ಶ್ರೀ ಧಾಮಾ ಮಾಣಿಲದಲ್ಲಿ ಸಂಸ್ಕಾರ ಭಾರತಿ ದ.ಕ ಜಿಲ್ಲೆಯ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ವಂದೇಮಾತರಂ, ಗುರುವಂದನಾ ಕಾರ್ಯಕ್ರಮ

0
  • ವೈಯ್ಯಕ್ತಿಕ ಸಂಸ್ಕಾರದಿಂದ ವ್ಯಕ್ತಿತ್ವ ರೂಪಿಸಬಹುದು: ಮಾಣಿಲ ಶ್ರೀ

ವಿಟ್ಲ: ಹಿಂದೂ ಧರ್ಮದಲ್ಲಿ ನಾವಿಂದು ವರ್ಚಸ್ಸು ಮತ್ತು ತೇಜಸ್ಸನ್ನು ಕಳೆದುಕೊಳ್ಳುತ್ತಿದ್ದೇವೆ. ಮನೆಮನೆಗಳಿಗೆ ಸಂಸ್ಕಾರ ಕಲಿಸುವ ಕೆಲಸ ಸಂಸ್ಕಾರ ಭಾರತಿಯಿಂದಾಗಲಿ. ವೈಯ್ಯಕ್ತಿಕ ಸಂಸ್ಕಾರದಿಂದ ವ್ಯಕ್ತಿತ್ವ ರೂಪಿಸಬಹುದು ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.

ಅವರು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಂಸ್ಕಾರ ಭಾರತೀ ದ. ಕ. ಜಿಲ್ಲೆಯ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ನಡೆದ ವಂದೇಮಾತರಂ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಂಸ್ಕಾರ ಭಾರತಿಯ ದ.ಕ. ಜಿಲ್ಲಾ ಅಧ್ಯಕ್ಷರಾದ ಟಿ. ತಾರಾನಾಥ ಕೊಟ್ಟಾರಿ ಫರೆಂಗಿಪೇಟೆರವರು ಪ್ರಾಸ್ತಾವಿಕ ಮಾತುಗಳನ್ನಾಡಿ ವಿವಿಧ ಹಬ್ಬಗಳ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಸಂಸ್ಕಾರ ಭಾರತಿ ಮಾಡಿದೆ. ಕಲೆಯ ಮೂಲಕ ಸಂಸ್ಕಾರವನ್ನು ಕಲಿಸುವ ಕೆಲಸ ಸಂಸ್ಕಾರಭಾರತಿಯಿಂದ ನಿರಂತರವಾಗಿ ಆಗುತ್ತಿದೆ. ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲಾಗುತ್ತಿದೆ. ಸಂಸ್ಕಾರ ಭಾರತಿ ಮಾಡುತ್ತಿರುವ ಕಾರ್ಯ ಶ್ರೀಧಾಮದಲ್ಲಿ ನಡೆಯುತ್ತಿರುವುದರಿಂದ ಇಂದಿಲ್ಲಿ ಮಾಡಿದ ಕಾರ್ಯಕ್ರಮಕ್ಕೆ ಅರ್ಥಬರಲು ಸಾಧ್ಯವಿದೆ ಎಂದರು.

ವೈದಿಕ ವಿದ್ವಾಂಸರಾದ ವಿಜಯಕೃಷ್ಣ ಐತಾಳ್‌, ಪೂಂಜೂರು ಸರಪಾಡಿ, ಗೋಳ್ತಮಜಲು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಮಿತ್ತಳಿಕೆರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಕಾರ ಭಾರತಿ ದ.ಕ.ಜಿಲ್ಲಾ ಉಪಾಧ್ಯಕ್ಷರಾದ ರೂಪಲೇಖಾ ಪುತ್ತೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ, ಭಜನಾ ಸಂಕೀರ್ತಣಾಗಾರರು ಹಾಗೂ ಸಂಘಟಕರಾಗಿರುವ ವಿಜಯಕುಮಾರ್ ಭಟ್, ವಿಟ್ಲ ಹಾಗೂ ಹಿರಿಯ ಜಾನಪದ ಕಲಾವಿದೆ ಶಾರದಾ ಜಿ. ಬಂಗೇರ, ದೇವಸ್ಯಪಡೂರುರವರಿಗೆ ಈ ಸಂದರ್ಭದಲ್ಲಿ ಗುರುವಂದನೆ ಸಲ್ಲಿಸಿ ಅವರನ್ನು ಸನ್ಮಾನಿಸಲಾಯಿತು.

ತುಳಸಿದಾಸ್ ಶೆಣೈ ವಿಟ್ಲ ವಂದೇ ಮಾತರಂ ಹಾಡಿದರು. ವಿಜಯ ಶೆಟ್ಟಿ ಸಾಲೆತ್ತೂರುರವರು ವಂದೇ ಮಾತರಂನ ಮಹತ್ವವನ್ನು ತಿಳಿಸಿದರು. ಸಹಸಂಯೋಜಕರಾದ ಡಾ.ವಾರಿಜ ನೀರ್ಬೈಲ್ ರವರು ಆಶಯಗೀತೆಯನ್ನು ಹಾಡಿದರು. ತೃಶಾ ಶೆಟ್ಟಿ, ವಿಟ್ಲ ಜೇಸೀಸ್ ಆಂಗ್ಲಮಾಧ್ಯಮ‌ ಶಾಲಾ ಉಪಪ್ರಾಂಶುಪಾಲೆ ಜ್ಯೋತಿ ಶೆಣೈ, ಜಗದೀಶ್ ಕಡೆಗೋಳಿರವರು ಸನ್ಮಾನ ಪತ್ರ ವಾಚಿಸಿದರು. ಸಂಸ್ಕಾರ ಸೌರಭ ಅಳಿಕೆ ಇದರ ಸಂಯೋಜಕರಾದ ಸದಾಶಿವ ಅಳಿಕೆ ಸ್ವಾಗತಿಸಿದರು. ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಬಿ.ಸಿ.ರೋಡು ಕಾರ್ಯಕ್ರಮ ನಿರೂಪಿಸಿದರು.ಬಂಟ್ವಾಳ ತಾಲೂಕು ಸಂಯೋಜಕ ಮಂಜು ವಿಟ್ಲ ವಂದಿಸಿದರು. ಬಳಿಕ ಆರ್.ಕೆ.ಆರ್ಟ್ಸ್ ವಿಟ್ಲ ಇದರ ರಾಜೇಶ್ ವಿಟ್ಲ ರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

LEAVE A REPLY

Please enter your comment!
Please enter your name here