ಶ್ರೀ ಹೊಸಮ್ಮ ದೈವಸ್ಥಾನ,ಪಲ್ಲತ್ತಡ್ಕದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕ್ರೀಡೋತ್ಸವ ಸನ್ಮಾನ ಕಾರ್ಯಕ್ರಮ

0
  • ಯುವ ಶಕ್ತಿ ಒಂದು ಅದ್ಬುತ ಶಕ್ತಿ: ಎಸ್.ಬಿ.ಜಯರಾಮ ರೈ ಬಳಜ್ಜ

ಕೆಯ್ಯೂರು:  ಶ್ರೀ ಹೊಸಮ್ಮ ದೈವಸ್ಥಾನ,ಪಲ್ಲತ್ತಡ್ಕ,ಹಾಗೂ ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ, ಪಲ್ಲತ್ತಡ್ಕ ಇದರ ಆಶ್ರಯದಲ್ಲಿ 7ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕ್ರೀಡೋತ್ಸವದ   ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ವರ್ದೆಗಳು ಅ.28ರಂದು ಹೊಸಮ್ಮ ದೈವಸ್ಥಾನ ಪಲ್ಲತ್ತಡ್ಕದ ವಠಾರದಲ್ಲಿ ನಡೆಯಿತು.

ಶ್ರೀ ಹೊಸಮ್ಮ ದೈವಸ್ಥಾನದ ನಿತ್ಯಕರ್ಮಿ ಮೋನಪ್ಪ ಪೂಜಾರಿ ಪಲ್ಲತ್ತಡ್ಕ ಹೊಸಮ್ಮ ದೈವಕ್ಕೆ ಪ್ರಾರ್ಥನೆ ಸಲ್ಲಿಸಿ, ದೀಪ ಪ್ರಜ್ವಲಿಸುವ ಮೂಲಕ  ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ದಿವಾಕರ ಪೂಜಾರಿ ಪಲ್ಲತ್ತಡ್ಕ ವಹಿಸಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.  ಮುಖ್ಯ ಅತಿಥಿಗಳಾಗಿ ಕೆಯ್ಯೂರು ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಕೆಯ್ಯೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ, ನಿವೃತ್ತ ಮೆಸ್ಕಾಂ  ಜನಾರ್ದನ ಗೌಡ, ಶ್ರೀ ಹೊಸಮ್ಮ ದೈವಸ್ಥಾನ ಪಲ್ಲತ್ತಡ್ಕ ದರ್ಶನ ಪಾತ್ರಿ ಕೊರಗಪ್ಪ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ದೈವ ನರ್ತಕರಾದ ನೇಮು ಪರವ ಮಾಡಾವು, ಶೀನ ಅಜಿಲ ಕಣಿಯಾರು, ನಾಟಿ ವೈದ್ಯೆ ವೆಂಕಮ್ಮ ಕೆಯ್ಯೂರು, ಇವರನ್ನು ಸ್ಮರಣಿಕೆ ,ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ಕೆಪಿಎಸ್  ಕೆಯ್ಯೂರು ಶಾಲೆಯ ಎಸ್ ಎಸ್ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆಯಾದ ಸುಮಾರು 11 ಮಂದಿ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಶ್ರೀ ಹೊಸಮ್ಮ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ವಹಿಸಿ ಯುವ ಶಕ್ತಿ ಒಂದು ಅದ್ಬುತ ಶಕ್ತಿ , ಯುವಕರ ಒಗ್ಗಟಿನಿಂದ  ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯು ಒಂದು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಅವರು ನಮ್ಮ ದೇಶದ ಸಂಪತ್ತು, ರಾಷ್ಟ್ರದ ಸಂಪತ್ತು, ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.  ಮುಖ್ಯ ಅತಿಥಿಗಳಾಗಿ ಶ್ರೀ ಹೊಸಮ್ಮ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಜಯಂತ ನಡುಬೈಲು, ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು ಸಂಚಾಲಕ ಬಾಸ್ಕರ ಆಚಾರ್ ಇಂದಾರ್, ಶ್ರೀ ಹೊಸಮ್ಮ ದೈವಸ್ಥಾನ ಪಲ್ಲತ್ತಡ್ಕ ವ್ಯವಸ್ಥಾಪನಾ ಸಮಿತಿ  ಕೋಶಾಧಿಕಾರಿ ಸದಾಶಾವ ಭಟ್ ಎ, ಕುಟುಂಬದ ಹಿರಿಯರಾದ ರಾಜೀವಿ ಪೂಜಾರಿ, ಜಿನ್ನಪ್ಪ ಪೂಜಾರಿ ಪಲ್ಲತ್ತಡ್ಕ ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಲ್ಲತ್ತಡ್ಕ ಸರ್ವಸದಸ್ಯರು  ಮುಖ್ಯ ಅತಿಥಿಗಳಿಗೆ ಹೂ, ಸ್ಮರಣಿಕೆ  ನೀಡಿ ಸಹಕರಿಸಿದರು. ಸದಸ್ಯರಾದ ಪ್ರತಾಪ್ ಸ್ವಾಗತಿಸಿ, ಪುನೀತ್ ಕಾಪುತ್ತಡ್ಕ ವಂದಿಸಿ, ಸಂತೋಷ್ ಪೂಜಾರಿ   ಕೆಯ್ಯೂರು ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಕರಿಗೆ ವಿವಿದ ಆಟೋಟ ಸ್ವರ್ದೆಗಳು ನಡೆಯಿತು.  ಕಬಡ್ಡಿ ಪ್ರಥಮ ಶ್ರೀ ದುರ್ಗಾ ಕೆಯ್ಯೂರು, ದ್ವೀತಿಯ ಕೇಸರಿ ಫ್ರೆಂಡ್ಸ್ ಸಂತೋಷ್ ನಗರ, ವಾಲಿಬಾಲ್ ಪ್ರಥಮ ಶ್ರೀದುರ್ಗಾ ಕೆಯ್ಯೂರು, ದ್ವೀತಿಯ ಅಭಿನವ ಕೇಸರಿ ಮಾಡಾವು, ಹಗ್ಗ ಜಗ್ಗಾಟ ಪ್ರಥಮ ಹೊಸಮ್ಮ ಪ್ರೇಂಡ್ಸ್ ಪಲ್ಲತ್ತಡ್ಕ, ದ್ವೀತಿಯ ಶ್ರೀ ದುರ್ಗಾ ಕೆಯ್ಯೂರು, ಮೊಸರು ಕುಡಿಕೆ, ಸಂದೀಪ್ ಪಲ್ಲತ್ತಡ್ಕ, ಭವಾನಿಪಲ್ಲತ್ತಡ್ಕ, ಜಾರು ಕಂಬ ನಡಿಗೆ ನಾಗೇಶ ಪಡೆದುಕೊಂಡರು. ಸಮಗ್ರ ಪ್ರಶಸ್ತಿಯನ್ನು ಶ್ರೀ ದುರ್ಗಾ ಕೆಯ್ಯೂರು ಪಡೆದುಕೊಂಡಿತು.

LEAVE A REPLY

Please enter your comment!
Please enter your name here