ಪುತ್ತೂರು:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್(ಭಾರತ)ಇದರ ರಾಷ್ಟ್ರೀಯ ಮಟ್ಟದ ಫೌಂಡೇಶನ್ ಕಮ್ ಅವಾರ್ಡ್ಸ್ ಡೇ ಸಮ್ಮೇಳನದಲ್ಲಿ ನಡೆಯುವ ‘ಪ್ರಖ್ಯಾತ ಇಂಜಿನಿಯರ್ ಪ್ರಶಸ್ತಿ’ಗೆ ಪುತ್ತೂರು ಸಂಸ್ಥೆಯ ಸದಸ್ಯ ಪಡ್ನೂರು ಮತಾವು ನಿವಾಸಿ ಶಿವರಾಮ ಎಮ್.ಎಸ್.ಅವರು ಆಯ್ಕೆಯಾಗಿದ್ದಾರೆ.
ಮೇ 4ರಂದು ಮಹಾರಾಷ್ಟ್ರದ ನಾಸಿಕ್ ಬುದ್ಧ ವಿಹಾರ್ ರಾಡಿಸನ್ ಬ್ಲೂವಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಸನಪ್ ಅವರು ಪ್ರದಾನ ಮಾಡಲಿದ್ದಾರೆ.ಸಮ್ಮೇಳನದಲ್ಲಿ ಭಾರತದ ವಿವಿಧ ಭೌಗೋಳಿಕ ಸ್ಥಳಗಳ ಪ್ರಖ್ಯಾತ ಇಂಜಿನಿಯರ್‌ಗಳನ್ನು ಸನ್ಮಾನಿಸಲಿದ್ದು, ಇದರಲ್ಲಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆಗಳು, ಕಾರ್ಯಕ್ಷಮತೆ ಮತ್ತು ಕೊಡುಗೆಯನ್ನು ಗುರುತಿಸುವ ಗುರುತಾಗಿ ಪ್ರಖ್ಯಾತ ಇಂಜಿನಿಯರ್ ಪ್ರಶಸ್ತಿಯನ್ನು ನೀಡಲಾಗುತ್ತದೆ.ದಕ್ಷಿಣ ಕನ್ನಡದಿಂದ ಪುತ್ತೂರಿನ ಶಿವರಾಮ ಮತಾವು ಮತ್ತು ಬೆಳ್ತಂಗಡಿಯ ಸಂಪತ್‌ರತ್ನ ರಾವ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪುತ್ತೂರು ಘಟಕದಿಂದ ಶಿವರಾಮ್ ಮತಾವು, ಚೇತನ್, ವಿನೋದ್, ಹರೀಶ್ ಎಂ, ಆದರ್ಶ ಕದ್ರಿ ಮತ್ತು ಪ್ರಮೋದ್ ಕುಮಾರ್ ಅವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್
ಇಂಜಿನಿಯರ‍್ಸ್‌ನ ಪುತ್ತೂರು ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆ:
ಪಡ್ನೂರು ಸೇಸಪ್ಪ ಮತ್ತು ಲಲಿತಾ ದಂಪತಿ ಪುತ್ರರಾಗಿರುವ ಶಿವರಾಮ ಎಮ್.ಎಸ್.ಅವರು ವಸತಿ, ಕೈಗಾರಿಕಾ ಮತ್ತು ಎತ್ತರದ ಕಟ್ಟಡಗಳ ನಿರ್ಮಾಣದಲ್ಲಿ ಆರು ವರ್ಷಗಳ ಕಾಲ
ಜಿಲ್ಲೆಯಲ್ಲಿ ಮತ್ತು ಜಿಲ್ಲೆಯ ಹೊರಗಡೆ ಕೆಲಸ ನಿರ್ವಹಿಸಿದ್ದರು.ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹತ್ತು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, 12 ವರ್ಷಗಳಿಂದ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಅಲ್ಲಿಯೇ ತಂತ್ರಜ್ಞಾನ ಮತ್ತು ಅವರ ಸೇವೆಯನ್ನು ಮುಂದುವರಿಸಿದ್ದಾರೆ.ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿಎಚ್‌ಒಡಿಯಾಗಿಯೂ ಕೆಲಸ ನಿರ್ವಹಿಸಿರುವ ಇವರು, ಇಲಾಖೆ ಸಲಹಾ ಮೂಲಕ ಸಾರ್ವಜನಿಕ ಮತ್ತು ಖಾಸಗಿ ರಚನೆಗಳ ಮೂರನೇ ವ್ಯಕ್ತಿಯ ತಪಾಸಣೆಗಾಗಿ ಸೇವೆ, ಸೇತುವೆಗಳು, ಕಟ್ಟಡಗಳು, ಹೆದ್ದಾರಿ ಪಾದಚಾರಿ ಮಾರ್ಗಗಳು, ವಸ್ತು ಪರೀಕ್ಷೆ ಮತ್ತು ವರದಿ ಮಾಡುವಿಕೆ ಇತ್ಯಾದಿಗಳ ರಚನಾತ್ಮಕ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.ಇವರ ಪತ್ನಿ ಶ್ರೀಮತಿ ಮಮತಾ ಅವರು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫರ್ಮಾಸಿಸ್ಟ್ ಆಗಿದ್ದಾರೆ.ಹಿರಿಯ ಮಗ ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ 4ನೇ ವರ್ಷದ ಬಿಎಎಂಎಸ್ ಹಾಗೂ ಕಿರಿಯ ಮಗ ಬೆಂಗಳೂರು ಎನ್‌ಎಂಐಟಿಯಲ್ಲಿ ಬಿಇ(ಸಿಎಸ್‌ಸಿ ಇಂಜಿನಿಯರಿಂಗ್)ಓದುತ್ತಿದ್ದಾರೆ.