- ವೈಭವದ ಶೋಭಾಯಾತ್ರೆ, ಗಮನ ಸೆಳೆದ ಅಟ್ಟಿಮಡಿಕೆ
ಪುತ್ತೂರು: ಶ್ರೀ ವಿಷ್ಣು ಯುವಕ ಮಂಡಲ ಕೆಮ್ಮಾಯಿ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಕೆಮ್ಮಾಯಿ ಇದರ ಜಂಟಿ ಆಶ್ರಯದಲ್ಲಿ ಆ.28ರಂದು ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ಬಳಿ ೫ನೇ ವರ್ಷದ ಮೊಸರು ಕುಡಿಕೆ ಉತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೂಡಾಯೂರು ಆರಿಗೋ ಪೆರ್ಮುಂಡ ಗರಡಿಯ ಮುಖ್ಯಸ್ಥ ನರೇಂದ್ರ ಪಡಿವಾಳ್ ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಉದ್ಯಮಿ ವರದರಾಜ ಟ್ರೇಡರ್‍ಸ್‌ನ ಮ್ಹಾಲಕ ವೆಂಕಟ್ರಮಣ ನಾಯಕ್ ಇಂದಾಜೆ, ಶ್ರೀವಿಷ್ಣು ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ನಾಕ್, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಚಿದಾನಂದ ರೈ, ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ವಿಷ್ಣು ಯುವಕ ಮಂಡಲದ ಸದಸ್ಯ ಸುಧಾಕರ ನಾಕ್, ನಂದೀಶ್ ಬಡಾವು, ರಾಧಾಕೃಷ್ಣ ಹೆಗ್ಡೆ ಬಡಾವು, ರಾಧಾ ರೆಸಿಡೆನ್ಸಿಯ ಪ್ರವೀಣ್ ನ್ಯಾಕ್‌ರವರು ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯ ಮಂಜುನಾಥ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಹೊಸೊಕ್ಲು ವಂದಿಸಿದರು. ಸಂತೋಷ್, ರಾಜೇಶ್ ಹೊಸೊಕ್ಲು, ಉಜ್ವಲ್ ಬೀರ್ನಹಿತ್ಲು, ಜಯರಾಮ್ ಪೂಜಾರಿ ಬಡಾವು, ದೀಕ್ಷಿತ್ ಬೀರ್ನಹಿತ್ಲು, ಅಶೋಕ್ ಗೌಡ ಟಿಎಂಸಿಯವರು ಅತಿಥಿಗಳಿಗೆ ಹೂ ಗೂಚ್ಚ ನೀಡಿ ಸ್ವಾಗತಿಸಿದರು. ವಿಶ್ವನಾಥ ಬಳಕ್ಕ, ಹೇಮಚಂದ್ರ ಕೆಮ್ಮಾಯಿ, ಸುರೇಂದ್ರ ಕುಂಜಾರು, ಜಯೇಶ್ ತಾರಿಗುಡ್ಡೆ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಸ್ಪರ್ಧಾಕಾರ್ಯಕ್ರಮದಲ್ಲಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆ, ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿಭಿನ್ನ ರೀತಿಯ ಮನೋರಂಜನಾ ಆಟೋಟ ಸ್ಪರ್ಧೆಗಳು ನಡೆಯಿತು. ಯಶವಂತ್ ಹೊಸಹೊಕ್ಲು, ಅಕ್ಷಯ್ ಬೀರ್ನಹಿತ್ಲು ಪ್ರಕಾಶ್ ಬೋವುದಕಾಡು, ಯೋಗೀಶ್, ಪ್ರಕಾಶ್ ಹೊಸಹೊಕ್ಲು ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಉಮೇಶ್ ಗೌಡ ಕೆಮ್ಮಾಯಿಯವರು ಮಧ್ಯಾಹ್ನ ಭೋಜನ ಒದಗಿಸಿದ್ದರು.
