ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0
  • ನಿವ್ವಳ ಲಾಭ ರೂ.86,248.54, ಡಿವಿಡೆಂಡ್ ಶೇ.14, ಬೋನಸ್ 62 ಪೈಸೆ

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ.23 ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಶುಭಪ್ರಕಾಶ್ ಎರಬೈಲುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಅರ್ಪಣಾರವರು 2021-22 ನೇ ಸಾಲಿನ ವರದಿ ವಾಚಿಸಿದರು. ಸಂಘದಲ್ಲಿ ಒಟ್ಟು 125 ಮಂದಿ ಸದಸ್ಯರಿದ್ದು 35 ಮಂದಿ ಸದಸ್ಯರು ಹಾಲನ್ನು ಹಾಕುತ್ತಿದ್ದಾರೆ. ಸಂಘವು ವರದಿ ವರ್ಷದಲ್ಲಿ ರೂ.86,248.54 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.14 ಡಿವಿಡೆಂಡ್ ಹಾಗೂ ಲೀಟರಿಗೆ 0.62 ಪೈಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್‌ರವರು ಮಾಹಿತಿ ನೀಡುತ್ತಾ, ಜಾನುವಾರುಗಳಿಗೆ ಸರಿಯಾದ ರೀತಿಯಲ್ಲಿ ಆಹಾರವನ್ನು ನೀಡುವುದರಿಂದ ಉತ್ತಮ ಗುಣಮಟ್ಟದ ಹಾಲನ್ನು ಪಡೆಯಬಹುದು, ಪ್ರತಿಯೊಬ್ಬರು ಕಡ್ಡಾಯವಾಗಿ ದನಗಳಿಗೆ ವಿಮೆ ಮಾಡಿಸಬೇಕು ಎಂದರು. ಒಕ್ಕೂಟದಿಂದ ದೊರೆಯುವ ಸವಲತ್ತುಗಳ ಬಗ್ಗೆಯೂ ಮಾಹಿತಿ ನೀಡಿದರು.

 

ಬಹುಮಾನ ವಿತರಣೆ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸಂಘದ ಸದಸ್ಯರುಗಳಿಗೆ ಈ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು. ಪ್ರಥಮ ಬಹುಮಾನವನ್ನು ಡೊಂಬಯ್ಯ ಗೌಡ, ದ್ವಿತೀಯ ಬಹುಮಾನವನ್ನು ಜಯರಾಮ ರೈ ಹಾಗೂ ತೃತೀಯ ಬಹುಮಾನವನ್ನು ಶುಭಪ್ರಕಾಶ್ ಎರಬೈಲು ಪಡೆದುಕೊಂಡರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಹರಿಕೃಷ್ಣ ಜೋಡುಕಾವಲು, ತಾರಾನಾಥ ಎರಕ್ಕಲ, ಪ್ರಸಾದ್ ಸೊರಕೆ, ಸಂಜೀವ ಆಳ್ವ ಬರಮೇಲು, ಹರಿಣಾಕ್ಷಿ ರೈ ಸಾಗು, ಬಾಳಪ್ಪ ಗೌಡ ಬಾಕುಡ, ಲೀಲಾವತಿ ರೈ ಕೋಡಂಬು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸುಹಾಸಿನಿ ಪ್ರಾರ್ಥಿಸಿದರು. ಅಧ್ಯಕ್ಷ ಶುಭಪ್ರಕಾಶ್ ಎರಬೈಲು ಸ್ವಾಗತಿಸಿದರು. ಉಪಾಧ್ಯಕ್ಷ ರಮಾನಾಥ ರೈ ಕೋಡಂಬು ವಂದಿಸಿದರು.

ಹಾಲಿನ ದರ ಏರಿಸಿ
ಒಕ್ಕೂಟದಿಂದ ಸದಸ್ಯರಿಗೆ ಕೊಡುವ ಹಾಲಿನ ದರ ರೂ.29 ಅತೀ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸಬೇಕು ಈ ಬಗ್ಗೆ ಒಕ್ಕೂಟ ಗಮನ ಹರಿಸಬೇಕು ಎಂದು ಸದಸ್ಯರಗಳು ಹೇಳಿದರು. ಇದಲ್ಲದೆ ಒಕ್ಕೂಟದಿಂದ ಸಿಗುವ ಸಲವತ್ತುಗಳ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಆದ್ದರಿಂದ ಈ ಬಗ್ಗೆ ಒಕ್ಕೂಟ ಗಮನಹರಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

` ಸಂಘವು ವರದಿ ವರ್ಷದಲ್ಲಿ ಸದಸ್ಯರಿಗೆ ಶೇ.14 ಡಿವಿಡೆಂಡ್ ಹಾಗೂ ಲೀಟರ್ ಹಾಲಿಗೆ 0.62 ಪೈಸೆ ಬೋನಸ್ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ವಿನಂತಿ’ – ಶುಭಪ್ರಕಾಶ್ ಎರಬೈಲು, ಅಧ್ಯಕ್ಷರು ತೆಗ್ಗು ಹಾ.ಉ.ಸ.ಸಂಘ

LEAVE A REPLY

Please enter your comment!
Please enter your name here