ಪಂಚಾಯತ್‌ನ ಷರತ್ತು ಉಲ್ಲಂಘನೆ-ಮುರದ ವಿವಾದಿತ ಹೊಟೇಲ್‌ನ ಪರವಾನಿಗೆ ರದ್ದು

0

ಕಬಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ

ಪುತ್ತೂರು:ಹೊಟೇಲ್ ಉದ್ಯಮಕ್ಕೆ ಪಂಚಾಯತ್‌ನಿಂದ ಪರವಾನಿಗೆ ಪಡೆದು ಬಳಿಕ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಿ ವಿವಾದಕ್ಕೆ ಕಾರಣವಾಗಿರುವ ಮುರದ ಬಾರ್‌ನ ಮ್ಹಾಲಕರು ಪಂಚಾಯತ್‌ರಾಜ್ ಕಾಯಿದೆಯನ್ನು ಉಲ್ಲಂಸಿರುವುದರಿಂದ ಪಂಚಾಯತ್‌ನಿಂದ ನೀಡಲಾಗಿರುವ ಹೊಟೇಲ್‌ನ ಪರವಾನಿಗೆ ರದ್ದು ಪಡಿಸುವುದಾಗಿ ಕಬಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯು ಆ.24ರಂದು ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗರವರ ಅಧ್ಯಕ್ಷತೆಯಲ್ಲಿ ನಡೆಯಿತು.ಪಂಚಾಯತ್‌ನಿಂದ ಬಾರ್ ಮ್ಹಾಲಕರಿಗೆ ನೀಡಿದ ನೋಟೀಸ್‌ಗೆ ಅವರಿಂದ ಬಂದ ಉತ್ತರವನ್ನು ಪಿಡಿಓ ಆಶಾರವರು ಸಭೆಯಲ್ಲಿ ಮಂಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ಪಂಚಾಯತ್‌ನ ಗಮನಕ್ಕೆ ತಾರದೇ ಬಾರ್‌ಗೆ ಅನುಮತಿ ನೀಡಿರುವ ಅಬಕಾರಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇತರ ಎಲ್ಲಾ ಉದ್ದೇಶಗಳಿಗೆ ಪಂಚಾಯತ್‌ನಿಂದ ನಿರಾಕ್ಷೇಪಣಾ ಪತ್ರ ಕಡ್ಡಾಯವಾಗಿರುತ್ತದೆ.ಆದರೆ ಬಾರ್ ತೆರೆಯುವ ಸಂದರ್ಭದಲ್ಲಿ ಅಬಕಾರಿ ಇಲಾಖೆಗೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲವೇ ಎಂದು ಸದಸ್ಯರು ಪ್ರಶ್ನಿಸಿದರು.ಬಾರ್‌ಗೆ ಅನುಮತಿ ನೀಡಿರುವ ಬಗ್ಗೆ ಪಂಚಾಯತ್‌ನಿಂದ ಸಲ್ಲಿಸಿರುವ ಪತ್ರಕ್ಕೂ ಅಬಕಾರಿ ಇಲಾಖೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.ಹೊಟೇಲ್ ಉದ್ಯಮಕ್ಕೆ ಪಂಚಾಯತ್‌ನಿಂದ ಪರವಾನಿಗೆ ಪಡೆದುಕೊಂಡಿದ್ದು, ಬಾರ್ ಅಥವಾ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ಷರತ್ತು ವಿಽಸಿಯೇ ಪರವಾನಿಗೆ ನೀಡಲಾಗಿದೆ ಎಂದು ಪಿಡಿಓ ತಿಳಿಸಿದರು.ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು,ಹೊಟೇಲ್ ಉದ್ಯಮಕ್ಕೆ ಪರವಾನಿಗೆ ಪಡೆದು ಬಾರ್ ರೆಸ್ಟೋರೆಂಟ್ ನಡೆಸುವ ಮೂಲಕ ಪಂಚಾಯತ್‌ನ ಶರತ್ತುಗಳನ್ನು ಅವರು ಉಲ್ಲಂಸಿದ್ದಾರೆ.ಪಂಚಾಯತ್‌ರಾಜ್ ಕಾಯಿದೆಯನ್ನು ಉಲ್ಲಂಸಿರುವ ಅವರ ಉದ್ಯಮಕ್ಕೆ ಪಂಚಾಯತ್‌ನಿಂದ ನೀಡಿದ ಪರವಾನಿಗೆಯನ್ನು ರದ್ದುಪಡಿಸುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿ, ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.