ವೈಭವದ ಶೋಭಾಯಾತ್ರೆ: ಸಂಜೆ ಮೊಸರು ಕುಡಿಕೆ ಉತ್ಸವದ ವೈಭವದ ಶೋಭಾಯಾತ್ರೆಯು ನಡೆಯಿತು. ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯಿಂದ ಹೊರಟ ಶೋಭಾಯಾತ್ರೆಗೆ ಹಿರಿಯರಾದ ಸಂಜೀವ ನಾಯಕ್ ಕಲ್ಲೇಗ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಶೋಭಾಯಾತ್ರೆ ಕೆಮ್ಮಾಯಿ ಜಂಕ್ಷನ್, ಕೃಷ್ಣನಗರ, ಆನೆಮಜಲು ಕ್ರಾಸ್ ತನಕ ಸಾಗಿ ನಂತರ ಕೆಮ್ಮಾಯಿ ಜಂಕ್ಷನ್‌ಗೆ ಹಿಂತಿರುಗಿತು. ಶೋಭಾಯಾತ್ರೆಯಲ್ಲಿ ರಸ್ತೆ ಇಕ್ಕೆಲಗಳಲ್ಲಿ ಅಳವಡಿಸಲಾಗಿದ್ದ ಅಟ್ಟಿಮಡಿಕೆ ಒಡೆಯುವ ಸಾಹಸಮಯ ಸ್ಪರ್ಧೆಗಳು ಪ್ರೇಕ್ಷಕರ ಗಮನ ಸೆಳೆಯಿತು. ನಾಸಿಕ್ ಬ್ಯಾಂಡ್, ಕೀಲು ಕುದುರೆ, ಕಲ್ಲಡ್ಕದ ಬೊಂಬೆ ಕುಣಿತ, ಡಿಜೆ ಸದ್ದಿನೊಂದಿಗೆ ಸಾಗಿ ಬಂದ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಕಡಬ ಕೇಪು ಲಕ್ಷ್ಮೀ ಜನಾರ್ದನ ತಂಡ(ಪ್ರ), ಅಶ್ವ ಫ್ರೆಂಡ್ಸ್ ಬೀರ್‍ನಹಿತ್ಲು(ದ್ವಿ), ಬ್ರಹ್ಮನಗರ ಬಜರಂಗದಳ(ತೃ) ಹಾಗೂ ಶಿವಾಜಿ ಫ್ರೆಂಡ್ಸ್ ಪುರುಷರಕಟ್ಟೆ(ಚ) ಬಹುಮಾನಗಳನ್ನು ಪಡೆದುಕೊಂಡಿದೆ.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಕೋಡಿಂಬಾಡಿ ಅಶೋಕ್ ಕುಮಾರ್ ರೈಯವರು ಅಧ್ಯಕ್ಷತೆ ವಹಿಸಿದ್ದರು. ನಗರ ಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಲೀಲಾವತಿ ಕೃಷ್ಣನಗರ, ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಶ್ರೀವಿಷ್ಣು ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ನಾಕ್, ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಚಿದಾನಂದ ರೈ, ಪ್ರಣಾಮ್ ಎಂಟರ್‌ಪ್ರೈಸಸ್‌ನ ದಯಾನಂದ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊಸರುಕುಡಿಕೆ ಉತ್ಸವ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಯುವಕ ಮಂಡಲದ ಸದಸ್ಯ ಮಂಜುನಾಥ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಭಾರತ್, ವಿಘ್ನೇಶ್ ಹೊಸಹೊಕ್ಲು, ರಕ್ಷಿತ್ ಶೆಟ್ಟಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಜನಾರ್ದನ ಪೇರಲ್ತಡಿ, ಧನು ಪ್ರಸಾದ್ ಪ್ರದೀಪ್ ಭರತಪುರ, ಚೇತನ್ ಬಿ.ಯಸ್., ಯತೀಶ್, ಸುರೇಂದ್ರ ಬಡಾವು, ಶಶಿಧರ ಶ್ರೀ ರಾಮ್, ಸುರೇಶ್ ಮಡಿವಾಳ್, ಪ್ರಶಾಂತ್ ಇ, ಜೀವನ್ ಆರಿಗೊ, ರವೀಂದ್ರ ನ್ಯಾಕ್ ಒಪ್ಪಿಗೆ, ಲಿಂಗಪ್ಪ ಗೌಡ, ಗುರು ಪ್ರಸಾದ್ ಪ್ರಭು, ದಿಲೀಪ್ ಕೃಷ್ಣಪ್ಪ ಹರ್ಷಿತ್, ಈಶ್ವರ್ ಏಕ, ಚಂದ್ರಶೇಖರ ಅಣ್ಣಿ ಪೂಜಾರಿ ಬೀರ್ನಹಿತ್ಲು, ಅಶ್ವ ಫ್ರೆಂಡ್ಸ್ ಬೀರ್ನಹಿತ್ಲು ಇದರ ಸದಸ್ಯರು ಅರುಣ್, ವಸಂತ್, ಪ್ರಶಾಂತ್, ರೋಹಿತ್, ಜೀವನ್, ದೀಕ್ಷಿತ್ ಆರಿಗಾ, ಉಜ್ವಲ್, ಭವಿತ್, ವಿಶ್ವ, ರಂಜಿತ್ ಕಾರ್ಯಕ್ರಮದಲ್ಲಿ ಸಹಕರಿಸಿದರು.