್ಶಕ ಶಿಕ್ಷಕರಾಗಿರುವ ಇವರು ಮೂರು ದಶಕಗಳಿಂದ ಉಚಿತ ಸೇವೆ ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ 6 ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ ರಚಿಸಿದ್ದಾರೆ. 25ಕ್ಕೂ ಅಧಿಕ ಭಾಷೆಗಳಲ್ಲಿ ಶಿಶುಪ್ರಾಸ, ಅಭಿನಯ ಗೀತೆಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ. 20ಕ್ಕೂ ಮಿಕ್ಕಿ ತುಳು ವಿಕಾಸಮಾಲೆಯ ಕೃತಿಗಳನ್ನು, ಇತರ ಭಾಷೆಯಲ್ಲಿ ನೂರಾರು ಕೃತಿಗಳನ್ನು ರಚಿಸಿದ್ದಾರೆ. ಕಡ್ಲೆಪುಂಡಿ, ಪುಳಿಂಕೊಟೆ ಬಾಂಬೆ ಮಿಠಾಯಿ, ಸಾಂತಾಣಿ, ಚಿತ್ರಾಕ್ಷರ ಶಬ್ದಬಂಧ, ಅಕ್ರೋಟು, ಚಿಲಿಪಿಲಿ ಗುರ್ಬಿ ಪಕ್ಕಿ, ಕಿಟ್ಟಣ್ಣ ಕುರ್ಲರಿ, ಮೋಕೆದ ಜೋಸ್ತಿ, ಕಮಲನ ಕಿಲಕಿಲ ಇವರ ತುಳು ವಿಕಾಸ ಮಾಲೆಯ ಕೃತಿಗಳು. ಅಕ್ಷರ ಮೋಜು, ಅಕ್ಷರ ವಿನೋದ, ಮೋಜಿನ ಕಲಿಕೆ, ಅಕ್ಷರ ಬರಿ ಚಿತ್ರ ಕಲಿ, ಹಾಡು ಬನ್ನಿ ಮಕ್ಕಳೆ ಮುಂತಾದವು ಇತರ ಕೃತಿಗಳು. ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡಮಿಯ ಪ್ರಶಸ್ತಿ, ಪುಟಾಣಿ ರತ್ತನ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿಯ ಗೌರವ ಪಡೆದಿದ್ದಾರೆ.

LEAVE A REPLY

Please enter your comment!
Please enter your name here