ವಸತಿ ನಿಲಯದ ವಿರುದ್ಧ ಕೇಸು: ಮರದಲ್ಲಿರುವ ವಯಸ್ಕರ ವಸತಿ ನಿಲಯದಿಂದ ಕೊಳಚೆ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿದೆ.ಇದರಿಂದಾಗಿ ಪಕ್ಕದಲ್ಲಿರುವ ಅಂಗನವಾಡಿಗೆ ತೊಂದರೆಯಾಗುತ್ತಿದೆ.ಇದರ ಕುರಿತು ವಸತಿ ನಿಲಯದವರಿಗೆ ನೋಟೀಸ್ ನೀಡಿದ್ದರೂ ಅವರು ಕ್ರಮಕೈಗೊಂಡಿಲ್ಲ. ಇಂಗುಗುಂಡಿ ನಿರ್ಮಾಣದ ಕಾಮಗಾರಿಯು ಪ್ರಗತಿಯಲ್ಲಿರುವುದಾಗಿ ಅವರು ಹೇಳಿರುತ್ತಾರೆ ಎಂದು ಪಿಡಿಓ ತಿಳಿಸಿದರು.ಈ ಕುರಿತು ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ, ನೊಟೀಸ್ ನೀಡಲಾಗುವುದು.ನಂತರವೂ ಕ್ರಮಕೈಗೊಳ್ಳದಿದ್ದರೆ ಅವರ ವಿರುದ್ಧ ಕೇಸು ದಾಖಲಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸ್ವಚ್ಚತೆಗಾರ ಸಿಬ್ಬಂದಿಗೆ ವಾರದ ಕಾಲಾವಕಾಶ: ಪಂಚಾಯತ್‌ನಲ್ಲಿ ಸ್ವಚ್ಚತೆಗಾರ ಹುದ್ದೆಗೆ ಅನುಕಂಪದ ಆಧಾರದಲ್ಲಿ ಸುಪ್ರೀತ್‌ರವರನ್ನು ನೇಮಕ ಮಾಡಲಾಗಿದೆ.ಆದರೆ ಈಗ ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಅವರು ದರ್ಪದಿಂದ ವರ್ತಿಸುತ್ತಿರುವುದಲ್ಲದೆ ತ್ಯಾಜ್ಯ ಸಂಗ್ರಹಣೆಯು ಬಾಕಿ ಉಳಿದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆ ನಡೆಯಿತು.ಸ್ವಚ್ಚತೆಗಾರರಿಗೆ ಮೂರು ಬಾರಿ ನೊಟೀಸ್ ನೀಡಿದ್ದರೂ ಅದಕ್ಕೆ ಸರಿಯಾದ ಉತ್ತರ ನೀಡಿಲ್ಲ.ಅವರು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಘಟಕದಲ್ಲಿರುವ ಲಕ್ಷಾಂತರ ಮೌಲ್ಯದ ಪ್ಯಾಂಪರ‍್ಸ್ ಬರ್ನಿಂಗ್ ಯಂತ್ರ ಕೆಟ್ಟುಹೋಗಿದೆ ಎಂದು ಪಿಡಿಓ ತಿಳಿಸಿದರು.ಇದಕ್ಕಾಗಿ ಸಭೆಯ ಅಭಿಪ್ರಾಯದಂತೆ, ಸ್ವಚ್ಚತೆಗಾರ ಸುಪ್ರೀತ್‌ರವರನ್ನು ಸಭೆಗೆ ಕರೆಯಿಸಿ ಅವರಿಗೆ ಸ್ವಚ್ಚತೆಗಾರನ ಕರ್ತವ್ಯವದ ಬಗ್ಗೆ ತಿಳಿಸಲಾಯಿತು.ಸ್ವಚ್ಚವಾಹಿನಿ ವಾಹನದ ಚಾಲಕಿಗೆ ವಾಹನ ಚಾಲನೆಯ ಸರಿಯಾದ ಅರಿವಿಲ್ಲ. ಹೀಗಾಗಿ ನನಗೆ ಜೀವಭಯವಿದೆ.ಇದಕ್ಕಾಗಿ ವಾಹನದಲ್ಲಿ ತೆರಳಿ ತ್ಯಾಜ್ಯ ಸಂಗ್ರಹಣೆ ನನ್ನಿಂದ ಸಾಧ್ಯವಿಲ್ಲ.ನಾನು ನಡೆದುಕೊಂಡೇ ತ್ಯಾಜ್ಯ ಸಂಗ್ರಹಿಸುವುದಾಗಿ ಸುಪ್ರೀತ್ ತಿಳಿಸಿದರು. ಇದರ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಅವರಿಗೆ ಒಂದು ತಿಂಗಳ ಕಾಲಾವಕಾಶ ನೀಡಿ, ಆ ಬಳಿಕವೂ ಅವರು ನಡತೆ ಸರಿಪಡಿಸಿಕೊಳ್ಳದಿದ್ದರೆ ಕರ್ತವ್ಯದಿಂದ ವಜಾ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಾಗೃತಿ, ಬಳಿಕ ದಂಡ: ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕಬಕದ ವರ್ತಕರಲ್ಲಿ ಜಾಗೃತಿ ಮೂಡಿಸಲಾಗುವುದು.ಆ ಬಳಿಕವೂ ಅವರು ಮುಂದುವರಿಸಿದರೆ ದಂಡ ಹಾಕುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿದ್ಯುತ್ ಬಿಲ್ ಸರಕಾರ ಮನ್ನಾ ಮಾಡಲಿ: ಗ್ರಾಮಸ್ಥರಿಗೆ ಕುಡಿಯುವ ನೀರು, ಬೀದಿ ದೀಪಕ್ಕೆ ಬಳಕೆಗೆ ವಿದ್ಯುತ್ ಬಳಕೆಯಾಗಿದ್ದು ಪಂಚಾಯತ್‌ನಿಂದ ಮೆಸ್ಕಾಂಗೆ ಪಾವತಿಸಲು ಬಾಕಿಯಿರುವ ವಿದ್ಯುತ್ ಬಿಲ್‌ನ್ನು ಸರಕಾರ ಮನ್ನಾ ಮಾಡಬೇಕು.ಸಂಜೀವಿನಿ ಒಕ್ಕೂಟದ ಗೌರವ ಧನ ಏರಿಕೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಸದಸ್ಯರಾದ ನಝೀರ್, ಶಾಬಾ, ರಾಜೇಶ್, ಗೀತಾ, ಪ್ರೀತಾ, ಸುಶೀಲ, ಪುಷ್ಪಾ ಸಭೆಯಲ್ಲಿ ಉಪಸ್ಥಿತರಿದ್ದರು.ಪಿಡಿಓ ಆಶಾ ಇ.ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here