ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ

0

ಚಿತ್ರ:ಸಂತೋಷ್ ಮೊಟ್ಟೆತ್ತಡ್ಕ

  • ಎಲ್ಲೇ ಇರಿ, ನಮ್ಮ ದೇಶದ, ಕಲಿತ ಸಂಸ್ಥೆಯನ್ನು ಮರೆಯದಿರಿ-ಪ್ರೊ|ಲಿಯೋ

ಪುತ್ತೂರು: ಶಿಕ್ಷಣದಿಂದ ವ್ಯಕ್ತಿಯ ವ್ಯಕ್ತಿತ್ವ ಬೆಳೆಯುತ್ತದೆ. ಶಿಕ್ಷಣವು ನಮ್ಮಲ್ಲಿನ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ವಿದ್ಯಾರ್ಥಿಗಳಿಗೆ ತಾವು ಕಲಿತ ಸಂಸ್ಥೆಯ ಬಗ್ಗೆ ಅಭಿಮಾನವಿರಲಿ. ದೇಶದ ಯಾವ ಮೂಲೆಯಲ್ಲಾದರೂ ಇರಿ, ಆದ್ರೆ ನಮ್ಮ ದೇಶದ ಹಾಗೂ ಕಲಿತ ಸಂಸ್ಥೆಯನ್ನು ಎಂದಿಗೂ ಮರೆಯದಿರಿ ಎಂದು ಫಿಲೋಮಿನಾ ಕಾಲೇಜಿನ ನಿರ್ಗಮಿತ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಆ.೨೯ ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜರಗಿದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮಲ್ಲಿ ಏನೂ ಇಲ್ಲ, ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಇರಕೂಡದು. ಯಾಕೆಂದರೆ ದೇವರು ಪ್ರತಿಯೋರ್ವನಲ್ಲೂ ಪ್ರತಿಭೆಯನ್ನು ಕರುಣಿಸಿರುತ್ತಾನೆ. ಅದರ ಅನಾವರಣವಾಗಬೇಕಿದೆ. ವಿದ್ಯಾರ್ಥಿಗಳು ಹೊಸತನವುಳ್ಳ ವಿಷಯಗಳ ಬಗ್ಗೆ ಹೆಚ್ಚೆಚ್ಚು ಅಧ್ಯಯನಾಶಕ್ತರಾಗಬೇಕು. ಸಾಮರಸ್ಯದಿಂದ ಬದುಕಲು ಎಲ್ಲರ ಮನಸ್ಸು ಒಗ್ಗೂಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ದೂರದೃಷ್ಟಿತ್ವದ ಕನಸಿನೊಂದಿಗೆ ಆರಂಭಗೊಂಡ ಈ ಫಿಲೋಮಿನಾ ವಿದ್ಯಾಸಂಸ್ಥೆಯು ಅನೇಕ ಪ್ರತಿಭಾವಂತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಈಗಾಗಲೇ ಅನಿವಾಸಿ ಉದ್ಯಮಿ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಮೈಕಲ್ ಡಿ’ಸೋಜರವರು ವಿದ್ಯಾಸಂಸ್ಥೆಯ ನವೀಕರಣದ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿರುವುದು ನಾವೆಲ್ಲಾ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಕೈಗೊಳ್ಳುವ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.

