ಪುತ್ತೂರು: ಜಿ.ಟಿ.ಎಂ ವುಡ್ ಫರ್ನಿಚರ‍್ಸ್ ಬೆಳಿಯೂರುಕಟ್ಟೆ ವೈಎಂಕೆ ಕಾಂಪ್ಲೆಕ್ಸ್‌ನಲ್ಲಿ ಆ.29ರಂದು ಶುಭಾರಂಭಗೊಂಡಿತು. ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು ದುವಾ ನೆರವೇರಿಸಿದರು. ಪಿಎಂಕೆ ದಅವಾ ಕಾಲೇಜಿನ ಮುದರ್ರಿಸ್ ಶಹೀರ್ ತಂಙಳ್ ನೇತೃತ್ವದಲ್ಲಿ ಮೌಲೀದ್ ಮಜ್ಲಿಸ್ ನಡೆಯಿತು.
ಕಠಿಣ ಪರಿಶ್ರಮದಿಂದ ಜಿ.ಟಿ.ಎಂ ಬೆಳೆದಿದೆ-ಸಾಜ
ಸಂಸ್ಥೆಯನ್ನು ಉದ್ಘಾಟಿಸಿದ ತಾ.ಪಂ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ಜಿ.ಟಿ.ಎಂ ವುಡ್ ಫರ್ನಿಚರ‍್ಸ್ ಸಂಸ್ಥೆಯು ಯುಸುಫ್ ಗೌಸಿಯಾ ಅವರ ಕಠಿಣ ಪರಿಶ್ರಮದಿಂದ ಬೆಳೆಯುತ್ತಿದ್ದು ಅವರು ತನ್ನ ಸಂಪಾದನೆಯಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡುತ್ತಿರುವುದರ ಫಲವಾಗಿ ಅವರ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.
ಜಿಲ್ಲೆಯಾದ್ಯಂತ ಜಿ.ಟಿ.ಎಂ ಮಳಿಗೆ ತೆರೆಯಲಿ-ಎಂ.ಬಿ ವಿಶ್ವನಾಥ ರೈ
ವಿಜಯಾ ಬ್ಯಾಂಕ್‌ನ ನಿವೃತ್ತ ಮೆನೇಜರ್ ಎಂ.ಬಿ ವಿಶ್ವನಾಥ ರೈ ಮಾತನಾಡಿ ಮರದ ಉದ್ಯಮದ ಮೂಲಕ ಒಳ್ಳೆಯ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಯೂಸುಫ್ ಗೌಸಿಯಾ ಅವರು ನಾಲ್ಕನೇ ಫರ್ನಿಚರ್ ಮಳಿಗೆ ಶುಭಾರಂಭಗೊಂಡಿದ್ದು ಮುಂದಕ್ಕೆ ಜಿಲ್ಲೆಯಾದ್ಯಂತ ಜಿ.ಟಿ.ಎಂ ಫರ್ನಿಚರ‍್ಸ್‌ನ ಮಳಿಗೆ ತೆರೆಯುವಂತಾಗಲಿ ಎಂದು ಹಾರೈಸಿದರು.
ಪೇಟೆ ಪಟ್ಟಣಗಳಲ್ಲಿ ಜಿಟಿಎಂ ಶಾಖೆ ತೆರೆಯಲಿ-ಎಂ.ಎಸ್ ಮಹಮ್ಮದ್
ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಜಿಟಿಎಂ ಫರ್ನಿಚರ‍್ಸ್‌ನ ಮಾಲಕ ಯೂಸುಫ್ ಗೌಸಿಯಾ ಅವರು ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಯಾಗಿದ್ದು ತನ್ನ ಸಂಪಾದನೆಯಲ್ಲಿ ಒಂದು ಭಾಗವನ್ನು ಬಡವರಿಗಾಗಿ ವಿನಿಯೋಗಿಸುತ್ತಾ ಬಂದಿದ್ದಾರೆ. ಇದು ಅವರ ಯಶಸ್ಸಿನ ಮೂಲವಾಗಿದ್ದು ಪೇಟೆ, ಪಟ್ಟಣಗಳಲ್ಲೂ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿ ಎಂದು ಹೇಳಿದರು.
