ಕಾಣಿಯೂರು: ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲೆಯಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ನ ರೂ ೭೫ ಸಾವಿರ ಅನುದಾನದಲ್ಲಿ ನಿರ್ಮಾಣವಾದ ಶೌಚಾಲಯವನ್ನು ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಉದ್ಯೋಗ ಖಾತರಿ ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಮತ್ತು ತಡೆಗೋಡೆ ರಚನೆ ಹಾಗೂ ಕಟ್ಟಡ ಕಾಮಗಾರಿಗೆ ಅನುದಾನ ಒದಗಿಸುವ ಭರವಸೆ ನೀಡಿದರು. ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ಮಾತನಾಡಿ, ಊರವರಿಂದ ನಡೆದುಕೊಂಡು ಬರುತ್ತಿರುವ ಎಲ್ಕೆಜಿ ಮತ್ತು ಯುಕೆಜಿ ತರಗತಿಯಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ತೀರ್ಥಕುಮಾರ್ ಪೈಕ, ಗ್ರಾ.ಪಂ.ಸದಸ್ಯರಾದ ಪ್ರವೀಣ್ಚಂದ್ರ ರೈ ಕುಮೇರು, ಸುನಂದ ಅಬ್ಬಡ, ಮೀರಾ, ತೇಜಕುಮಾರಿ ಉದ್ಲಡ್ಡ, ಗ್ರಾ.ಪಂ.ಮಾಜಿ ಸದಸ್ಯ ವೀರಪ್ಪ ಗೌಡ ಉದ್ಲಡ್ಡ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕಾರ್ಯದರ್ಶಿ ಪ್ರವೀಣ್ ನಾವೂರು, ಶಾಲಾ ಮುಖ್ಯಗುರು ಶಶಿಕಲಾ, ಶಿಕ್ಷಕಿಯರಾದ ಗೀತಾ, ಶೋಭಿತಾ, ಸುರೇಖಾ, ಶ್ರುತಿ, ದಿವ್ಯಾ, ಸುಶ್ಮಿತಾ, ಎಸ್ಡಿಎಂಸಿ ಉಪಾಧ್ಯಕ್ಷೆ ಸುಂದರಿ ದರ್ಖಾಸು, ಸದಸ್ಯರಾದ ತಿಮ್ಮಪ್ಪ ಉಪ್ಪಡ್ಕ, ಮಹೇಶ್ ಪೆರಿಂಜ, ಶ್ರೀಧರ ಆಚಾರ್ಯ ಅಬ್ಬಡ, ಉಷಾ ನಿಡ್ಡಾಜೆ, ಶಶಿಕಲಾ ಉಪ್ಪಡ್ಕ, ಬುಶ್ರಾ ಅಬ್ಬಡ, ಬುಶ್ರಾ ಮಾಲೇಂಗಿರಿ, ಭವ್ಯಾ ದರ್ಖಾಸು, ಚೆನ್ನಪ್ಪ ಕಾರಡ್ಕ, ಶಾಲಾ ಮುಖ್ಯಮಂತ್ರಿ ಛಾಯ ಅಬ್ಬಡ, ಉಪ ಮುಖ್ಯಮಂತ್ರಿ ಮಹಮ್ಮದ್ ಉಪಸ್ಥಿತರಿದ್ದರು. ಶಿಕ್ಷಕಿ ಶ್ರುತಿ ಸ್ವಾಗತಿಸಿ, ವಂದಿಸಿದರು.