ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದ ನೈಋತ್ಯ ಭಾಗದ ‘ಗಣಪತಿ ಗುಡಿ’ಯಲ್ಲಿರುವ ಅಭೀಷ್ಟದಾಯಕ ಶಾಂತಗುಣಭರಿತ, ಪ್ರಸನ್ನ ಮುದ್ರೆಯಲ್ಲಿರುವ ವದನನಾಗಿರುವ ಈ ಪ್ರಸನ್ನ ಬಾಲಗಣಪತಿ ನಾಡಿನ ಗಣಪತಿ ವಿಗ್ರಹಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು ಗಣೇಶ ಹಬ್ಬದ ದಿನ 108 ಕಾಯಿ ಗಣಪತಿ ಹೋಮ ಗಣಪತಿಯ ಗುಡಿ ಮುಂದೆ ನಡೆಯಿತು.
ಆ.31ರಂದು ನಡೆದ ಗಣಪತಿ ಹೋಮವು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಮತ್ತು ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ್ ರೈ ಬಳ್ಳಮಜಲು, ರಾಮದಾಸ್ ಗೌಡ, ಬಿ.ಕೆ.ವೀಣಾ, ಡಾ. ಸುಧಾ ಎಸ್ ರಾವ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.