ಜಿ.ಟಿ.ಎಂ ಫರ್ನಿಚರ‍್ಸ್ ಯಶಸ್ವಿಯಾಗಿ ಮುನ್ನಡೆಯಲಿ-ಹಸಂತಡ್ಕ
ಉದ್ಯಮಿ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ ನಮ್ಮ ಊರಿನಲ್ಲೇ ಉದ್ಯಮವನ್ನು ಪ್ರಾರಂಭಿಸಿ ನಾವು ಸ್ವಾವಲಂಬಿಗಳಾಗಬೇಕು ಎಂಬುವುದನ್ನು ಯೂಸುಫ್ ಗೌಸಿಯಾ ತೋರಿಸಿಕೊಟ್ಟಿದ್ದಾರೆ. ನಮ್ಮ ಮನೆಯ ಪಕ್ಕ ಪ್ರಾರಂಭಗೊಂಡ ಜಿ.ಟಿ.ಎಂ ಫರ್ನಿಚರ‍್ಸ್ ಮಳಿಗೆಯ ಉದ್ಯಮ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಯುಸುಫ್ ಗೌಸಿಯಾ ಎಲ್ಲ ಧರ್ಮದವರಿಗೂ ನೆರವು ನೀಡುತ್ತಾರೆ-ಕೃಷ್ಣಪ್ಪ
ನಿವೃತ್ತ ಅರಣ್ಯಾಧಿಕಾರಿ ಕೃಷ್ಣಪ್ಪ ಮಾತನಾಡಿ ಜಿಟಿಎಂನ ಮಾಲಕ ಯುಸುಫ್ ಗೌಸಿಯಾ ಅವರು ಎಲ್ಲ ಧರ್ಮದವರಿಗೂ ನೆರವು ನೀಡುವ ಉದಾತ್ತ ಗುಣ ಇರುವ ವ್ಯಕ್ತಿಯಾಗಿದ್ದು ಎಲ್ಲರೊಂದಿಗೆ ಉತ್ತಮವಾಗಿ ವ್ಯವಹರಿಸುವ ಇವರ ಉದ್ಯಮ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಜಿ.ಟಿ.ಎಂ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಲಿ-ಶಾಕಿರ್ ಹಾಜಿ
ಕುಂಬ್ರ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಮಾತನಾಡಿ ಸಮಾಜಕ್ಕೆ ಮತ್ತು ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡುತ್ತಾ ಬಂದಿರುವ ಯೂಸುಫ್ ಗೌಸಿಯಾ ಅವರು ತನ್ನ ಉದ್ಯಮದಲ್ಲಿ ಹೆಚ್ಚೆಚ್ಚು ಲಾಭ ಮಾಡುವ ಉದ್ದೇಶವನ್ನು ಬಿಟ್ಟು ಸಮಾಜದಲ್ಲಿರುವ ಬಡವರ ಪರವಾಗಿಯೂ ಚಿಂತಿಸುತ್ತಿರುವುದು ಮಾದರಿಯಾಗಿದೆ. ಇವರ ಎಲ್ಲ ಸಂಸ್ಥೆಗಳೂ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಹಾರೈಸಿದರು. ಸಂಸ್ಥೆಯ ಇನ್ನೊಂದು ವಿಭಾಗವನ್ನು ಪುತ್ತೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ ಕಾರ್ಯಪ್ಪರವರು ಉದ್ಘಾಟಿಸಿ ಶುಭ ಹಾರೈಸಿದರು.
ಪುಣಚ ಮಸೀದಿ ಖತೀಬ್ ಮಹಮ್ಮದ್ ದಾರಿಮಿ, ಮುಅಲ್ಲಿಂ ಸುಲೈಮಾನ್ ಉಸ್ತಾದ್, ಸದರ್ ಜಬ್ಬಾರ್ ಅಝ್‌ಹರಿ ಸಾಜ ಖತೀಬ್ ರವೂಫ್ ಹಾಶಿಮಿ, ಸದರ್ ಶಾಹುಲ್ ಹಮೀದ್ ಹಿಶಾಮಿ, ಸಾರ್ಯ ಅಲ್ ಅಮಲ್ ಮಸೀದಿ ಖತೀಬ್ ಸುಲೈಮಾನ್ ಸಅದಿ ಮಂಜ ಪಿಎಂಕೆ ದಅವಾ ಕಾಲೇಜು ಮೆನೇಜರ್ ಲತೀಫ್ ಹನೀಫಿ, ಮಂಜ ಅನ್ಸ್ವಾರಿಯಾ ಜುಮಾ ಮಸೀದಿ ಖತೀಬ್ ಸುಲೈಮಾನ್ ದಾರಿಮಿ, ಸದರ್ ಸತ್ತಾರ್ ಮುಸ್ಲಿಯಾರ್, ಮಂಜ ಪಿಎಂಕೆ ಮುದರ್ರಿಸ್ ಸಫ್ವಾನ್ ಜೌಹರಿ, ಪರಿಯಲ್ತಡ್ಕ ಖತೀಬ್ ಹಸೈನಾರ್ ಫೈಝಿ, ಡೆಮ್ಮಂಗರ ಮುದರ್ರಿಸ್ ಅಬ್ಬಾಸ್ ಸಅದಿ, ಉದ್ಯಮಿ ಶಿವರಾಮ ಆಳ್ವ, ಬಲ್ನಾಡು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ, ನಿರ್ದೇಶಕ ಹಕೀಂ ಬುಳೇರಿಕಟ್ಟೆ, ಪ್ರವೀಣ್‌ಚಂದ್ರ ಆಳ್ವ ಮುಂಡೇಲು, ಪುಣಚ ಮಸೀದಿ ಅಧ್ಯಕ್ಷ ಹಮೀದ್ ಎಂ.ಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಯೂಸುಫ್ ಹಾಜಿ ಕೈಕಾರ, ಸಾಜ ಮಸೀದಿ ಕಾರ್ಯದರ್ಶಿ ಅಬ್ಬು ಹಾಜಿ ಸಾಜ, ಯುಇಎ ಪುತ್ತೂರು ತಾಲೂಕು ಅಧ್ಯಕ್ಷ ಹಮೀದ್ ಸಾಜ, ಬಲ್ನಾಡು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇದ್ದುಕುಂಞಿ ಹಾಜಿ ಸಾಜ, ಸಾರ್ಯ ಮಸೀದಿ ಕೋಶಾಧಿಕಾರಿ ಅಬ್ದುಲ್ ಕುಂಞಿ ಸಾರ್ಯ, ಮಂಜ ಮಸೀದಿ ಉಪಾಧ್ಯಕ್ಷ ಇಸಾಕ್ ಬುಳೇರಿಕಟ್ಟೆ, ನಾರಾಯಣ ರೈ ಸಾಜ, ಅಕ್ಷಯ್ ರೈ ಸಾರ್ಯ, ಗಣೇಶ್ ಭಟ್ ಸಾಜ, ಬಲ್ನಾಡು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ನಾಟೆಕಲ್, ಯೂಸುಫ್ ಕೊರಿಂಗಿಲ, ಉಮರ್ ಬೆಳಿಯೂರುಕಟ್ಟೆ, ಮಂಜ ಮಸೀದಿ ಕಾರ್ಯದರ್ಶಿ ರಿಯಾಝ್ ಎ.ಕೆ, ಈಶ್ವರ ನಾಯ್ಕ ಸಾಜ, ಇಬ್ರಾಹಿಂ ರೋಯಲ್ ಜಿ.ಟಿ.ಎಂ ಫರ್ನಿಚರ‍್ಸ್‌ನ ಮಾಲಕ ಯೂಸುಫ್ ಗೌಸಿಯಾರವರ ತಾಯಿ ಆಮಿನ, ಅಣ್ಣ ಅಬ್ದುಲ್ ರಹಿಮಾನ್ ಹಾಗೂ ಮಂಜ ಪಿಎಂಕೆ ದರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿ.ಟಿ.ಎಂ ಫರ್ನಿಚರ‍್ಸ್‌ನ ಮಾಲಕ ಯುಸುಫ್ ಗೌಸಿಯಾ ಸಾಜ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸಿಬ್ಬಂದಿಗಳಾದ ಗಣೇಶ್, ಸಂದೀಪ್, ಸಫ್ವಾನ್, ಅನ್ಸೀಫ್, ಅಶ್ಫಕ್, ನಾಗೇಶ ಬುಳೇರಿಕಟ್ಟೆ ಸಹಕರಿಸಿದರು.
ಜಿ.ಟಿ.ಎಂ ವುಡ್ ಫರ್ನಿಚರ‍್ಸ್ ಮಳಿಗೆಯು ಪುಣಚದ ಗರಡಿ ಬಳಿ, ಬೆಳಿಯೂರುಕಟ್ಟೆಯ ಖುಷಿ ಕಾಂಪ್ಲೆಕ್ಸ್‌ನಲ್ಲಿ, ಬೆಟ್ಟಂಪಾಡಿ ತಲಪಾಡಿಯಲ್ಲಿ ಕಾರ್ಯಾಚರಿಸುತ್ತಿದ್ದು ಇದೀಗ ನಾಲ್ಕನೇ ಮಳಿಗೆ ಬೆಳಿಯೂರುಕಟ್ಟೆಯ ವೈಎಂಕೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿದೆ. ನಮ್ಮ ಸಂಸ್ಥೆಯು ಅನೇಕ ಸಮಯಗಳಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ನಮ್ಮಲ್ಲಿ ವುಡನ್ ಕೋಟ್, ಸೋಫಾ ಸೆಟ್, ಡೈನಿಂಗ್ ಟೇಬಲ್, ವಾರ್ಡ್‌ರೋಬ್, ವುಡನ್ ಡೋರ್, ವುಡನ್ ವಿಂಡೋ, ವಿಂಡೋ ಫ್ರೇಮ್ಸ್, ಡೋರ್ ಫ್ರೇಮ್ಸ್ ಸೇರಿದಂತೆ ವಿವಿಧ ವುಡ್ ಫರ್ನಿಚರ‍್ಸ್‌ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಗ್ರಾಹಕರು ಸಹಕಾರ ನೀಡಬೇಕಾಗಿ ವಿನಂತಿ.
-ಯೂಸುಫ್ ಗೌಸಿಯಾ ಸಾಜ, ಮಾಲಕರು