ಅಮ್ಚಿನಡ್ಕದಲ್ಲಿ ರಾತ್ರಿ ಪಾಳಿಯದಲ್ಲಿ ನೋಡುಗರ ಕಣ್ಮನ ಸೆಳೆದ ಮೊಬೈಲ್ ಟವರ್

0

ವಿಶೇಷ ವರದಿ: ಸುನೀಲ್ ಕಾವು

  • ಲೇಸರ್ ಬೆಳಕಿನಿಂದ ತ್ರಿವರ್ಣದಲ್ಲಿ ಕಂಗೊಳಿಸಿದ ಮೊಬೈಲ್ ಟವರ್
  • ಅಮ್ಚಿನಡ್ಕ ಕೆ.ಎಸ್ ಎರೇಂಜರ್‍ಸ್‌ನಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ

ಹೌದು.!!! ಆ.13ರಂದು ರಾತ್ರಿ ಇದ್ದಕ್ಕಿದ್ದಂತೆ ಕಾವು-ಅಮ್ಚಿನಡ್ಕ ಪರಿಸರದ ಜನತೆಯ ಮತ್ತು ಪುತ್ತೂರು-ಸುಳ್ಯ ಹೆದ್ದಾರಿಯ ಸಾಗುವ ವಾಹನ ಸವಾರರ ಕಣ್ಣೋಟ ಅಮ್ಚಿನಡ್ಕದಲ್ಲಿರುವ ಮೊಬೈಲ್ ಟವರ್‌ನ ಮೇಲೆ ಬಿದ್ದಿತ್ತು, ಮೊಬೈಲ್ ಟವರ್‌ನ್ನು ಸುಮಾರು 1 ಕಿಲೋ ಮೀಟರ್ ದೂರದಿಂದ ನೋಡುವಾಗಲೇ ಮೊಬೈಲ್ ಟವರ್ ತ್ರಿವರ್ಣದಿಂದ (ಕೇಸರಿ, ಬಿಳಿ, ಹಸಿರು) ಬಹಳ ಸುಂದರವಾಗಿ ಕಣ್ಮನ ಸೆಳೆಯುತ್ತಿತ್ತು, ಆದರೆ ಹತ್ತಿರ ಹೋಗಿ ನೋಡುವಾಗ ಮೊಬೈಲ್ ಟವರ್‌ನ ಸಮೀಪ ಯಾವುದೇ ಬೆಳಕಿನ ವ್ಯವಸ್ಥೆ ಮಾಡಿರಲಿಲ್ಲ, ಆದರೆ ದೂರದಿಂದ ನೋಡುವಾಗ ತ್ರಿವರ್ಣದಿಂದ ಟವರ್ ಕಂಗೊಳಿಸುತ್ತಿತ್ತು, ಜತೆಗೆ ಬಾನೆತ್ತರಕ್ಕೆ ತ್ರಿವರ್ಣವು ಕಾಮನಬಿಲ್ಲಿನಂತೆ ಕಾಣುತ್ತಿತ್ತು.

ಇಷ್ಟಕ್ಕೂ ಕಾರಣವೇನೆಂದು ತಿಳಿಯಲು ಸ್ವಲ್ಪ ಮುಂದೆ ಸಾಗಿದಾಗ ಇದರ ಸತ್ಯ ತಿಳಿಯಿತು. ಹೌದು..ಸುಮಾರು 23 ವರ್ಷಗಳಿಂದ ಅಮ್ಚಿನಡ್ಕದ ಹೃದಯ ಭಾಗದಲ್ಲಿ ವ್ಯವಹರಿಸುತ್ತಿರುವ ಕಟ್ಟಪುಣಿ ನಿವಾಸಿ ಸುಧೀರ್ ಗೌಡ ಮಾಲಕತ್ವದ ಕೆ.ಎಸ್ ಅರೇಂಜರ್ಸ್ ನವರು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಿದ ರೀತಿಯಾಗಿತ್ತು. ತಮ್ಮ ಅಂಗಡಿಯ ಬಳಿಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಮೊಬೈಲ್ ಟವರ್‌ಗೆ ತ್ರಿವರ್ಣದ 3ಡಿ ಲೇಸರ್ ಬೆಳಕನ್ನು ಪಸರಿಸುವ ಮೂಲಕ ಮೊಬೈಲ್ ಟವರ್‌ನ್ನು ತ್ರಿವರ್ಣದಲ್ಲಿ ಕಂಗೊಳಿಸುವಂತೆ ಮಾಡಿ ನೋಡುಗರ ಕಣ್ಮನ ಸೆಳೆದು ತಮ್ಮ ವಿಶೇಷ ಕ್ರಿಯೇಟಿವಿಟಿಯಿಂದ ಅಮೃತ ಮಹೋತ್ಸವದ ಮೆರುಗನ್ನು ಹೆಚ್ಚಿಸಿದ್ದಾರೆ.

LEAVE A REPLY

Please enter your comment!
Please enter your name here