ಸನ್ಮಾನ:
ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉಪ ಪ್ರಾಂಶುಪಾಲ ಪ್ರೊ|ದಿನಕರ್ ರಾವ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ|ಜೆ.ಬಿ ಸಿಕ್ವೇರಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ|ವೆಂಕಟೇಶ್ವರಿ ಕೆ.ಎಸ್, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ|ಮೀನಾಕ್ಷಿ ಕೆ, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂಎ ಎಜ್ಯುಕೇಶನ್‌ನಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಎಂ.ಎ ಸಮಾಜಶಾಸ್ತ್ರದಲ್ಲಿ ಏಳನೇ ರ್‍ಯಾಂಕ್ ಗಳಿಸಿದ ಲೆ|ಜೋನ್ಸನ್ ಡೇವಿಡ್ ಸಿಕ್ವೇರಾ, ಡಾಕ್ಟರೇಟ್ ಪದವಿ ಗಳಿಸಿದ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ|ರಾಧಾಕೃಷ್ಣ ಗೌಡ ವಿ, ಸ್ನಾತಕೋತ್ತರ ಫಿಸಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ|ಪ್ರವೀಣ್ ಪಿ.ಡಿ’ಸೋಜ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ|ಆಶಿತ್ ವಿ.ಕೆ, ಕ್ರೀಡಾ ಸಾಧಕರಾದ ಸಿಂಚನಾ ಡಿ.ಗೌಡ(ಸರ್ಫಿಂಗ್), ನಾಚಪ್ಪ ಕೆ.ಡಿ(ಹಾಕಿ), ನೌಶಾದ್ ಅಬ್ದುಲ್ಲ(ಬ್ಯಾಡ್ಮಿಂಟನ್), ತನ್ವೀರ್ ಪಿ.ಎ, ಸೊಲಮಾನ್ ರೋಶನ್ ಜೋಸೆಫ್, ಧೀರಜ್ ಶ್ರೀನಿವಾಸ್, ಪ್ರಥಮೇಶ್ ಶ್ರೀಕಾಂತ್ ಮುರ್‍ಗೋಡು, ಮೊಹಮದ್ ಜುನೈದ್, ಪವನ್ ಟಿ.ಆರ್(ಫುಟ್‌ಬಾಲ್), ಎನ್‌ಸಿಸಿಯಲ್ಲಿ ದೆಹಲಿಯ ಆರ್‌ಡಿ ಪೆರೇಡ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ರಕ್ಷಾ ಅಂಚನ್ ಹಾಗೂ ಕಿರಣ್‌ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆ-ಸೆಟ್, ಸ್ಲೆಟ್ ಪರೀಕ್ಷೆಯನ್ನು ಪೂರ್ಣಗೊಳಿಸಿದ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ ವೃಂದಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಡಾ|ನೋರ್ಬರ್ಟ್ ಮಸ್ಕರೇನ್ಹಸ್, ಪ್ರೊ|ನಾಗಾರಾಜು, ಪ್ರೊ|ವಾಸುದೇವ, ಡಾ|ವಿಜಯ ಕುಮಾರ್ ಮೊಳೆಯಾರ್, ಪ್ರೊ|ಹರ್ಷಿತ್ ಆರ್, ಪ್ರೊ|ಶ್ರೀಮಣಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಚಂದ್ರಶೇಖರ್ ಹಾಗೂ ಪ್ರೊ|ಭಾರತಿ ಎಸ್.ರೈ, ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಎನ್‌ಸಿಸಿ ನಿರ್ದೇಶಕ ಲೆ|ಜೋನ್ಸನ್ ಡೇವಿಡ್ ಸಿಕ್ವೇರಾರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಗೌರವ ಅತಿಥಿಗಳಾದ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ್ ಎಸ್.ಆರಾನ್ಹಾ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ, ಜೊತೆ ಕಾರ್ಯದರ್ಶಿ ಮಹಾಲಸಾ ಪೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ವಾರ್ಷಿಕ ವರದಿ ಮಂಡಿಸಿದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಸನ್ಮಾನಿತ ಪ್ರೊ|ಲಿಯೋ ನೊರೋನ್ಹಾರವರ ಪರಿಚಯ ಮಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ|ಉದಯ ಕೆ ಸ್ವಾಗತಿಸಿ, ಸ್ಟಾಫ್ ಕಾರ್ಯದರ್ಶಿ ಪ್ರೊ|ಗಣೇಶ್ ಭಟ್ ವಂದಿಸಿದರು. ಉಪನ್ಯಾಸಕಿ ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಅಪರಾಹ್ನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಪ್ರೊ|ಲಿಯೋರವರಿಗೆ ಸನ್ಮಾನ..ಎದ್ದು ನಿಂತು ಗೌರವ ಸಲ್ಲಿಸಿದ ವಿದ್ಯಾರ್ಥಿ ಸಮೂಹ..
ಫಿಲೋಮಿನಾ ಕಾಲೇಜಿನಲ್ಲಿ ಹತ್ತು ವರ್ಷ ಸಹಾಯಕ ಪ್ರಾಧ್ಯಾಪಕರಾಗಿ, ಕಳೆದ ೧೧ ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿಗೆ ವರ್ಗಾವಣೆಗೊಂಡ ಪ್ರೊ|ಲಿಯೋ ನೊರೋನ್ಹಾರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸುವ ಸಂದರ್ಭ ಕಾಲೇಜಿನ ಇಡೀ ವಿದ್ಯಾರ್ಥಿ ಸಮೂಹ ಈ ಸಂದರ್ಭದಲ್ಲಿ ಎದ್ದು ನಿಂತು ಗೌರವ ಸಲ್ಲಿಸಿದರು. ಉಪನ್ಯಾಸಕ ವೃಂದ, ಆಡಳಿತ ಸಿಬ್ಬಂದಿ ವರ್ಗದವರೂ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಭಾವುಕರಾದ ಪ್ರೊ|ಲಿಯೋ ನೊರೋನ್ಹಾರವರು, ತಾನು ಮುಖ್ಯ ಅತಿಥಿಯಾಗಿ ಅಥವಾ ನಿರ್ಗಮಿತ ಪ್ರಾಂಶುಪಾಲರೆಂದು ಈ ಕಾಲೇಜಿಗೆ ಬಂದಿಲ್ಲ, ಕಾಲೇಜಿನ ಒಂದು ಭಾಗವಾಗಿ ತಾನಿಂದು ಬಂದಿದ್ದೇನೆ. ವಿದ್ಯಾರ್ಥಿಗಳ, ವಿದ್ಯಾರ್ಥಿಗಳ ಹೆತ್ತವರ, ಸಹೋದ್ಯೋಗಿಗಳ, ಹಿತೈಷಿಗಳ ಭಾವನೆಗಳನ್ನು ತಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ತನಗೆ ಎಲ್ಲಾ ರೀತಿಯಲ್ಲಿ ಸಹಕಾರವಿತ್ತ ಪ್ರತಿಯೋರ್ವರಿಗೂ ಕೃತಜ್ಞತೆಗಳು ಎಂದರು.

LEAVE A REPLY

Please enter your comment!
Please enter your name here